Advertisement

ಅಪ್ನಾ ಹಾಲಿಡೇಸ್‌: ಅಮೆರಿಕ ಕೆನಡಾ ಮಾಹಿತಿ ಪತ್ರ ಬಿಡುಗಡೆ

07:15 AM Jul 27, 2017 | Team Udayavani |

ಉಡುಪಿ: ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಜಾಕಾಲೀನ ಪ್ರವಾಸಗಳ ಪ್ರವರ್ತಕ “ಅಪ್ನಾ ಹಾಲಿಡೇಸ್‌’ ತನ್ನ ದಶಕದ ಸೇವೆಯ ಹೆಗ್ಗುರುತಿಗಾಗಿ ಅಮೇರಿಕಾ-ಕೆನಡಾ ದೇಶಗಳ ಪ್ರವಾಸವನ್ನು ಅಕ್ಟೋಬರ್‌ನಲ್ಲಿ ಏರ್ಪಡಿಸುತ್ತಿರುವ ಪ್ರಯುಕ್ತ ಸಂಸ್ಥೆಯ ಉಡುಪಿ ಕಚೇರಿಯಲ್ಲಿ “ಅಮೇರಿಕ-ಕೆನಡಾ ಪ್ರವಾಸ’ದ ಮಾಹಿತಿ ಪತ್ರ ಬಿಡುಗಡೆ ಸಮಾರಂಭ ನಡೆಯಿತು.
ಉಡುಪಿ ಪ್ರಸಾದ್‌ ನೇತ್ರಾಲಯದ ನೇತ್ರತಜ್ಞ ಡಾ| ಕೃಷ್ಣಪ್ರಸಾದ್‌ ಅವರು ಮಾಹಿತಿ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

Advertisement

ಮರವಂತೆ ನಾಗರಾಜ್‌ ಹೆಬ್ಟಾರ್‌, ಸಂಸ್ಥೆಯ ಸಿಬಂದಿಗಳಾದ ಫ್ರೀನಾ ಪಿಂಟೋ, ಸೌಮ್ಯಾ, ವಿನೋದ ಶೆಟ್ಟಿ, ಕಾರ್ತಿಕ್‌ ಆಚಾರ್ಯ, ಅಭಿಷೇಕ್‌, ಉಷಾ ಭಟ್‌ ಉಪಸ್ಥಿತರಿದ್ದರು. ನಿರ್ದೇಶಕ ಎಂ. ಅಶ್ವಿ‌ನ್‌ ಹೆಬ್ಟಾರ್‌ ಸ್ವಾಗತಿಸಿದರು. ಸಿಇಒ ಮಂಜುಳಾ ನಾಗರಾಜ್‌ ಅತಿಥಿಗಳನ್ನು ಗೌರವಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next