Advertisement

ಎಪಿಎಂಸಿ ದಿನಸಿ ವರ್ತಕರ ಪ್ರತಿಭಟನೆ

01:03 PM Feb 18, 2020 | Suhan S |

ಶಿವಮೊಗ್ಗ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ದಿನಸಿ ವ್ಯವಹಾರ ಮಾಡಲು ಇರುವ ತೊಂದರೆ ನಿವಾರಿಸುವಂತೆ ಒತ್ತಾಯಿಸಿ ಸೋಮವಾರ ದಿನಸಿ ವರ್ತಕರ ಸಂಘದ ವತಿಯಿಂದ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ನಾವುಗಳು ಸುಮಾರು 40ರಿಂದ 50 ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹಾರ ಮಾಡುತ್ತಿದ್ದೇವೆ. ಹಿಂದೆ ಬಿಎಚ್‌ ರಸ್ತೆಯಲ್ಲಿ ನಮ್ಮ ವ್ಯವಹಾರ ನಡೆಸುತ್ತಿದ್ದೆವು. ಅಂದಿನ ಕಾರ್ಯದರ್ಶಿಗಳು ನಮ್ಮನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಬೇಕು ಎಂದು ಕರೆ ತಂದಿದ್ದರು ಎಂದು ತಿಳಿಸಿದರು.

ಅಲ್ಲಿಂದ ಇಲ್ಲಿಯವರೆಗೂ ನಾವು ಹಿಂದೆ ಸೂಚಿಸಿದ ಕೃಷಿ ಉತ್ಪನ್ನಗಳ ಜತೆಗೆ ಅದಕ್ಕೆ ಪೂರಕ ವಸ್ತುಗಳನ್ನು ಸಹ ಮಾರಾಟ ಮಾಡುತ್ತಿದ್ದೇವೆ. ಇಲ್ಲಿಯ ತನಕ ದಿನಸಿ ವ್ಯವಹಾರ ಹೊರತುಪಡಿಸಿ ಬೇರೆ ಯಾವುದೇ ವ್ಯವಹಾರ ಮಾಡುತ್ತಿಲ್ಲ ಎಂದು ತಿಳಿಸಿದರು.

ಆದರೆ ಕೆಲವು ವ್ಯಕ್ತಿಗಳು ಅನಾವಶ್ಯಕವಾಗಿ ದೂರು ಸಲ್ಲಿಸಿ ನಮಗೆ ತೊಂದರೆ ಕೊಡುತ್ತಿದ್ದಾರೆ . ಎಪಿಎಂಸಿ ಮಾರುಕಟ್ಟೆಗೆ ಮಲೆನಾಡಿನಲ್ಲಿ ರೈತರು ಅಡಿಕೆ ಮಾರಾಟ ಮಾಡಿ ಅವರಿಗೆ ಅವಶ್ಯಕತೆ ಇರುವ ದಿನಸಿ ಸಾಮಾನುಗಳನ್ನು ಮತ್ತು ಪಶು ಆಹಾರ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಎಪಿಎಂಸಿ ಪ್ರಾಂಗಣದಿಂದ ನಗರದ ವ್ಯಾಪಾರ ಸ್ಥಳ ಸುಮಾರು ನಾಲ್ಕರಿಂದ ಐದು ಕಿಮೀ ದೂರವಿದೆ. ಅಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲಿಗೆರೈತರು ಹೋಗಿ ದಿನಸಿ ಪದಾರ್ಥಗಳು ಮತ್ತು ಪಶು ಆಹಾರ ಖರೀದಿಸಲು ತೊಂದರೆಯಾಗುತ್ತದೆ. ಹೀಗಾಗಿ ಎಪಿಎಂಸಿ ಪ್ರಾಂಗಣದಲ್ಲಿ ಅವರಿಗೆ ಎಲ್ಲಾ ತರಹದ ಅನುಕೂಲವಾಗುವುದರಿಂದ ರೈತರು ಎಪಿಎಂಸಿ ಪ್ರಾಂಗಣಕ್ಕೆ ಬಂದು ವ್ಯವಹಾರ ಮಾಡುತ್ತಿ¨ªಾರೆ ಎಂದು ತಿಳಿಸಿದರು.

ನಾವು ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನಗಳ ಜತೆಯಲ್ಲಿ ಅದಕ್ಕೆ ಪೂರಕ ವಸ್ತುಗಳಾದ ಖಾದ್ಯತೈಲ ಮತ್ತು ಗೋಧಿ ಪದಾರ್ಥಗಳಾದ ಗೋಧಿ ಹಿಟ್ಟು, ರವೆ, ಮೈದಾ ಮತ್ತು ಸಕ್ಕರೆ, ಉಪ್ಪು ಮತ್ತು ಪಶು ಆಹಾರಗಳಾದ ಹತ್ತಿ ಹಿಂದಡಿ, ಶೇಂಗಾ ಹಿಂಡಿ, ಗೋಧಿ ಬೂಸಾ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಇದರಿಂದಾಗಿ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ನಾವುಗಳು ಯಾವುದೇ ಕಾರಣಕ್ಕೂ ಎಪಿಎಂಸಿ ಪ್ರಾಂಗಣದಲ್ಲಿ ತಂಬಾಕು ಉತ್ಪನ್ನ, ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುತ್ತಿಲ್ಲ ಎಂದು ಹೇಳಿದರು. ಎಪಿಎಂಸಿ ಸಮಿತಿಯವರು ಪೂರಕ ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ನೀಡಿದರೂ ಸಹ ಎಪಿಎಂಸಿ ಅಧಿಕಾರಿಗಳು ನಮಗೆ ಪೂರಕ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ರಾಜ್ಯದ ಇತರೆ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತೆ ನಮಗೂ ಸಹ ವ್ಯಾಪಾರ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರಲ್ಲದೆ, ನಮ್ಮ ವ್ಯವಹಾರದಿಂದ ಯಾವುದೇ ರೈತರಿಗೆ ಆಗಲಿ ಸಾರ್ವಜನಿಕರಿಗಾಗಿ ತೊಂದರೆಯಾಗುತ್ತಿಲ್ಲ ಎಂದು ಹೇಳಿದರು.

ರವಿ ಟ್ರೇಡರ್ಸ್‌, ಸುಬ್ರಹ್ಮಣ್ಯ ಸ್ಟೋರ್, ನವೀನ್‌ ಟ್ರೇಡರ್ಸ್‌, ನಿರಂಜನ ಟ್ರೇಡರ್ಸ್‌ ಕನ್ನಿಕಾ ಟ್ರೇಡರ್ಸ್‌, ಚಿದಾನಂದ ಟ್ರೇಡರ್ಸ್‌, ಮಂಜುನಾಥ ಟ್ರೇಡಿಂಗ್‌ ಕಂಪನಿ ವಿಕಾಸ್‌ ಟ್ರೇಡರ್ಸ್‌ನ ಮಾಲೀಕರು, ಕೆಲಸಗಾರರು ಹಾಗೂ ಎಪಿಎಂಸಿ ದಿನಸಿ ವರ್ತಕರ ಸಂಘದ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next