Advertisement

ಎಪಿಎಂಸಿ ಅಭಿವೃದ್ಧಿಗೆ ಶ್ರಮ: ಸುಧಾಕರ್‌

06:08 AM Jun 11, 2020 | Lakshmi GovindaRaj |

ಚಿಂತಾಮಣಿ: ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಆರ್ಥಿಕ ಸಬಲರಾಗಬೇಕು. ಸಾರ್ವಜನಿಕರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ ಮಾರುಕಟ್ಟೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮಾರುಕಟ್ಟೆ ಆಡಳಿತ  ಸಮಿತಿ ಶ್ರಮಿಸುತ್ತಿದೆ. ರೈತರ ಶ್ರಮಕ್ಕೆ ತಕ್ಕಂತೆ ಬೆಲೆ ದೊರೆಯುವಂತೆ ಮಾಡಬೇಕೆಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ನುಡಿದರು.

Advertisement

ಮೂರನೇ ಹಂತದ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಅಧ್ಯಕ್ಷರ ಸ್ಥಾನಕ್ಕೆ ಗಂಡ್ರಗಾನಹಳ್ಳಿಯ ಶ್ರೀರಾಮರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ತಮ್ಮೇಪ್ಪಲ್ಲಿ ಮಂಜುನಾಥರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದ ತಮ್ಮ ಬೆಂಬಲಿಗರನ್ನು ಅಭಿನಂದಿಸಿ ಮಾತನಾಡಿದರು. ಎಪಿಎಂಸಿ ನೂತನ ಅಧ್ಯಕ್ಷ  ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ, ಈಗಾಗಲೇ ಮಾರುಕಟ್ಟೆಯಲ್ಲಿ ಶೇ.75 ಎಷ್ಟು ಅಭಿವೃದ್ಧಿ ಕೆಲಸವಾಗಿದೆ.

ನನ್ನ ಅವಧಿಯಲ್ಲಿ ಬಾಕಿ ಉಳಿದ ಅಭಿವೃದ್ಧಿ ಕೆಲಸವನ್ನು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಸಂಸದ  ಮುನಿಸ್ವಾಮಿ ಮಾರ್ಗದರ್ಶನದಲ್ಲಿ ಹಾಗೂ ಸದಸ್ಯರ, ಮುಖಂಡರ ನೆರವಿನಿಂದ ಕೆಲಸ ಮಾಡುತ್ತೇನೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಯರ್ರಯಗಾರಹಳ್ಳಿ ರವಿ, ಮಾಜಿ ಉಪಾಧ್ಯಕ್ಷ ನಾಗರಾಜ್‌, ಶ್ರೀನಿವಾಸ್‌ರೆಡ್ಡಿ,  ಸದಸ್ಯರು, ಜಿಪಂ ಸದಸ್ಯ ಶಿವಣ್ಣ, ಸೂಲ್‌ ಸುಬ್ಟಾರೆಡ್ಡಿ,

ಶ್ರೀನಿವಾಸ್‌, ಪವಿತ್ರ, ಮಾಜಿ ಅಧ್ಯಕ್ಷ ಚಿನ್ನಪ್ಪ, ಕೆಎಂಎಫ್ ನಿರ್ದೇಶಕ ಅಶ್ವತ್ಥನಾರಾಯಣಬಾಬು, ಮಾದಮಂಗಲ ಚಂದ್ರಪ್ಪ, ಡಾಬಾ ನಾಗರಾಜ್‌, ಬೂರಗಮಾಕಲಹಳ್ಳಿ ಮಂಜುನಾಥ್‌ರೆಡ್ಡಿ, ಮುರುಗಮಲ್ಲ ಕೃಷ್ಣಮೂರ್ತಿ  ಸೇರಿದಂತೆ ಮತ್ತಿತರರು ಇದ್ದರು. ಚುನಾವಣಾಧಿಕಾರಿಯಾಗಿ ದಂಡಾಧಿಕಾರಿ ಹನುಮಂತರಾಯಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಸಿ.ರಾಮದಾಸ್‌, ಕಾರ್ಯದರ್ಶಿ ಆರ್‌.ಉಮಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next