Advertisement

ಮೂಲ ಸೌಕರ್ಯ ವಂಚಿತ ಎಪಿಎಂಸಿ

03:04 PM Jun 02, 2019 | Suhan S |

ಹನುಮಸಾಗರ: ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದೆ ಹನುಮಸಾಗರ. ಆದರೆ ಇಲ್ಲಿಬ ಉಪಕೃಷಿ ಉತ್ಪನ್ನ ಮಾರುಕಟ್ಟೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ರೈತರಿಗೆ ಈ ಮಾರುಕಟ್ಟೆ ಇದ್ದು ಇಲ್ಲದಂತಾಗಿದೆ.

Advertisement

ಹೌದು ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಉಪಕೃಷಿ ಉತ್ಪನ್ನ ಮಾರುಕಟ್ಟೆ ವರದಾನವಾಗಿ ಪರಿಣಮಿಸಬೇಕಿತ್ತು. ಆದರೆ ಈ ಮಾರುಕಟ್ಟೆ ಶಾಪವಾಗಿ ಪರಿಣಮಿಸಿದೆ.

ಬೆಳೆಗೆ ಸೂಕ್ತ ಬೆಲೆ ಸಿಗಬೇಕು, ಒಂದು ವೇಳೆ ಸೂಕ್ತ ಬೆಲೆ ಸಿಗದಿದ್ದಾಗ ಬೆಲೆ ಸಿಗುವವರೆಗೂ ಕೃಷಿ ಉತ್ಪನ್ನ ದಾಸ್ತಾನು ಮಾಡುವ ಉದ್ದೇಶದಿಂದ, ರೈತರ ಸತತ ಹೋರಾಟದ ಫಲವಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ 90 ಲಕ್ಷ ವೆಚ್ಚದಲ್ಲಿ 1000 ಮೆಟ್ರಿಕ್‌ ಗೋದಾಮು ನಿರ್ಮಿಸಲಾಗಿತ್ತು. ಗೋದಾಮು ನಿರ್ಮಾಣವಾಗಿ ವರ್ಷಗಳೇ ಗತಿಸಿದರೂ ಇನ್ನೂ ಉದ್ಘಾಟನೆಯಾಗಿಲ್ಲ. ಇದರಿಂದಾಗಿ ರೈತರು ಅನಿವಾರ್ಯವಾಗಿ ಸಿಕ್ಕಷ್ಟೇ ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡಿ ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ

ಎಪಿಎಂಸಿಗೆ ಬರುವ ರೈತರಿಗೆ ಉಳಿದುಕೊಳ್ಳಲು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು, ಸಭೆ ಸಮಾರಂಭಗಳನ್ನು ಏರ್ಪಡಿಸಲು ರೈತ ಭವನ ನಿರ್ಮಿಸಲಾಗಿದೆ. ಆದರೆ ರೈತ ಭವನಕ್ಕೆ ಮೂಲಸೌಕರ್ಯ ಒದಗಿಸದೇ ಅಧಿಕಾರಿಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಇದರ ಫಲವಾಗಿ ರೈತ ಭವನದ ಮುಂಭಾಗ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಕೃಷಿ ಉತ್ಪನ್ನ ಉಪಮಾರುಕಟ್ಟೆ ಆವರಣದಲ್ಲಿ ಸಂಜೆಯಾದರೇ ಕುಡುಕರ ಹಾವಳಿ ಶುರುವಾಗುತ್ತದೆ. ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿವೆ. ಉದ್ಘಾಟನೆಯಾಗದ ಮಳಿಗೆ: ಹನುಮಸಾಗರ ಕೃಷಿ ಉತ್ಪನ್ನ ಉಪಮಾರುಕಟ್ಟೆ ಆವರಣದಲ್ಲಿ 22 ಲಕ್ಷ ರೂ. ಅನುದಾನದಲ್ಲಿ 5 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಮಳಿಗೆಯ ಮುಂಭಾಗದಲ್ಲಿ ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಯಲ್ಲಿ ಕೆಲವರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ನಾವು ಮಳಿಗೆಗಳ ಟೆಂಡರ್‌ ಪ್ರಕ್ರಿಯೆ ಮಾಡುವ ಸಂದರ್ಭದಲ್ಲಿ ಗ್ರಾಪಂನವರ ಗಮನಕ್ಕೆ ತಂದು ತೆರವುಗೊಳಿಸಲು ಸೂಚಿಸಲಾಗುವುದು ಎನ್ನುವುದು ಎಪಿಎಂಸಿ ಅಧಿಕಾರಿಗಳು ತಿಳಿಸುತ್ತಾರೆ.

Advertisement

ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿತ್ತು. ಆದರೆ ಅಂತರ್ಜಲ ಕುಸಿತದಿಂದಾಗಿ ಬೋರ್‌ವೆಲ್ನಲ್ಲಿ ನೀರಿಲ್ಲದ ಕಾರಣ ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ.

•ವಸಂತಕುಮಾರ ವಿ. ಸಿನ್ನೂರ

Advertisement

Udayavani is now on Telegram. Click here to join our channel and stay updated with the latest news.

Next