Advertisement
ನಗರದ ಸೋಮವಾರ ಪೇಟೆಯ ಬಳಿ ಯುನಿರ್ವಸ್ ಶಾಲೆಯಲ್ಲಿ ಬುಧವಾರ ಮತಗಳ ಎಣಿಕೆ ನಡೆಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆ ಲುವಿನ ನಗೆ ಬೀರಿದೆ. ಬಿಜೆಪಿ ನಾಲ್ಕು ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡರೆ, ವರ್ತಕರ ಕ್ಷೇತ್ರದಿಂದ ಪಕ್ಷೇತರ ಅಭ್ಯ ರ್ಥಿ ವೆಂಕಟರಾವ್ ಜಯಗಳಿಸಿದ್ದಾರೆ. ಇವರು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಕ್ಷೇತ್ರಗಳ ಫಲಿತಾಂಶಗಳು ಒಂದೊಂದಾಗಿ ಪ್ರಕಟವಾದವು. ವಿಜೇತರ ಪಟ್ಟಿ: ಚಾಮರಾಜನಗರ ಕ್ಷೇತ್ರ ದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಮನೋಜ್ ಪಟೇಲ್ 396 ಮತಗಳ ಅಂತರದಿಂದ ಜಯಗಳಿಸಿದರು. ಬದನಗುಪ್ಪೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ 140 ಮತಗಳ ಅಂತರದಿಂದ ಗೆದ್ದರು.
Related Articles
Advertisement
ಹೊಂಗನೂರು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಎಂ. ರವಿಶಂಕರ ಮೂರ್ತಿ 120 ಮತಗಳ ಅಂತರದಿಂದ, ಉಮ್ಮತ್ತೂರು ಕ್ಷೇತ್ರದಿಂದ ಬಿಜೆಪಿ ಬೆಂಬಲಿತೆ ಕಲಾವತಿ ಕೇವಲ 2 ಮತಗಳ ಅಂತರದಿಂದ, ಯಳಂದೂರು ಕಸಬಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಎಂ. ಮಹೇಶ್ 485 ಮತಗಳ ಅಂತರದಿಂದ, ಅಗರ ಕ್ಷೇತ್ರ ದಿಂದ ಕಾಂಗ್ರೆಸ್ ಬೆಂಬಲಿತ ಎಲ್.ರಾಮಚಂದ್ರ 280 ಮತಗಳ ಅಂತರದಿಂದ ಹಾಗೂ ವರ್ತಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ವೆಂಕಟರಾವ್ 47 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಯಗಳಿಸಿದ ಎಲ್ಲರಿಗೂ ಚುನಾವಣಾಧಿಕಾರಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಪ್ರಮಾಣ ಪತ್ರಗಳನ್ನು ನೀಡಿ ಶುಭ ಕೋರಿದರು.
ವಿಜಯೋತ್ಸವ: ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು ಮತ ಎಣಿಕೆ ಕೇಂದ್ರ ಮುಂದೆ ಜಮಾಯಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳು ರಾರಾಜಿಸಿದವು. ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ಹೊರ ಬರುತ್ತಿದ್ದಂತೆ ಆಯಾಯ ಪಕ್ಷದ ಕಾರ್ಯಕರ್ತರು ಮುಖಂಡರು ಹೂವಿನ ಹಾರ ಹಾಕಿ ಪಕ್ಷದ ಶಲ್ಯ ತೊಡಿಸಿ, ಸಿಹಿ ತಿನ್ನಿಸಿ, ಜಯಕಾರ ಕೂಗಿ ಸಂಭ್ರಮಿಸಿದರು.
1,674 ಮತಗಳ ಅಂತರದಿಂದ ಭರ್ಜರಿ ಗೆಲುವುಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ಎಪಿಎಂಸಿ ಎರಡೂ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ ಶ್ರೇಯ ನಾಗವಳ್ಳಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲೂರು ಎ.ಎಸ್. ಪ್ರದೀಪ್ ಅವರದು. ಪ್ರದೀಪ್ 1674 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ ಒಟ್ಟು ಚಲಾಯಿತ ಮತಗಳು 3436. ಸಿಂಧುವಾದ ಮತಗಳು 3,406. ಈ ಮತಗಳಲಿ ಪ್ರದೀಪ್ ಪಡೆದ ಮತಗಳು 2540, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಜೆ.ಎನ್. ಶಿವಕುಮಾರ್ ಪಡೆದ ಮತಗಳು 866. ಚಾಮರಾಜನಗರ ಎಪಿಎಂಸಿ ಚುನಾವಣೆಯಲ್ಲಿ ಹೊಂಗನೂರು ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಹೊಮ್ಮದ ಜಿ.ಎಂ. ರವಿಶಂಕರಮೂರ್ತಿ ಕಾರ್ಯಕರ್ತರು ಸನ್ಮಾನಿಸಿ ವಿಜಯೋತ್ಸವ ಆಚರಣೆ ಮಾಡಿದರು.