Advertisement

ಭಾವಾಂತರ ಯೋಜನೆಗೆ ಆಗ್ರಹಿಸಿ ಎಪಿಎಂಸಿ ಬಂದ್‌-ಪ್ರತಿಭಟನೆ

11:52 AM Jan 08, 2019 | Team Udayavani |

ಕಲಬುರಗಿ: ತೊಗರಿ ಸೇರಿದಂತೆ ಇತರ ದವಸ ಧಾನ್ಯಗಳನ್ನು ಭಾವಾಂತರ ಯೋಜನೆಯಡಿ ಸೇರಿಸುವ ಮೂಲಕ ರೈತರು ಹಾಗೂ ವ್ಯಾಪಾರೀಗಳ ಜತೆಗೆ ದಾಲ್‌ಮಿಲ್‌ಗ‌ಳ ಹಿತ ಕಾಪಾಡುವಂತೆ ಆಗ್ರಹಿಸಿ ನಗರದ ನೆಹರು ಗಂಜ್‌ನ ಎಲ್ಲ ಎಪಿಎಂಸಿ ಎಲ್ಲ ವಹಿವಾಟು ಬಂದ್‌ ಮಾಡಿ ವ್ಯಾಪಾರಿಗಳು, ದಾಲ್‌ಮಿಲ್‌ದವರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಭಾವಾಂತರ ಯೋಜನೆ ಜಾರಿಗೆ ಆಗ್ರಹಿಸಿ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಇತರ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಇತರ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ ಬೇಡಿಕೆ ಕಾರ್ಯರೂಪಕ್ಕೆ ಬಾರದೇ ಇರುವುದರಿಂದ ಸೋಮವಾರ ರಾಜ್ಯದ ಅರ್ಧಕ ಭಾಗಕ್ಕಿಂತಲೂ ಹೆಚ್ಚಿನ ಭಾಗದಲ್ಲಿ ಎಪಿಎಂಸಿ ಬಂದ್‌ ಮಾಡಿ ಪ್ರತಿಭಟನೆಗೆ ಇಳಿಯಲಾಗಿದೆ. ಈಗಲಾದರೂ ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದೇ ಮೀನಾ ಮೇಷ ಏಣಿಸಲು ಮುಂದಾದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ರೈತ ಸಂಘಗಳು, ಕೃಷಿ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ದಾಲ್‌ಮಿಲ್‌ ಮಾಲೀಕರು, ಹೈದರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇತರ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ನೆಹರು ಗಂಜ್‌ನ ಹನುಮಾನ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಗುಲಬರ್ಗಾ ದಾಲ್‌ಮಿಲ್ಲರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಚಿತಂಬರರಾವ್‌ ಪಾಟೀಲ ಮರಗುತ್ತಿ, ಸರ್ಕಾರ ಈಗಲೇ ಭಾವಾಂತರ ಯೋಜನೆಗೆ ತೊಗರಿ ಅಳವಡಿಸುವುದರ ಮೂಲಕ ರೈತರಿಗೆ ಹಾಗೂ ವ್ಯಾಪಾರಿಗಳನ್ನು ಸಂರಕ್ಷಿಸಬೇಕು. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದರಕ್ಕಿಂತ ಭಾವಾಂತರ ಯೋಜನೆಯೇ ಸರಳವಾಗಿದೆ. 

ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಬೆಂಬಲ ಬೆಲೆಯಲ್ಲಿ ಶೇ. 25ರಷ್ಟು ತೊಗರಿ ಮಾತ್ರ ಖರೀದಿಸಲಾಗುತ್ತಿದೆ. ಈ ಮೂಲಕ ರೈತರನ್ನು ಶೋಷಣೆ ಮಾಡುವಂತಾಗುತ್ತಿದೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗಿರುವ ಭಾವಾಂತರ ಯೋಜನೆ ಕಾರ್ಯರೂಪಕ್ಕೆ ತಂದು ರೈತರು, ವ್ಯಾಪಾರಿಗಳ ಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement

ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ಬಸವರಾಜ ಇಂಗಿನ್‌, ಶಿವಶರಣಪ್ಪ ನಿಗ್ಗುಡಗಿ, ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಎಪಿಎಂಸಿ ಉಪ ಸಮಿತಿ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಪ್ರಮುಖ ಪದಾಧಿಕಾರಿಗಳಾದ ಚನ್ನಮಲ್ಲಿಕಾರ್ಜುನ ಅಕ್ಕಿ, ಶ್ರೀಮಂತ ಉದನೂರ, ಶಿವಕುಮಾರ ಘಂಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next