Advertisement

ಎಪಿಎಲ್ ‘ಅನ್ನ ಭಾಗ್ಯ’ಯೋಜನೆ ಅಕ್ಕಿಗೆ ಕತ್ತರಿ

02:31 AM Jul 23, 2019 | Sriram |

ಗ್ರಾಮೀಣ ಭಾಗದಲ್ಲಿ ಎಪಿಎಲ್‌ ಕಾರ್ಡ್‌ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲ. ಇದಕ್ಕೆ ಕಾರಣ ಕೆಲವು ಬಿಪಿಎಲ್‌ ಕಾರ್ಡ್‌ದಾರರು ಅಕ್ಕಿ ಪಡೆಯದೆ ಇರುವುದು. ಇದರಿಂದಾಗಿ ಅವರ ರೇಶನ್‌ ಅಂಗಡಿಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಪಡಿತರ ಸಾಮಗ್ರಿ ನೋಂದಾಯಿತ ಎಪಿಎಲ್‌ ಕಾರ್ಡ್‌ದಾರರಿಗೆ ನೀಡಲಾಗುತ್ತಿದೆ. ಆದರೆ ನಗರದಲ್ಲಿ ಬಿಪಿಎಲ್‌ ಕಾರ್ಡ್‌ ಗಿಂತ ಎಪಿಎಲ್‌ ಕಾರ್ಡ್‌ದಾರರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅಕ್ಕಿ ಸಂಗ್ರಹವಾಗುತ್ತಿಲ್ಲ.

Advertisement

ಉಡುಪಿ: ಜಿಲ್ಲೆಯರೇಶನ್‌ಅಂಗಡಿಗಳಲ್ಲಿ ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಯೋಜನೆಯ ಅಡಿ ಎಪಿಎಲ್ ಕಾರ್ಡ್‌ ದಾರರಿಗೆ ಅಕ್ಕಿ ವಿತರಣೆಯಾಗುತ್ತಿಲ್ಲ.

ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವ ಅಕ್ಕಿ ಹಂಚಿಕೆಯಾಗಿಲ್ಲ. ಇರುವ ಕ್ಲೋಸಿಂಗ್‌ ಸ್ಟಾಕ್‌ ಬಳಸಿಕೊಳ್ಳುವಂತೆ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಆದೇಶ ಬಂದಿದೆ. ಆದರೆ ಉಡುಪಿಯಲ್ಲಿರುವ ಕ್ಲೋಸಿಂಗ್‌ ಸ್ಟಾಕ್‌ನಲ್ಲಿ ಜಿಲ್ಲೆಯ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವ ಪ್ರಮಾಣದ ಅಕ್ಕಿ ದಾಸ್ತಾನಿಲ್ಲ. ಇದು ಸಮಸ್ಯೆಗೆ ಕಾರಣ. ಇಂತಹುದೇ ಸಮಸ್ಯೆ ರಾಜ್ಯದ ಇನ್ನೂ ಹಲವು ಜಿಲ್ಲೆಗಳಿಗೂ ತಟ್ಟಿರುವ ಸಾಧ್ಯತೆ ಇದೆ.

ಅಕ್ಕಿ ದಾಸ್ತಾನು ಕೊರತೆ
ಜಿಲ್ಲೆಯಲ್ಲಿ ಒಟ್ಟು ಎಪಿಎಲ್ 72,050 ಕಾರ್ಡ್‌ಗಳಿವೆ. ಹಲವು ತಿಂಗಳಿನಿಂದ ಕ್ಲೋಸಿಂಗ್‌ ಸ್ಟಾಕ್‌ ಅಡಿಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಕೆಲವು ರೇಶನ್‌ ಅಂಗಡಿಗಳಲ್ಲಿ ಎಲ್ಲ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ಅಕ್ಕಿ ದಾಸ್ತಾನಿಲ್ಲದೆ ಎಪಿಎಲ್ ಕಾರ್ಡ್‌ ದಾರರು ಪರದಾಡುವಂತಾಗಿದೆ.

ಅಕ್ಕಿ ಖರೀದಿಗೆ ಪತ್ರ
ಪ್ರಸ್ತುತ ಜಿಲ್ಲೆಯಿಂದ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಖರೀದಿಸಿ ನೀಡುವಂತೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದ್ದಾರೆ.

Advertisement

ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್‌ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲದ ಕಾರಣ ಇರುವ ದಾಸ್ತಾನು ಸಾಕಾಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಿದ್ದು, ದಾಸ್ತಾನು ಸಾಲುತ್ತಿಲ್ಲ.

2.2 ಲಕ್ಷ ಕಾರ್ಡ್‌ಗಳಿವೆ
ಜಿಲ್ಲೆಯಲ್ಲಿ ಒಟ್ಟು 2,29,508 ಕಾರ್ಡ್‌ಗಳಿವೆ. ಉಡುಪಿ ತಾಲೂಕಿನಲ್ಲಿ ಅಂತ್ಯೋದಯ 11,149, ಬಿಪಿಎಲ್ 64,448, ಎಪಿಎಲ್ 66,451, ಕಾರ್ಕಳದಲ್ಲಿ ಅಂತ್ಯೋದಯ 4,164, ಬಿಪಿಎಲ್ 33,064, ಎಪಿಎಲ್ 19,559,ಕುಂದಾಪುರದಲ್ಲಿ ಅಂತ್ಯೋ ದಯ 13,596, ಬಿಪಿಎಲ್ 59,945, ಎಪಿಎಲ್ 23,575 ಕಾರ್ಡ್‌ಗಳಿವೆ.

ಎಪಿಎಲ್ 15,000 ನೊಂದಣಿ
ಜಿಲ್ಲೆಯಲ್ಲಿ ಒಟ್ಟು 72,050 ಎಪಿಎಲ್ ಕಾರ್ಡ್‌ಗಳಿವೆ. ಕೇವಲ 15,309 ಕಾರ್ಡ್‌ದಾರರು ಮಾತ್ರ ಪಡಿತರ ಸಾಮಗ್ರಿ ಪಡೆಯಲು ನೊಂದಾಯಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್‌ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲ. ಇದಕ್ಕೆ ಕಾರಣ ಕೆಲವು ಬಿಪಿಎಲ್ ಕಾರ್ಡ್‌ದಾರರು ಅಕ್ಕಿ ಪಡೆಯದೆ ಇರುವುದು. ಇದರಿಂದಾಗಿ ಅವರ ರೇಶನ್‌ ಅಂಗಡಿಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಪಡಿತರ ಸಾಮಗ್ರಿ ನೋಂದಾಯಿತ ಎಪಿಎಲ್ ಕಾರ್ಡ್‌ದಾರರಿಗೆ ನೀಡಲಾಗುತ್ತಿದೆ. ಆದರೆ ನಗರದಲ್ಲಿ ಬಿಪಿಎಲ್ ಕಾರ್ಡ್‌ ಗಿಂತ ಎಪಿಎಲ್ ಕಾರ್ಡ್‌ದಾರರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅಕ್ಕಿ ಸಂಗ್ರಹವಾಗುತ್ತಿಲ್ಲ.

ನಗರದಲ್ಲಿ ಕೊರತೆ

ಜಿಲ್ಲೆಯಲ್ಲಿ ನಗರ ಪ್ರದೇಶದ ರೇಶನ್‌ ಅಂಗಡಿಯಲ್ಲಿ ಅಕ್ಕಿ ದಾಸ್ತಾನು ಕೊರತೆಯಿದೆ. ಅಕ್ಕಿ ಖರೀದಿಸಿ ನೀಡುವಂತೆ ಇಲಾಖೆಗೆ ಪತ್ರ ಬರೆಯ ಲಾಗಿದೆ ಎಂದು ಆಹಾರ, ನಾಗರಿಕ, ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ದಾಸ್ತಾನು ಬಳಸಿ

ಎಪಿಎಲ್ ಕಾರ್ಡ್‌ದಾರರಿಗೆ ಹಿಂದೆಖರೀದಿ ಮಾಡಿದ ಅಕ್ಕಿ ಸಾಕಷ್ಟು ಪ್ರಮಾಣ ಉಳಿಕೆಯಾಗಿತ್ತು. ಅದನ್ನೇ ಹಂಚಿಕೆ ಮಾಡಲು ನೀಡ ಲಾಗುತ್ತಿತ್ತೇ ವಿನಾ ಹೊಸದಾಗಿ ಅಕ್ಕಿಯನ್ನು ಖರೀದಿ ಮಾಡಿಲ್ಲ. ಇದರಿಂದ ಕೆಲವೆಡೆ ರೇಶನ್‌ ದೊರಕುತ್ತಿಲ್ಲ. ಈ ಸಮಸ್ಯೆ ಬಗ್ಗೆ ಗಮನ ಹರಿಸಲಾಗುತ್ತದೆ. -ಗಂಗಾಧರಯ್ಯ ಸಹಾಯಕ ನಿರ್ದೇಶಕರು, ಆಹಾರ, ನಾಗರಿಕ, ಗ್ರಾಹಕರ ವ್ಯ.ಇಲಾಖೆ, ಬೆಂಗಳೂರು
-ತೃಪ್ತಿ ಕುಮ್ರಗೋಡು
Advertisement

Udayavani is now on Telegram. Click here to join our channel and stay updated with the latest news.

Next