Advertisement

ಅಪೆಕ್ಸ್-ಡಿಸಿಸಿ ಬ್ಯಾಂಕ್ ವಿಲೀನ ಸರಿಯಲ್ಲ: ಜಿ.ಟಿ.ದೇವೇಗೌಡ

12:20 PM Mar 30, 2022 | Team Udayavani |

ಚಿತ್ರದುರ್ಗ: ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ವಿಲೀನ ಸರಿಯಲ್ಲ ಎಂದು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ, ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳವೇ ಬೇರೆ, ಕರ್ನಾಟಕವೇ ಬೇರೆ. ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಕೃಷಿಗೆ ಹೆಚ್ಚು ಒತ್ತು ನೀಡಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಸೊಸೈಟಿಗಳು, ಬ್ಯಾಂಕುಗಳು ಅಲ್ಲಿನ ಸಿಬ್ಬಂದಿ ರೈತರನ್ನು ಭೇಟಿ ಮಾಡುವುದು, ಸಲಹೆ ಕೊಡುವುದು, ಬ್ಯಾಂಕಿನ ಲೆಕ್ಕಾಚಾರ ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.

ಕೇಂದ್ರ ಸರ್ಕಾರ ನಷ್ಟದಲ್ಲಿರುವ ದಿವಾಳಿಯಾಗುತ್ತಿರುವ ಬ್ಯಾಂಕುಗಳ ಜತೆಗೆ ಇತರೆ ಬ್ಯಾಂಕ್ ವಿಲೀನ ಮಾಡುತ್ತಿದೆ. ಆದರೆ, ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು. 1975 ರಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಲ ಕೊಡಲು ಆಗದೆ ಸುಮ್ಮನಾಗುತ್ತಾರೆ. ಮತ್ತೆ ಎಲ್ಲರೂ ಡಿಸಿಸಿ ಬ್ಯಾಂಕುಗಳಿಗೆ ಬರುತ್ತಾರೆ ಈ ಎಲ್ಲಾ ಕಾರಣದಿಂದ ರಾಜ್ಯದಲ್ಲಿ ಎರಡು ಹಂತದ ವ್ಯವಸ್ಥೆ ನಡೆಯಲ್ಲ, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ವಿಲೀನ ಸರಿಯಾಗಲ್ಲ ಎಂದು ಅಭಿಪ್ರಾಯ ಪಟ್ಟರು.

ಕೇಂದ್ರ ಸರ್ಕಾರ ರಾಜ್ಯದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಮುಚ್ಚಿದರೆ ರೈತರಿಗೆ ನಷ್ಟವಾಗುತ್ತದೆ. ಈ ಕ್ಷೇತ್ರವನ್ನು ಅಧ್ಯಯನ ಮಾಡಲಿ. ಸಹಕಾರ ಬ್ಯಾಂಕುಗಳ ತೆರಿಗೆ ತೆಗೆಯಲಿ, ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನಿದೆ? ಬಲಪಡಿಸುವ ಕೆಲಸವನ್ನಾದರೂ ಮಾಡಿ ಎಂದರು.

Advertisement

ಇದನ್ನೂ ಓದಿ:ಅಕ್ರಮ ಆಸ್ತಿ ಆರೋಪ; ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ರಾಜ್ಯದಲ್ಲಿ ರೈತರು ಉಳಿದಿರುವುದು ಅಪೆಕ್ಸ್, ಜಿಲ್ಲಾ ಸಹಕಾರಿ ಬ್ಯಾಂಕುಗಳಿಂದ‌. ಆದರೆ, ಆರ್ ಬಿಐ ಸಾಲ , ಡಿಪಾಸಿಟ್ ಮತ್ತಿತರ ಕಾರಣಗಳಿಂದ ನಿಬಂಧನೆಗಳನ್ನು ಹಾಕುತ್ತಿದೆ ಇದು ಸರಿಯಲ್ಲ ಎಂದರು.

ಅಮಿತ್ ಶಾ ಅವರ ಬಳಿಯೂ ಸಹಕಾರಿಗಳು‌ ಮನವಿ ಮಾಡುತ್ತೇವೆ. ಸಹಕಾರಿ ಕ್ಷೇತ್ರ ಮೇಲೆ ಹಸ್ತಕ್ಷೇಪ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂದರು.

ಅವಧಿಪೂರ್ಣ ಚುನಾವಣೆ ಯಾಕೆ: ಈ ಹಿಂದೆ ಅವಧಿಪೂರ್ಣ ಚುನಾವಣೆ ಮಾಡಿದವರು ಹೋಗಿದ್ದಾರೆ. ಕೇಂದ್ರಕ್ಕೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಇಲ್ಲದಿದ್ದರೆ ಹೀಗಾಗುತ್ತದೆ. ಹಿಂದೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಅವಧಿಗೂ ಚುನಾವಣೆ ಮಾಡಿ ಸರ್ಕಾರ ಕಳೆದುಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಿಖಿಲ್ ಜೆಡಿಎಸ್ ಯುವ ಘಟಕದ ಅಧ್ಯಕ್ಷ. ಒಳ್ಳೆಯ ವ್ಯಕ್ತಿ. ನಾವು ಜೆಡಿಎಸ್ ಕಟ್ಟುತ್ತಿಲ್ಲ, ಅವರು ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next