Advertisement

ಅಪೇಕ್ಷಾ: ಇಂಡಿಯಾ ಬುಕ್‌ ಸಾಧನೆ

04:55 PM Oct 19, 2019 | Team Udayavani |

ಮಹಾನಗರ: ಬೆಸೆಂಟ್‌ ಸಂಧ್ಯಾ ಕಾಲೇಜಿನ ಎಂಕಾಂ ವಿದ್ಯಾರ್ಥಿನಿ, ಮಣ್ಣಗುಡ್ಡೆ ನಿವಾಸಿ ಅಪೇಕ್ಷಾ ಎಸ್‌. ಕೊಟ್ಟಾರಿ ಅವರು ಅತೀ ಉದ್ದ ಎಕ್ಸ್‌ ಪ್ಲೋಶನ್‌ ಗಿಫ್ಟ್‌ ಬಾಕ್ಸ್‌ ತಯಾರಿಸಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಇನ್‌ಕ್ರೆಡಿಬಲ್‌ ಇಂಡಿಯಾ ಪರಿಕಲ್ಪನೆಯಲ್ಲಿ ಅವರು ಈ 75 ಸೆಂ.ಮೀ. ಗಿ 1000
ಸೆಂ. ಮೀ. ಉದ್ದದ ಬಾಕ್ಸ್‌ ಸಿದ್ಧಪಡಿಸಿದರು. ಇದು ಸಾಮಾನ್ಯ ಬಾಕ್ಸ್‌ ನಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ತೆರೆದುಕೊಂಡಾಗ ಸಾವಿರ ಸೆಂ.ಮೀ. ಗೆ ವಿಸ್ತರಿಸುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು, ನಾಯಕರು, ಸಾಂಸ್ಕೃತಿಕ ಪರಂಪರೆ ಸಹಿತ ವಿವಿಧ ಮಾಹಿತಿಯನ್ನು ಇದರಲ್ಲಿ ಅಪೇಕ್ಷಾ ಅಂತ ರ್ಗತಗೊಳಿಸಿದ್ದಾರೆ. ಈ ಹವ್ಯಾಸವನ್ನು ನಿರಂತರವಾಗಿ ನಡೆಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next