Advertisement
ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಆ ದಂಪತಿ ಚಿಕ್ಕಮಗಳೂರಿನಿಂದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸರಕಾರದ ‘ನಗು-ಮಗು’ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯುತ್ತಿರುತ್ತಾರೆ. ಆದರೆ ದಾರಿಮಧ್ಯೆ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ ಕಾರಣ ಆ್ಯಂಬುಲೆನ್ಸ್ ಆತನ ನಿಯಂತ್ರಣ ತಪ್ಪಿ ದಾರಿಬದಿಯ ಕಂದಕಕ್ಕೆ ಉರುಳುತ್ತದೆ.
Related Articles
Advertisement
ಒಟ್ಟಿನಲ್ಲಿ ನಡು ಮಧ್ಯರಾತ್ರಿ ಸಮಯದಲ್ಲಿ ನಿರ್ಜನ ಕಾಡು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ವಾಹನದಲ್ಲಿದ್ದವರ ಸಹಾಯಕ್ಕೆ ಒದಗಿ ಅವರಿಗೆ ಆಸ್ಪತ್ರೆ ತಲುಪುವಲ್ಲಿ ತಮ್ಮ ನೆರವನ್ನು ನೀಡುವ ಮೂಲಕ ಮಹಮ್ಮದ್ ಆಸೀಫ್ ಅವರು ತಾನು ನಿಜವಾದ ‘ಆಪತ್ಬಾಂಧವ’ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.‘ಆಪತ್ಭಾಂಧವ’ ಮಹಮ್ಮದ್ ಆಸೀಫ್ ಅವರು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಯಾವುದೇ ರೀತಿಯ ದುರಂತಗಳಾದರೂ ತಮ್ಮ ‘ಆಪತ್ಭಾಂಧವ ಆ್ಯಂಬುಲೆನ್ಸ್’ ಮೂಲಕ ಪ್ರತ್ಯಕ್ಷರಾಗುತ್ತಾರೆ. ಮಾತ್ರವಲ್ಲದೇ ಸಮಾನ ಮನಸ್ಕ ಗೆಳೆಯರ ಬಳಗದೊಂದಿಗೆ ಸೇರಿಕೊಂಡು ದಾರಿಬದಿಯಲ್ಲಿ, ಬಸ್ ಸ್ಟಾಂಡ್ ಗಳಲ್ಲಿ ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು, ಮಾನಸಿಕ ಅಸ್ವಸ್ಥರನ್ನು ನಿರ್ಗತಿಕ ಕೇಂದ್ರಗಳಿಗೆ ಮತ್ತು ಆಸ್ಪತ್ರೆಗಳಿಗೆ ಸೇರಿಸುವ ಕಾರ್ಯವನ್ನು ನಡೆಸುತ್ತಿರುತ್ತಾರೆ. ಹೀಗೆ ತನ್ನ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಆ ಮೂಲಕ ತನ್ನ ಸೀಮಿತ ವ್ಯಾಪ್ತಿಯಲ್ಲಿ ಸಮಾಜಮುಖೀ ಕಾರ್ಯವನ್ನು ನಡೆಸುತ್ತಿರುವ ಮಹಮ್ಮದ್ ಆಸೀಫ್ ಅವರ ಶ್ರಮ ಪ್ರಶಂಸಾರ್ಹವಾದುದು. ಇದೀಗ ತಾಯಿ ಮತ್ತು ಮಗು ಸುರಕ್ಷಿತವಾಗಿ ಮಂಗಳೂರು ತಲುಪಿದ್ದು ಅಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿದೆ. ನಾನು ವೃತ್ತಿಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದರೂ ಆ ಒಂದು ಕ್ಷಣ ಏನು ಮಾಡುವುದೆಂದು ತೋಚಲಿಲ್ಲ. ಆದರೆ ನನ್ನ ಜೊತೆಗಿದ್ದ ಆಸಿಫ್ ಬಜ್ಪೆ, ದಾವೂದ್ ಸಾಣೂರು ಹಾಗೂ ಪಜಲ್ ಸಾಣೂರು ಅವರ ಸಹಕಾರದಿಂದ ಆ್ಯಂಬುಲೆನ್ಸ್ ಒಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕಾಪಾಡಿದ ನೆಮ್ಮದಿ ಇದೆ. ಹದಿನಾಲ್ಕು ದಿವಸ ಪ್ರಾಯದ ಆ ಮಗು ಪವಾಡಸದೃಶವಾಗಿ ಸುರಕ್ಷಿತ ರೀತಿಯಲ್ಲಿ ಆಕ್ಸಿಜನ್ ಬಾಕ್ಸಿನೊಳಗಿತ್ತು.
– ‘ಆಪತ್ಬಾಂಧವ’ ಮಹಮ್ಮದ್ ಆಸೀಫ್