Advertisement

ಅಪಾಚೆ ಆರ್‌ಟಿಆರ್‌ 160 4ವಿ ಮಾರುಕಟ್ಟೆಗೆ

06:26 PM Mar 11, 2021 | Team Udayavani |

ಬೆಂಗಳೂರು: ಹೆಸರಾಂತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದಕ ಸಂಸ್ಥೆ ಟಿವಿಎಸ್‌ ಮೋಟರ್‌ 2021ರ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 4ವಿ ಬೈಕ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಈ ಹೊಸ ಬೈಕ್‌ 159.7 ಸಿ.ಸಿ. ಸಾಮರ್ಥ್ಯದ ಎಂಜಿನ್‌, ಸಿಂಗಲ್‌ ಸಿಲಿಂಡರ್‌, 4 ವಾಲ್‌Ì, ಆಯಿಲ್‌ ಕೂಲ್ಡ್‌  ಎಂಜಿನ್‌ ಒಳಗೊಂಡಿದೆ. 5 ಸ್ಪೀಡ್‌ ಸೂಪರ್‌ ಸ್ಲಿಕ್‌ ಗೇರ್‌ ಬಾಕ್ಸ್‌ ಇದ್ದು, ಅತ್ಯು ತ್ತಮ ಚಾಲನಾ ಅನುಭವವನ್ನು ಒದಗಿಸ ಲಿವೆ. ಎಲ್‌ಇಡಿ ಹೆಡ್‌ಲ್ಯಾಂಪ್‌, ಕ್ಲಾ ಮಾದರಿಯ ಪೊಸಿಷನ್‌ ಲ್ಯಾಂಪ್‌ ಇದ್ದು, ಒಟ್ಟಾರೆ ಪ್ರೀಮಿಯಂ ಅನುಭವನನ್ನು ಹೆಚ್ಚಿಸಲಿದೆ. ಹಿಂದಿನ ಆರ್‌ ಟಿಆರ್‌ ಅಪಾಚೆಗೆ ಹೋಲಿಸಿದರೆ 2 ಕೆ.ಜಿ. ಕಡಿಮೆ ತೂಕವಿದ್ದು, ಡಿಸ್ಕ್ ಮಾದರಿ ವಾಹನದ ತೂಕ 147 ಕೆ.ಜಿ. ಮತ್ತು ಡ್ರಂ ಮಾದರಿಯ ವಾಹನದ ತೂಕ 145 ಕೆ.ಜಿ ಇದೆ.

ರೇಸಿಂಗ್‌ ರೆಡ್‌, ನೈಟ್‌ ಬ್ಲಾಕ್‌ ಹಾಗೂ ಮೆಟಾಲಿಕ್‌ ಬ್ಲೂ ಸೇರಿ ಮೂರು ಬಣ್ಣದಲ್ಲಿ ಲಭ್ಯವಿವೆ. ಡಿಸ್ಕ್ ಮಾದರಿ ವಾಹನದ ದರ (ಎಕ್ಸ್‌ ಷೋರೂಂ, ದೆಹಲಿ) 1,10,320 ರೂ. ಹಾಗೂ ಡ್ರಂ ಮಾದರಿ ವಾಹನದ ದರ 1,07,270 ರೂ. ಇದೆ. ಈ ಕುರಿತು ಮಾತನಾಡಿದ ಟಿವಿಎಸ್‌ ಮೋಟರ್‌ ಕಂಪನಿಯ ಮುಖ್ಯಸ್ಥ (ಮಾರ್ಕೆಟಿಂಗ್‌) ಪ್ರೀಮಿಯಂ ಮೋಟರ್‌ಸೈಕಲ್‌ ಮೇಘಶ್ಯಾಂ ದಿಘೋಲೆ ಅವರು, “ರೇಸಿಂಗ್‌ ವಲಯದಲ್ಲಿ 38 ವರ್ಷಗಳ ಅನುಭವದೊಂದಿಗೆ ನೂತನ 2021 ಟಿವಿಎಸ್‌ ಅಪಾಚೆ ಆರ್‌ ಟಿಆರ್‌ 160 4ವಿ ವಾಹನವನ್ನು ಪರಿಚಯಿಸಿದ್ದೇವೆ. ಉನ್ನತೀಕರಿ ಸಿದ ಸಾಮರ್ಥ್ಯ, ಅತ್ಯಾಧುನಿಕ ತಾಂತ್ರಿಕತೆ ಹೊಂದಿದ್ದು, ಬೈಕ್‌ನ ತೂಕ ಇಳಿಸಲಾಗಿದೆ. ಟಿವಿಎಸ್‌ ಅಪಾಚೆ ಎಂದಿಗೂ ಉನ್ನತ ಸೂಚ್ಯಂಕವನ್ನು ಗ್ರಾಹಕರ ತೃಪ್ತಿಗೆ ಸಂಬಂಧಿಸಿ ಹೆಚ್ಚಿನ ಮಾನದಂಡಗಳನ್ನು ನೀಡುವಲ್ಲಿ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next