Advertisement

ಯಾವುದೇ ಕ್ಷಣ ಅಣುಯುದ್ಧ?

09:50 AM Nov 27, 2017 | |

ವಾಷಿಂಗ್ಟನ್‌: ಪಾಕಿಸ್ಥಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಚಾರ, ದಕ್ಷಿಣ ಏಷ್ಯಾದಲ್ಲಿ ಯಾವುದೇ ಕ್ಷಣದಲ್ಲಾದರೂ ಈವರೆಗಿನ ಸಾಂಪ್ರದಾಯಿಕ ಯುದ್ಧಗಳನ್ನು ಪರಮಾಣು ಯುದ್ಧದ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಅಮೆರಿಕದ “ಅಟ್ಲಾಂಟಿಕ್‌ ಕೌನ್ಸಿಲ್‌’ ಎಂಬ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.

Advertisement

ಭಾರತ ಮೂಲದ ಸಂಶೋಧಕರಾದ ಗೌರವ್‌ ಕಂಪಾನಿ, ಭರತ್‌ ಗೋಪಾಲಸ್ವಾಮಿ ತಯಾರಿಸಿರುವ “ಏಷ್ಯಾ ಇನ್‌ ದ ಸೆಕೆಂಡ್‌ ನ್ಯೂಕ್ಲಿಯರ್‌ ಏಜ್‌’ ಎಂಬ ವರದಿಯಲ್ಲಿ ಈ ಆತಂಕವನ್ನು ಉಲ್ಲೇಖೀಸಲಾಗಿದೆ. “”ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ಯಾವುದೇ ಆಲೋಚನೆಯನ್ನು ಪಾಕಿಸ್ಥಾನ ಪ್ರಕಟಿಸಿಲ್ಲ. ಆದರೆ, ಆ ದೇಶ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಅಲ್ಲಿನ ಸರಕಾರವೇ ಮುಂದೊಮ್ಮೆ ಬಳಸುತ್ತದೆ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಆ ದೇಶದ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿರುವ ಈ ವಿನಾಶಕಾರಿ ಬಾಂಬ್‌ಗಳಿಗೆ ಯಾವುದೇ ಸಮಾಜಘಾತುಕ ಶಕ್ತಿಗಳು ಯಾವುದೇ ಕ್ಷಣ ದಲ್ಲಾದರೂ ಸುಲಭವಾಗಿ ಲಗ್ಗೆ ಹಾಕ ಬಹುದು. ಹಾಗಾಗಿ, ಪಾಕ್‌ನ ಪರಮಾಣು ಶಸ್ತ್ರಾಸ್ತ್ರಗಳು ಅಲ್ಲಿನ ಸೇನೆಯ ಉಸ್ತುವಾರಿ ಯಲ್ಲಿ ಸುಭದ್ರವಾಗಿವೆೆ ಎಂಬುದು ಪೊಳ್ಳು ನಿರೀಕ್ಷೆಯಾಗಿದೆ” ಎಂದು ಅದು ಹೇಳಿದೆ. 

ಈ ವಾದಕ್ಕೆ ಸಮರ್ಥನೆಯನ್ನೂ ನೀಡಿರುವ ಕೌನ್ಸಿಲ್‌ “”ಭಾರತ ಹಾಗೂ ಅಫ್ಘಾನಿಸ್ಥಾನಗಳಲ್ಲಿ ಜಿಹಾದಿಗಳ ಮೂಲಕ ಪರೋಕ್ಷ ಯುದ್ಧ ಮಾಡಲೆತ್ನಿಸಿದ್ದ ಪಾಕಿಸ್ಥಾನಕ್ಕೆ ಅದೇ ಈಗ ತಿರುಗುಬಾಣವಾಗಿದೆ. ಅಲ್ಲಿನ ಸೇನಾ ವಲಯಗಳೇ ಉಗ್ರರ ದಾಳಿಗೆ ತುತ್ತಾಗುತ್ತಿರುವಾಗ ಸೈನ್ಯದ ಉಸ್ತುವಾರಿಯಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳಿಗೆ ಯಾವ ಸುರಕ್ಷೆಯಿದೆ” ಎಂದು ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next