ಲಂಡನ್: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂಧರಾಗಿ ಬೆಂಬಲಿಸುವವನ್ನು ಬೆಂಬಲಿಸಲಾಗುತ್ತಿದೆ. ಆದರೆ ಮೋದಿ ಬಗ್ಗೆ ಮತ್ತು ಅವರ ಸರ್ಕಾರವನ್ನು ಪ್ರಶ್ನೆ ಮಾಡುವವರ ಮೇಲೆ ದಾಳಿ ಮಾಡಲಾಗುತ್ತದೆ. ಬಿಬಿಸಿ ಜತೆಯೂ ಇದೇ ರೀತಿ ಮಾಡಲಾಗಿತ್ತು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲಂಡನ್ ನಲ್ಲಿ ಹೇಳಿದರು.
ಲಂಡನ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಈಗ ಚರ್ಚೆಯ ವಿಚಾರವಲ್ಲ. ಬಿಜೆಪಿ ಮತ್ತು ಆರ್ ಎಸ್ಎಸ್ ಸೋಲಿಸುವುದೇ ನಮ್ಮ ಪ್ರಮುಖ ಗುರಿ’ ಎಂದರು.
ನಿರುದ್ಯೋಗದಂತಹ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂಬ ಕಲ್ಪನೆಯು ಮೇಲ್ನೋಟಕ್ಕೆ ಇದೆ. ಈ ಸಮಸ್ಯೆಗಳಿಗೆ ಮಧ್ಯಸ್ಥಗಾರರೊಂದಿಗೆ ಮತ್ತು ಸ್ಪಂದಿಸುವ ಸರ್ಕಾರದೊಂದಿಗೆ ಮಾತುಕತೆಯ ಅಗತ್ಯವಿದೆ. ವಿಷಯಗಳನ್ನು ಸರಿಪಡಿಸಲು ಮಾಂತ್ರಿಕದಂಡ ಹಿಡಿದು ಓಡುವ ನರೇಂದ್ರ ಮೋದಿ ಶೈಲಿಯ ವ್ಯಕ್ತಿಯನ್ನು ನಾನು ಒಪ್ಪುವುದಿಲ್ಲ’ ಎಂದರು.
Related Articles
ಇದನ್ನೂ ಓದಿ:ಬೋಟ್ ವೇವ್ ಫ್ಲೆಕ್ಸ್ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ
“ಕಳೆದ ಬಾರಿ ಪ್ರಧಾನ ಮಂತ್ರಿ ವಿದೇಶಕ್ಕೆ ಹೋಗಿ 70 ವರ್ಷಗಳ ಸ್ವಾತಂತ್ರ್ಯದಲ್ಲಿ ಏನೂ ಮಾಡಿಲ್ಲ ಎಂದು ಘೋಷಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾವು 10 ವರ್ಷಗಳ ದಶಕವನ್ನು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದು ನನಗೆ ನೆನಪಿದೆ. ಅವರು ಭಾರತದಲ್ಲಿ ಅನಿಯಮಿತ ಭ್ರಷ್ಟಾಚಾರವಿದೆ ಎಂದು ಹೇಳಿದರು. ಅವರು ಇಷ್ಟೆಲ್ಲ ಹೇಳಿದ್ದು ವಿದೇಶದಲ್ಲೇ. ಆದರೆ ನಾನೆಂದೂ ನನ್ನ ದೇಶದ ಮಾನ ತೆಗೆದಿಲ್ಲ. ಆದರೆ ಅವರು 70 ವರ್ಷದಲ್ಲಿ ಏನೂ ಆಗಿಲ್ಲ ಎಂದಾಗ ಅದು ಭಾರತೀಯರಿಗೆ ಅವಮಾನ ಮಾಡಿದಂತೆ ಆಗುವುದಿಲ್ಲವೇ?’ ಎಂದು ರಾಹುಲ್ ಗಾಂಧಿ ಹೇಳಿದರು.