Advertisement

ತಪ್ಪು ಯಾರೇ ಮಾಡಿದರೂ ಕಾನೂನು ಕ್ರಮ: ಕಮಲ್‌ ಪಂತ್

10:43 AM Nov 21, 2021 | Team Udayavani |

 ಬೆಂಗಳೂರು: ತಪ್ಪು ಅಥವಾ ವಂಚನೆ ಯಾರೇ ಮಾಡಿದರೂ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮಕೈಗೊಳ್ಳುತ್ತೇವೆ. ಅದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು. ಶನಿವಾರ ಟ್ವಿಟರ್‌ನಲ್ಲಿ ಸಾರ್ವಜನಿಕರ ಜತೆ ಸಂವಾದ ನಡೆಸಿದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಟ್ವೀಟಿಗರ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

ಶಾಹಿದ್‌ ಎಂಬವರು ತಮಗೆ ಕೆಲ ರಾಜಕೀಯ ಮುಖಂ ಡರು, ಬಿಲ್ಡರ್‌ಗಳು ಸೇರಿ 21 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಠಾಣೆಗೆ ದೂರು ನೀಡಿದ್ದೇನೆ. ಆದರೆ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಈ ರೀತಿಯ ತಾರತಮ್ಮ ಏಕೆ ಎಂದು ಪ್ರಶ್ನಿಸಿ ದ್ದಾರೆ.

ಅದಕ್ಕೆ ಉತ್ತರಿಸಿರುವ ಆಯುಕ್ತರು, ಈ ಬಗ್ಗೆ ಸಂಬಂಧಿ ಸಿದ ಡಿಸಿಪಿಗೆ ದೂರು ನೀಡಿ, ಒಂದು ವೇಳೆ ಅವರು ಸಮಸ್ಯೆ ಬಗೆಹರಿಸದಿದ್ದರೆ, ಹೆಚ್ಚುವರಿ ಪೊಲೀಸ್‌ ಆಯುಕ್ತರು ಅಥವಾ ತಮಗೆ ನೇರವಾಗಿ ಬಂದು ದೂರು ನೀಡಿ ಎಂದರು.

ಇದನ್ನೂ ಓದಿ;- ಓಪೋ ಎ55 5ಜಿ ಬಿಡುಗಡೆ

ಏರ್‌ಪೋರ್ಟ್‌ಗೆ ಹೋಗುವಾಗ ಕ್ಯಾಬ್‌ ಚಾಲಕನೊಬ್ಬ ದುರ್ವತನೆ ತೋರಿದಲ್ಲದೆ, ಅಪರಿಚಿತ ರಸ್ತೆಯಲ್ಲಿ ಕರೆದೊಯ್ದ ಸಂದರ್ಭದಲ್ಲಿ ಏನು ಮಾಡಬೇಕೆಂದು ಮಹಿಳೆಯೊಬ್ಬರು ಪ್ರಶ್ನಿ ಸಿದರು. ಈ ಬಗ್ಗೆ ಉತ್ತರಿಸಿದ ಆಯುಕ್ತರು, ಆ ರೀತಿಯ ಅನುಮಾನಗಳು ಬಂದರೆ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

Advertisement

ಪಾದಚಾರಿ ಮಾರ್ಗ ತೆರವುಗೊಳಿಸಿ: ನಮ್ಮ ಬೆಂಗಳೂರು, ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿ ಯಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿತು.

ಪಾದಚಾರಿ ಮಾರ್ಗ ದಲ್ಲಿ ವಾಹನ ನಿಲುಗಡೆ ಮತ್ತು ಸಂಚಾರ ನಿರ್ಬಂಧಿಸಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜತೆ ಸೇರಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಆಯುಕ್ತರು ಹೇಳಿದರು. ನಂದನ್‌ ಎಂಬವರು, ರಸ್ತೆ ಬದಿ ಮತ್ತು ಫ‌ುಟ್‌ಪಾತ್‌ ಮೇಲೆ ಕಸ ಹಾಕಲಾಗುತ್ತದೆ. ಜತೆಗೆ ವ್ಯಾಪಾರಿಗಳು ಇರುತ್ತಾರೆ. ಅಲ್ಲದೆ, ರಸ್ತೆ ಬದಿ ಕಾರುಗಳನ್ನು ನಿಲ್ಲಿಸುತ್ತಾರೆ. ಅದರಿಂದ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತದೆ ಎಂದು ದೂರಿದರು.

ಪಾರ್ಕಿಂಗ್‌ ಸ್ಥಳ ಹೊರತು ಪಡಿಸಿ ಬೇರೆಡೆ ವಾಹನ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಿದೆ. ಜತೆಗೆ ಕಸ ಮತ್ತು ವ್ಯಾಪಾರಿಗಳನ್ನು ತೆರವುಗೊಳಿಸುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಲಾಗುತ್ತದೆ ಎಂದು ಆಯುಕ್ತರು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next