Advertisement
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ನಮ್ಮ ಪೀಠಕ್ಕೂ, ಕನಕಗು ಪೀಠಕ್ಕೂ ಸರ್ಕಾರ ತಲಾ 10 ಕೋಟಿ ರೂ. ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾಮಗಾರಿ ನಡೆದು, ಬಿಡುಗಡೆಯಾದ ಹಣದ ಬಳಕೆ ಬಳಿಕ ಹಂತಹಂತವಾಗಿ ಹಣ ಬರುತ್ತದೆ. ಎಲ್ಲ ಅನುದಾನವೂ ಪಾರದರ್ಶಕ ಬಳಕೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಯಾರುಬೇಕಾದರೂ ದಾಖಲೆ ಪಡೆಯಬಹುದು ಎಂದರು.
Related Articles
Advertisement
ನಮ್ಮ ಹೋರಾಟ ಹಾಗೂ ಬೇಡಿಕೆ ಕೇವಲ 2ಎ ಮೀಸಲಾತಿ ಮಾತ್ರವಲ್ಲ, ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಪಂಚಮಸಾಲಿ ಸಮಾಜ ಮಾತ್ರವಲ್ಲ ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕು. ಇದರಿಂದ ಕೇಂದ್ರ ಸರ್ಕಾರದಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್ ನಂಥ ಉನ್ನತ ಹುದ್ದೆಗೇರಲು ನಮ್ಮ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸಹಕಾರಿ ಆಗಲಿದೆ ಎಂದರು.
ಇದಕ್ಕಾಗಿ 28 ವರ್ಷಗಳ ಸುದೀರ್ಘ ಹೋರಾಟ ನಡೆಸಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೇ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾತಿಗಳ ಪಟ್ಟಿಯಲ್ಲೇ ಇಲ್ಲದ ಪಂಚಮಸಾಲಿ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದರಿಂದ 3ಬಿ ಮೀಸಲಾತಿ ಪಡೆಯಲು ಅವಕಾಶ ಸಿಕ್ಕಿತು ಎಂದು ವಿವರಿಸಿದರು.
ಆಲಗೂರು ಪಂಚಮಸಾಲಿ ಪೀಠದ ಡಾ.ಮಹದೇವ ಶ್ರೀಗಳು, ಡಾ.ಸುರೇಶ ಬಿರಾದಾರ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಗುರುಶಾಂತ ನಿಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.