ಶಿರ್ವ: ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಶಿರ್ವ ಮಂಚಕಲ್ ಪೇಟೆಯ ಮುಖ್ಯರಸ್ತೆ ಬಳಿಯ ಶಾಮ್ಸ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹದ ಪ್ರವರ್ತಕರ ಭಾರತ್ ಪೆಟ್ರೋಲಿಯಂನ ನೂತನ ಪೆಟ್ರೋಲ್‌ಪಂಪ್ ಆನ್ಯ ಫ್ಯೂಯೆಲ್ಸ್ ಕಾರ್ಕಳ-ನಿಟ್ಟೆ ರಾಜ್ಯ ಹೆದ್ದಾರಿಯ ಬಳಿ ಶನಿವಾರ ಶುಭಾರಂಭಗೊಂಡಿತು.
ಸಂಸ್ಥೆಯ ಪ್ರವರ್ತಕರಾದ ಶಿರ್ವ ಅಟ್ಟಿಂಜ ಶೆಟ್ಟಿ ನಿವಾಸ ಹೇಮಲತಾ ಶೆಟ್ಟಿ ಮತ್ತು ಶಂಭು ಶೆಟ್ಟಿ ದಂಪತಿ ಆನ್ಯ ಫ್ಯೂಯೆಲ್ಸ್‌ನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆಗಮ ವಿದ್ವಾಂಸ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾತನಾಡಿ, ಮನುಷ್ಯ ತಾನು ಮಾಡಿದ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದರೆ ಜನ್ಮ ಸಾರ್ಥಕವಾಗುತ್ತದೆ. ಸಮಾಜದ ಒಳಿತಿಗಾಗಿ ವಿವಿಧ ಕೊಡುಗೆ ನೀಡುತ್ತಿರುವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳ ವ್ಯವಹಾರ,ಉದ್ದಿಮೆ ಯಶಸ್ವಿ ಪಥದತ್ತ ಮುನ್ನಡೆಯಲಿ ಎಂದು ಹೇಳಿದರು.
ಕಾರ್ಕಳ ಅತ್ತೂರು ಸೈಂಟ್ ಲಾರೆನ್ಸ್ ಬಸಿಲಿಕಾದ ಸಹಾಯಕ ಧರ್ಮಗುರು ವಂ| ಆಲ್ಬನ್ ಡಿಸೋಜಾ ಮಾತನಾಡಿ ಸರ್ವಧರ್ಮ ಸಮನ್ವಯದ ಮೂಲಕ ಆನಾವರಣಗೊಂಡ ಉದ್ಯಮ ಯಶಸ್ವಿಯಾಗಲಿ ಎಂದರು.
ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಟಿ.ಹೆಚ್.ಹಮಾl ಪೈಝ್ ತೋಡಾರ್ ಮತ್ತು ಭಾರತ್ ಪೆಟ್ರೋಲಿಯಂನ ಮಂಗಳೂರು ಟೆರಿಟರಿ ನಿರ್ವಾಹಕ ಎಂಜಿನಿಯರ್ ಅಮುಲ್ ಭೋಸ್ಲೆ ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ರಾಜೇಂದ್ರ ಕಡಂಬ,ಮಸೀದಿಯ ಸಹಾಯಕ ಧರ್ಮಗುರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಪ್ರದೀಪ್ ಶೆಟ್ಟಿ ಅಟ್ಟಿಂಜೆ, ಶಿರ್ವ ಗ್ರಾ.ಪಂ.ಅಧ್ಯಕ್ಷ ರತನ್‌ಕುಮಾರ್ ಶೆಟ್ಟಿ,ಭಾರತ್ ಪೆಟ್ರೋಲಿಯಂನ ಸೇಲ್ಸ್ ಆಫೀಸರ್‌ಗಳಾದ ಅಭಿಷೇಕ್ ಮತ್ತು ನೀರಜ್, ನಿಟ್ಟೆ ದಿವಾಕರ ಶೆಟ್ಟಿ, ಗುತ್ತಿಗೆದಾರ ಆನಂದ ಅರಾನ್ಹ ಮತ್ತಿತರ ಗಣ್ಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಜಯಶ್ರೀ ಜಯಪಾಲ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರೂಪಿಸಿ, ಸುಧೀರ್ ಶೆಟ್ಟಿ ಅಟ್ಟಿಂಜೆ ವಂದಿಸಿದರು.