Advertisement
ಕಳೆದ ಬಾರಿ ಯಶಸ್ಸು ಕಂಡಿದ್ದ ನದಿ ಉತ್ಸವವನ್ನು ಈ ಬಾರಿ ಇನ್ನಷ್ಟು ಮೆರುಗು ನೀಡಿ ದ್ವೀಪ ಉತ್ಸವವಾಗಿ ವೈವಿಧ್ಯಮಯ ರೀತಿಯಲ್ಲಿ ನವೆಂಬರ್‌ನಲ್ಲಿ ಆಚರಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿರ್ಧರಿಸಿ ಈ ಬಗ್ಗೆ ಒಂದು ಕೋಟಿ ರೂ. ಅನುದಾನವನ್ನು ಕೋರಿ ಆಗಸ್ಟ್‌ನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇ ಶಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ದ್ವೀಪ ಉತ್ಸವಕ್ಕೆ ನೇತ್ರಾವತಿ ನದಿಯಲ್ಲಿ ಜಪ್ಪಿನಮೊಗರು ಬಳಿಯಿರುವ ನಡು ಕುದ್ರು ದ್ವೀಪವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ದ್ವೀಪ ಕಿರಿದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದರೆ ಸುರಕ್ಷತೆಗೆ ಸಮಸ್ಯೆ ಆಗಬಹುದು ಹಾಗೂ ಸಿಆರ್‌ಝಡ್ ಹಾಗೂ ಅರಣ್ಯ ಇಲಾಖೆಗಳ ಅನುಮತಿ ಪಡೆಯುವ ನಿಟ್ಟಿನಲ್ಲಿ ಇರುವ ಕೆಲವು ತಾಂತ್ರಿಕ ತೊಡಕುಗಳ ಹಿನ್ನೆಲೆಯಲ್ಲಿ ದ್ವೀಪ ಉತ್ಸವ ಕೈಬಿಟ್ಟು ಕಳೆದ ವರ್ಷದಂತೆ ನದಿ ಉತ್ಸವವನ್ನು ಆಯೋಜಿಸುವ ಪ್ರಸ್ತಾವನೆ ಈಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಮುಂದಿದೆ. ಆಗ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಅವರು ನದಿ ಉತ್ಸವ ಪರಿಕಲ್ಪನೆಯನ್ನು ರೂಪಿಸಿ ಮಂಗಳೂರಿನಲ್ಲಿ ಫಲ್ಗುಣಿ ನದಿಯ ಬಂಗ್ರಕೂಳೂರು, ಸುಲ್ತಾನ್‌ಬತ್ತೇರಿ ಹಾಗೂ ಕೂಳೂರಿನಲ್ಲಿ ಈ ವರ್ಷದ ಜನವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಆಯೋಜಿಸಿದ್ದರು.
ಪಡೆದುಕೊಂಡಿತ್ತು. ಜಲಕ್ರೀಡೆ, ರಿವರ್ ಕ್ರೂಸ್, ನದಿಯಲ್ಲಿ ತೇಲುವ ಜಟ್ಟಿಗಳೊಂದಿಗೆ ಆಹಾರ ಮಳಿಗೆಗಳು, ವಸ್ತು ಪ್ರದರ್ಶನ ಹಾಗೂ ದ.ಕ. ಜಿಲ್ಲೆಯ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನದಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿತ್ತು.
ಇದಲ್ಲದೆ ನದಿಗಳ ಪ್ರಾಮುಖ್ಯತೆ ಬಗ್ಗೆ ಚಲನಚಿತ್ರಗಳನ್ನು ಪ್ರದರ್ಶಿಸಿ ನದಿ ಸಂರಕ್ಷಣೆ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಗಿತ್ತು. ಸುಮಾರು 25,000ಕ್ಕೂ ಅಧಿಕ ಮಂದಿ ನದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಅಲ್ಲದೆ ನೆರೆಯ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಜನರು ಆಗಮಿಸಿ ಸಂಭ್ರಮಿಸಿದ್ದರು.ಇಂತಹ ನದಿ ಉತ್ಸವವಗಳನ್ನು ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಆಯೋಜಿಸಬೇಕು ಎಂಬ ಕೋರಿಕೆಯೂ ಆಗ ಕೇಳಿ ಬಂದಿತ್ತು.
Related Articles
ನದಿ ಉತ್ಸವದ ಜತೆಗೆ ಮಂಗಳೂರಿನಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿ ಕುರಿ ತಂತೆ ಹಲವಾರು ವರ್ಷಗಳಿಂದ ಸರ ಕಾರದ ಮಟ್ಟದಲ್ಲಿ ಈಡೇರಿಕೆಗೆ ಬಾಕಿಯಿದ್ದ ಪ್ರಸ್ತಾವಗಳು ಮರುಜೀವ ಪಡೆದು ಕೊಂಡಿತ್ತು. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರ ಕೂಳೂರು ನದಿ ತೀರ, ಸುಲ್ತಾನ್ ಬತ್ತೇರಿ, ತಣ್ಣೂರುಬಾವಿ ಸಮೀಪ ಕೂಳೂರು ಉತ್ತರ ಮರುಳು ಮಿಶ್ರಿತ ಪ್ರದೇಶ, ಹಳೆ ಬಂದರು, ಕಸ್ಬಾ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್ ಫೀಟ್ ಬಳಿ ಹಾಗೂ ನೇತ್ರಾವತಿ ನದಿತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಹಾಗೂ ಸಸಿಹಿತ್ಲು ಕಡಲ ತೀರದ ಬಳಿ ನಂದಿನ ನದಿ ತಟದ ಬಳಿ ಸಹಿತ ಒಟ್ಟು 26 ಕೋ.ರೂ. ವೆಚ್ಚದಲ್ಲಿ 13 ತೇಲುವ ಜೆಟ್ಟಿಗಳನ್ನು ನಿರ್ಮಿಸುವ ಪ್ರಸ್ತಾವನೆ ರೂಪಿಸಿ ರಾಜ್ಯ ಪ್ರವಾಸೋದ್ಯ ಇಲಾಖೆಗೆ ಸಲ್ಲಿಸಲಾಗಿತ್ತು.
Advertisement
ಗಮನ ಸೆಳೆದ ನದಿ ತೀರದ 23 ಎಕ್ರೆನದಿ ಉತ್ಸವದ ಸಂದರ್ಭ ಗಮನ ಸೆಳೆದ ಇನ್ನೊಂದು ಅಂಶ ಎಂದರೆ ಬಂಗ್ರಕೂಳೂರಿನಲ್ಲಿ ನದಿಗೆ ತಾಗಿಕೊಂಡಿರುವಂತೆ 23 ಎಕ್ರೆ ಸರಕಾರಿ ಭೂಮಿ. ಆಗಿನ ಜಿಲ್ಲಾಧಿಕಾರಿಯವರು ಅಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಿ ಸಮತಟ್ಟುಗೊಳಿಸಿದ್ದರು. ಇದನ್ನು ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪಿಸಲು ಇರುವ ವಿಪುಲ ಅವಕಾಶಗಳನ್ನು ತೆರೆದಿಟ್ಟಿತ್ತು. ಕೇಂದ್ರ ಸರಕಾರದ ಪರಿಷ್ಕೃತ ಸಿಆರ್‌ಝಡ್ ನಿಯಮ ಸಾಗರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲವು ರಿಯಾಯಿತಿಗಳನ್ನು ನೀಡಿದೆ. ಈ ಜಾಗ ಮತ್ತೇ ಒತ್ತುವರಿಯಾಗುವ ಮೊದಲು ಇದನ್ನು ಅಭಿವೃದ್ಧಿಗೊಳಿಸುವುದು ಅವಶ್ಯವಾಗಿದೆ. ನದಿ ಉತ್ಸವ ಆಯೋಜನೆ
ನದಿ ಉತ್ಸವದ ಮಾದರಿಯಲ್ಲೇ ಈ ಬಾರಿ ದ್ವೀಪ ಉತ್ಸವ ಆಯೋಜನೆಗೆ ನಿರ್ಧರಿಸಿ 1 ಕೋ.ರೂ. ಅನುದಾನಕ್ಕೆ ಜಿ.ಪ್ರ. ಅಭಿವೃದ್ಧಿ ಸಮಿತಿಯಿಂದ ಈ ಹಿಂದೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಹೋಗಿತ್ತು. ಆದರೆ ದ್ವೀಪ ಉತ್ಸವ ಆಯೋಜನೆಯಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ಗಳು ಇರುವುದರಿಂದ ಇದರ ಬದಲು ಕಳೆದ ಬಾರಿಯಂತೆ ನದಿ ಉತ್ಸವವನ್ನು ಆಯೋಜಿಸುವ ಚಿಂತನೆ ಇದ್ದು ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
– ಉದಯ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು - ಕೇಶವ ಕುಂದರ್