Advertisement
ಹೌದು, ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಿ ರುವುದಕ್ಕೂ ಮುಂಬಯಿಯಿಂದ ಬಂದ ಈ ಆ್ಯಂಬುಲೆನ್ಸ್‌ಗೂ ಸಂಬಂಧ ಇದೆ ಎನ್ನುವುದು ಸ್ಪಷ್ಟವಾಗಿದೆ. ಈ ಆ್ಯಂಬುಲೆನ್ಸ್‌ನಲ್ಲಿದ್ದ ಪಾರ್ಥೀವ ಶರೀರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಏಳು ಜನರಲ್ಲಿ ನಾಲ್ವರಿಗೆ ಕೋವಿಡ್-19 ದೃಢವಾಗಿದೆ.
Related Articles
Advertisement
ಮಂಡ್ಯಕ್ಕೆ ತಂದಿದ್ದು ಏಕೆ?ಮೃತ ವ್ಯಕ್ತಿಯ ಒಬ್ಟಾಕೆ ಪುತ್ರಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿದ್ದಾರೆ. ಇವರು ತಂದೆಯ ಅಂತಿಮ ದರ್ಶನ ಪಡೆಯಲು ಆಸೆ ವ್ಯಕ್ತಪಡಿಸಿದ್ದರಿಂದ ಮೃತದೇಹಕ್ಕೆ ದೇಸಾಯಿ ಆಸ್ಪತ್ರೆಯ ಸರಕಾರಿ ಆ್ಯಂಬುಲೆನ್ಸ್ ನಲ್ಲಿಟ್ಟು ಬಿ. ಕೊಡಗಹಳ್ಳಿಗೆ ಕರೆತರಲಾಯಿತು. ಆ್ಯಂಬುಲೆನ್ಸ್‌ನಲ್ಲಿ ಪತ್ನಿ, ಪುತ್ರ, ಪುತ್ರಿ, ಅಳಿಯ, ಮೊಮ್ಮಗ ಇದ್ದರು. ಈ ಪೈಕಿ ಮೃತನ ಪುತ್ರ, ಪುತ್ರಿ, ಮೊಮ್ಮಗ ಹಾಗೂ ಕೆ.ಆರ್. ಪೇಟೆಯಲ್ಲಿದ್ದ ಇನ್ನೊಬ್ಬ ಪುತ್ರಿಗೆ ಸೋಂಕು ಕಾಣಿಸಿಕೊಂಡಿದೆ. ಆದರೆ ಮೃತನ ಪತ್ನಿ ಹಾಗೂ ಅಳಿಯನಿಗೆ ಸೋಂಕು ಕಾಣಿಸಿಕೊಂಡಿಲ್ಲ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿ. ಕೊಡಗಹಳ್ಳಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.