ಬೆಂಗಳೂರು: ಕೋವಿಡ್ 19 ಸೊಂಕು ವ್ಯಾಪಕ ಹರಡುವಿಕೆ ತಡೆಗೆ ಸಾಮಾಜಿಕ ಅಂತರ ಪಾಲನೆ ಮುಖ್ಯವಾಗಿದ್ದು, ಇದು ಇ- ಕಾಮರ್ಸ್ ಸಂಸ್ಥೆಗಳ ವ್ಯಾಪಾರ ವಹಿವಾಟು ವೃದ್ಧಿಗೆ ಉತ್ತೇಜನಕಾರಿಯಾಗುವ ಲಕ್ಷಣ ಕಾಣುತ್ತಿದೆ. ಪ್ರಮುಖ ನಗರಗಳು ಮಾತ್ರವಲ್ಲದೇ ಎರಡನೇ ಹಂತದ ನಗರ, ಪಟ್ಟಣ ಗಳಲ್ಲೂ ವಹಿವಾಟು ವೃದ್ಧಿಯ ನಿರೀಕ್ಷೆ ಹುಟ್ಟಿಸಿದೆ. ಆದರೆ ಸಣ್ಣಪುಟ್ಟ ಚಿಲ್ಲರೆ, ಸಗಟು ವ್ಯಾಪಾರಿಗಳಿಗೆ ತೀವ್ರ ಹೊಡೆತ ಬೀಳುವ ಆತಂಕವೂ ಮೂಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನಷ್ಟೇ ಆನ್‌ಲೈನ್ ಮೂಲಕ ಪೂರೈಸಲು ಅವಕಾಶವಿದ್ದು, ಪ್ರತಿಷ್ಠಿತ ಇ- ಕಾಮರ್ಸ್ ಸಂಸ್ಥೆಗಳು ಇತ್ತ ಹೆಚ್ಚು ಗಮನಹರಿಸಿವೆ. ಅಗತ್ಯ ವಸ್ತುಗಳ ಪೂರೈಕೆ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿ ಮುಂದೆ ಇತರೆ ಆಯ್ದ ವಸ್ತುಗಳ ಖರೀದಿಗೂ ಇ- ಕಾಮರ್ಸ್ ವೇದಿಕೆಯನ್ನು ಆಶ್ರಯಿಸು ವಂತೆ ಮಾ ಡುವ ಉತ್ಸಾಹ ದಲ್ಲೂ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಲಾಕ್‌ಡೌನ್ ತೆರವಾದ ಬಳಿಕ ಕೆಲ ತಿಂಗಳಲ್ಲೇ ಇ- ಕಾಮರ್ಸ್ ಸಂಸ್ಥೆಗಳ ವಹಿ ವಾಟು ವೃದ್ಧಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಮಾರು ಕಟ್ಟೆ ವಿಶ್ಲೇಷಕರು ಹೇಳುತ್ತಾರೆ.
ಆದರೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಇ- ಕಾಮರ್ಸ್ ಸಂಸ್ಥೆಗಳು ಸಗಟು- ಚಿಲ್ಲರೆ ವ್ಯಾಪಾರಕ್ಕೆ ಪೈಪೋಟಿ ನೀಡುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು. ಸುಮಾರು 14 ಇ- ಕಾಮರ್ಸ್ ಸಂಸ್ಥೆಗಳು ರಾಜ್ಯದ ಪ್ರಮುಖ ನಗರ, ಎರಡನೇ ಹಂತದ ಗರ- ಪಟ್ಟಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸೇವೆ ವಿಸ್ತರಿಸದ ಕಾರಣ ಮಾರುಕಟ್ಟೆಯಲ್ಲಿ ಇ- ಕಾಮಸ್‌ಸಂಸ್ಥೆಗಳ ವ್ಯಾಪ್ತಿಗೂ ಮಿತಿ ಇದೆ. ಕಿರಾಣಿ ಅಂಗಡಿ, ಮಳಿಗೆ, ಡಿಪಾರ್ಟ್‌ಮೆಂಟ್ ಸ್ಟೋರ್, ಸೂಪರ್ ಮಾರ್ಕೆಟ್‌ಗಳೇ ವ್ಯವಹಾರದಲ್ಲಿ ಇಂದಿಗೂ ಪ್ರಭುತ್ವ ಪಡೆದಿವೆ. ಲಾಕ್ ಡೌನ್ ಜಾರಿ ಅವಧಿ ಹಾಗೂ ಸಡಿಲಿಕೆಯಲ್ಲಿ ಅಗತ್ಯ ವಸ್ತು ಪೂರೈಕೆಗೆ ಅವಕಾಶವಿದ್ದ ಕಾರಣ ಇ- ಕಾಮರ್ಸ್ ಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳು ತ್ತಿದ್ದು, ಮುಂದೆ ವ್ಯಾಪಾರ- ವಹಿವಾಟು ವೃದ್ಧಿಯ ನಿರೀಕ್ಷೆಯಲ್ಲಿದೆ.
ಇ-ಕಾಮರ್ಸ್ ವಹಿವಾಟು ವೃದ್ಧಿನಿರೀಕ್ಷೆ: ಲಾಕ್‌ಡೌನ್ ತೆರವಿನ ಬಳಿಕ ಇ- ಕಾಮರ್ಸ್ ಸೇವೆ ಬಳಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಬೇಕೆನಿಸಿದ ವಸ್ತುಗಳನ್ನು ಕುಳಿತಲ್ಲೇ ಸ್ಪರ್ಧಾತ್ಮಕ ಬೆಲೆಯಲ್ಲಿ ುುವ ಅವಕಾಶವಿರುವುದರಿಂದ ಸಹಜವಾಗಿ ಇ-ಕಾಮರ್ಸ್‌ನ ಗ್ರಾಹಕರು ಹಾಗೂ ನೋಂದಣಿ ಯಾಗುವ ಮಳಿಗೆದಾರರ ಸಂಖ್ಯೆ ಹೆಚ್ಚಾಗಬಹುದು ಎಂದು ಆರ್ಥಿಕ ಯೋಜನಾ ತಜ್ಞರಾದ ಇನ್μನಿಟಿ ಇನ್ ವೆಸ್ಟ್‌ಮೆಂಟ್ಸ್‌ನ ಸಂಸ್ಥಾಪಕ ಸೂರಜ್ ಶ್ರಾಫ್ ತಿಳಿಸಿದ್ದಾರೆ. ಪ್ರಮುಖ ನಗರಗಳಲ್ಲಿ ಇ-ಕಾಮರ್ಸ್ ಸಂಸ್ಥೆಗಳ ವಹಿವಾಟು ಶೇ. 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಎರಡನೇ ಹಂತದ ನಗರ, ಪಟ್ಟಣಗಳಲ್ಲಿ ಸದ್ಯ ವಹಿವಾಟು ಪ್ರಮಾಣ ಕಡಿಮೆಯಿದ್ದು, ದುಪ್ಪಟ್ಟಾಗುವ ಸಾಧ್ಯತೆ ಇದೆ. ಮಾರಾಟಗಾರರು ಸಹ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ವ್ಯವಹರಿಸುವುದು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲಎಂದು ಹೇಳಿದ್ದಾರೆ.
ಇ- ಕಾಮರ್ಸ್‌ಗಿಂತ ಸಾಮಾನ್ಯ ವ್ಯಾಪಾರಕ್ಕೆ ಹೊಡೆತ: ಲಾಕ್‌ಡೌನ್, ಸಾಮಾಜಿಕ ಅಂತರ ಇತರೆ ಕಾರಣಕ್ಕೆ ಅಗತ್ಯ ವಸ್ತು ಪೂರೈಕೆಗೂ ಇ- ಕಾಮರ್ಸ್ ಸಂಸ್ಥೆಗಳು ವಿಶೇಷ ಗಮನ ನೀಡಿವೆ. ಇದು ನೇರವಾಗಿ ಸಗಟು ಹಾಗೂ ಚಿಲ್ಲರೆ ವ್ಯಾಪಾರದ ಮೇಲೆ ಪರಿಣಾಮ ಬೀಳುತ್ತದೆ. ಉದಾರೀ ಕರಣ, ಖಾಸಗೀಕರಣ, ಜಾಗತೀಕರಣ, ಹೀಗೆ ನಾನಾ ಬೆಳವಣಿಗೆ ಯಿಂದ ಸಣ್ಣ ಪುಟ್ಟ ವ್ಯಾಪಾರ ಮಳಿಗೆದಾರರು ನಿರಂತರವಾಗಿ ನಲುಗಿದ್ದಾರೆ. ಇದೀಗ ಅಗತ್ಯ ವಸ್ತುಗಳ ಪೂರೈಕೆಗೂ ಇ- ಕಾಮರ್ಸ್ ಸಂಸ್ಥೆಗಳು ವ್ಯವಹಾರವನ್ನು ವ್ಯಾಪಕವಾಗಿ ವಿಸ್ತರಿ ಸಿದರೆ ಚಿಲ್ಲರೆ ವ್ಯಾಪಾರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.
ಲಾಕ್ ಡೌನ್‌ನಿಂದ ಇ- ಕಾಮರ್ಸ್ ಸಂಸ್ಥೆ ಗಳಿಗಿಂತ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ಬಿದ್ದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಸಗಟು, ಚಿಲ್ಲರೆ ವ್ಯಾಪಾ ರಕ್ಕೆ ಹೆಚ್ಚಿನ ಹೊಡೆತ ಬೀಳಬ ಹುದು. ಏಕೆಂದರೆ ನಿರಂತರ ವಾಗಿ ದಾಸ್ತಾನು ಖಾಲಿ ಮಾಡಬೇಕು. ಹೊಸ ದಾಸ್ತಾನು ಪಡೆಯಬೇಕು. ಈ ನಡುವೆ ಗ್ರಾಹಕರು ತಪ್ಪದಂತೆ ನೋಡಿ ಕೊಳ್ಳುತ್ತಾ ಅವರು ಬಯಸುವ ಉತ್ಪನ್ನಗಳನ್ನು ರಿಯಾಯ್ತಿ ದರಪೂರೈಸಬೇಕಾದ ಸವಾಲು ಇರುತ್ತದೆ. ಇ- ಕಾಮರ್ಸ್ ಸಂಸ್ಥೆಗಳು ಸ್ಪರ್ಧಾತ್ಮಕ ಬೆಲೆಗೆ ಮಾರಿದರೆ ಅದರ ಹೊಡೆತವನ್ನು ಎದುರಿಸಬೇಕಾಗುತ್ತದೆ ಎಂದು ಇ- ಕಾಮರ್ಸ್ ವ್ಯವಹಾರವಿಶ್ಲೇಷಕರೊಬ್ಬರು ತಿಳಿಸಿದರು.
ಪೈಪೋಟಿ ಒಡ್ಡಲಾರವು: ಕೊರೊನಾ ಸೋಂಕು ಕಾಣಿಸಿಕೊಂಡು ಲಾಕ್‌ಡೌನ್ ಆದ ಸಂದರ್ಭದಲ್ಲೂ ಸಗಟು, ಚಿಲ್ಲರೆ ಮಾರಾಟಗಾರರು ಜೀವದ ಹಂಗು ತೊರೆದು ಜನರಿಗೆ ಅಗತ್ಯವಾದ ವಸ್ತುಗಳನ್ನು ಮಾರಾಟ ಮಾಡಿದ್ದೇವೆ. ಆ ಸಂದರ್ಭದಲ್ಲಿ ಇ- ಕಾಮರ್ಸ್ ಸಂಸ್ಥೆಗಳು ಹೆಚ್ಚಿನಪ್ರಮಾಣದಲ್ಲಿ ಸೇವೆಗೆ ಮುಂದಾಗಿದ್ದು ಕಾಣಲಿಲ್ಲ. ಅಲ್ಲದೇ ಮನಬಂದಂತೆ ರಿಯಾಯ್ತಿಗಳನ್ನೂ ಘೋಷಿಸುತ್ತಿಲ್ಲ. ಜನರಿಗೆ ಇವೆಲ್ಲಾ ಅರ್ಥವಾಗಲಿದೆ. ಅಗತ್ಯ ವಸ್ತು ಮಾರಾಟದಲ್ಲಿ ಸಗಟು, ಚಿಲ್ಲರೆ ವ್ಯಾಪಾರಕ್ಕೆ ಇ- ಕಾಮರ್ಸ್ ಸಂಸ್ಥೆಗಳು ಯಾವುದೇ ಪೈಪೋಟಿ ಒಡ್ಡಲಾರವು.
-ರಮೇಶ್‌ಚಂದ್ರ ಲಹೋಟೆ, ಎಪಿಎಂಸಿ ಆಹಾರಧಾನ್ಯ, ಬೇಳೆಕಾಳು ಸಗಟು ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ
* ಎಂ.ಕೀರ್ತಿಪ್ರಸಾದ್