Advertisement

ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

12:31 PM Apr 19, 2017 | Team Udayavani |

ಹುಣಸೂರು: ಕಳೆದೆರಡು ತಿಂಗಳಿನಿಂದ ಸಾಕು ಪ್ರಾಣಿಗಳನ್ನು ಕೊಂದು ತಿಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ 3 ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ತಾಲೂಕಿನ ಬಿಳಿಕೆರೆ ಹೋಬಳಿ ಗದ್ದಿಗೆ ಬಳಿಯ ಶಾಂತಿಪುರ ಗ್ರಾಮದ ಎಲಿಜಬತ್‌ ರಾಣಿ ಎಂಬುವವರ ಜೋಳದ ಹೊಲದಲ್ಲಿಟ್ಟಿದ್ದ ಬೋನಿನಲ್ಲಿ ಬಂಧಿಯಾಗಿದೆ.

Advertisement

ಘಟನೆ ವಿವರ: ಕಳೆದರೆರಡು ತಿಂಗಳಿನಿಂದ ರಾತ್ರಿವೇಳೆ  ಹತ್ತಾರು ನಾಯಿಗಳನ್ನು ಕೊಂದು ಹಾಕಿ, ಹಲಗು ವೇಳೆಯೇ ಜಮೀನುಗಳಲ್ಲಿ ಮೇವಿಗೆ ಬಿಟ್ಟಿದ್ದ ದನಕರು ಗಳನ್ನು  ತಿನ್ನುತ್ತಿದ್ದ ಚಿರತೆಯ ಕಾಟದಿಂದ ಗ್ರಾಮಸ್ಥರು ರೋಸಿ ಹೋಗಿದ್ದರು.

ಸೋಮವಾರ ಗ್ರಾಮದ ಎಲಿಜಬತ್‌ ರಾಣಿರವರ  ಜೋಳದ ಹೊಲದಲ್ಲಿ ನಾಯಿಯನ್ನು ಕೊಂದು ಅರ್ಧತಿಂದು ಬಿಸಾಡಿ ಹೋಗಿತ್ತು, ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಂರಿಂದ ಸಂಜೆಯೇ ಬೋನ್‌ ಇಟ್ಟು ನಾಯಿ ಮಾಂಸ ಇರಿಸಿ ಚಿರತೆಯ ಸೆರೆಗೆ ಬಲೆ ಬೀಸಲಾಗಿತ್ತು, ಮಾಂಸ ತಿನ್ನುವ ಆಸೆಯಿಂದ ಬಂದ ಚಿರತೆಯು ಬೋನಿನಲ್ಲೇ ಸೆರೆಯಾಗಿದೆ.

ಸ್ಥಳಕ್ಕೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಎಸಿಎಫ್ ಸೋಮಪ್ಪ ಭೇಟಿ ನೀಡಿದ್ದರು. ಆರ್‌ಎಫ್ಒ ಶಾಂತಕುಮಾರಸ್ವಾಮಿ, ಎಆರ್‌ಎಫ್ಒ ಹರೀಶ್‌  ಹಾಗೂ ಸಿಬ್ಬಂದಿ ಸೆರೆಸಿಕ್ಕಿರುವ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಮೂರ್ಕಲ್‌  ವಲಯದಲ್ಲಿ ಬಿಡಲಾಗಿದೆ ಎಂದು ಎಸಿಎಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next