Advertisement
ಸಿರುಗುಪ್ಪ ಮತ್ತು ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ರೈತರಿಗೆ ಕಬ್ಬು ಬೆಳೆಯಿರಿ, ನಾವೇ ಖರೀದಿಸುತ್ತೇವೆಂದು ಕಾರ್ಖಾನೆಯವರು ಮನೆ-ಮನೆಗೆ ತೆರಳಿ ಮನವಿ ಮಾಡಿದ್ದರು. ನಂತರ ಬೇರೆ ಬೆಳೆ ಬೆಳೆಯದಂತೆ ಒಪ್ಪಂದ ಮಾಡಿಕೊಂಡು ಕಬ್ಬನ್ನೇ ಬೆಳೆಯುವಂತೆ ನೋಡಿಕೊಂಡಿದ್ದರು. ಕಬ್ಬು ಬೆಳೆಯಲು ರೈತರು ಒಂದು ಎಕರೆಗೆ ಸುಮಾರು 60-70 ಸಾವಿರ ರೂ. ಖರ್ಚು ಮಾಡಿದ್ದು, ಈಗ ಕಬ್ಬು ಕಟಾವಿನ ಹಂತಕ್ಕೆ ಬಂದು ನಿಂತಿದೆ.
Related Articles
ಗೌಸ್‌ಸಾಬ್, ರೈತ ಮುಖಂಡ
Advertisement
ಕಾರ್ಖಾನೆಯವರು ಕಬ್ಬು ಖರೀದಿಸದಿದ್ದರೆ ಉಂಟಾಗುವ ನಷ್ಟದಿಂದ ವಿಷ ಕುಡಿದು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು.ರಂಗಪ್ಪ, ರೈತ, ಉತ್ತನೂರು ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ಸಕ್ಕರೆ ಮಾರಾಟದೊಂದಿಗೆ ವಿದ್ಯುತ್ ಉತ್ಪಾದಿಸುವ ಮೂಲಕ ಆರ್ಥಿಕವಾಗಿ ಲಾಭ ಗಳಿಕೆಯತ್ತ ಸಾಗಿತ್ತು. ಆದರೆ ವಿದ್ಯುತ್‌ಗೆ ಉತ್ತಮ ಬೆಲೆ ದೊರೆಯದಿದ್ದರಿಂದ ಸಕ್ಕರೆ ಕಾರ್ಖಾನೆ ಮುಚ್ಚಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಕ್ಕರೆ ಸಚಿವ ಕೆ.ಜೆ. ಜಾರ್ಜ್ ಮತ್ತು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ.
ಎಂ.ಎಸ್.ಸೋಮಲಿಂಗಪ್ಪ, ಶಾಸಕ