Advertisement
ತುಂಬಿ ತುಳುಕುವ ಶಾಲೆವಳಕಾಡು ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ ವರ್ಷ ಕೂಡ 647 ಮಂದಿ ವಿದ್ಯಾರ್ಥಿಗಳಿದ್ದರು. ಒಟ್ಟು 17 ವಿಭಾಗಗಳಲ್ಲಿ ತರಗತಿಗಳು ನಡೆದಿವೆ. ಕಳೆದ ವರ್ಷ ಒಂದನೇ ತರಗತಿಗೆ(ಕನ್ನಡ ಮಾಧ್ಯಮ) ಒಟ್ಟು 60 ಮಕ್ಕಳು ದಾಖಲಾಗಿದ್ದರು. ಎ, ಬಿ,ಸಿ ಮತ್ತು ಡಿ ಎಂದು ನಾಲ್ಕು ವಿಭಾಗ ಮಾಡಲಾಗಿತ್ತು. ಈ ವರ್ಷ ಮತ್ತಷ್ಟು ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ನಿರೀಕ್ಷೆ ಇದೆ.
ಪ್ರಸ್ತುತ ಇಲ್ಲಿ 11 ಮಂದಿ ಮಾತ್ರ ಖಾಯಂ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಅನುಪಾತ ಪ್ರಕಾರ 20 ಮಂದಿ ಇರಬೇಕಿತ್ತು. ಕಳೆದ ವರ್ಷ 5 ಮಂದಿ ಅತಿಥಿ ಶಿಕ್ಷಕರು, ಕಂಪ್ಯೂಟರ್ ಹಾಗೂ ಗೌರವ ಶಿಕ್ಷಕರ ಸೇವೆಯೊಂದಿಗೆ ತರಗತಿಗಳು ನಡೆದಿದ್ದವು. ಇಲಾಖೆ ಸಹಕರಿಸಿತ್ತು. ಆದರೆ ಈ ಬಾರಿ ಹೇಗೆಂದು ಗೊತ್ತಿಲ್ಲ. ಇನ್ನೂ 9 ಮಂದಿ ಶಿಕ್ಷಕರ ಅಗತ್ಯವಿದೆ. ಶಿಕ್ಷಕರ ಸಂಖ್ಯೆ ಕಡಿಮೆಯಾದರೆ ಅದರಿಂದ ಮೇಲಿನ ತರಗತಿಗಳ ಮೇಲೂ ಪ್ರಭಾವ ಬೀರುತ್ತದೆ. ಕೊಠಡಿಗಳ ಸಂಖ್ಯೆಯೂ ಕಡಿಮೆ ಇದೆ. ಕಳೆದ ವರ್ಷ ಎರಡು ಕೊಠಡಿಗಳನ್ನು ಪ್ರೌಢಶಾಲೆಯವರು ಪಡೆದಿದ್ದರು. ಅದನ್ನು ವಾಪಸ್ಸು ನೀಡಿದರೆ ದೊಡ್ಡ ಸಮಸ್ಯೆಯಾಗದು. ಇಲ್ಲವಾದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರು.
Related Articles
ನನ್ನ ದೊಡ್ಡ ಮಗಳು ವಳಕಾಡು ಶಾಲೆಯಲ್ಲಿ 4ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಎರಡನೆಯವಳನ್ನು ಕೂಡ ಇದೇ ಶಾಲೆಯಲ್ಲಿ ಓದಿಸಲು ನಿರ್ಧರಿಸಿದ್ದೆ. ಇದೀಗ ಇಲ್ಲಿ ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಆರಂಭವಾಗುತ್ತಿರುವುದು ಖುಷಿಯಾಗಿದೆ. ಆದರೆ ಇಲ್ಲಿ ಕ್ಲಾಸ್‌ರೂಮ್, ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಾಗಲೂ ಗುಣಮಟ್ಟ ಉತ್ತಮವೇ ಇತ್ತು. ಈ ವರ್ಷ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇದಕ್ಕೆ ಪೂರಕವಾಗಿ ಶಿಕ್ಷಕರು, ಕೊಠಡಿಗಳ ಅಗತ್ಯವಿದೆ. ಇಲಾಖೆಯ ಜತೆಗೆ ದಾನಿಗಳು ಕೂಡ ಸಹಕರಿಸಿದರೆ ಒಳ್ಳೆಯದು.
– ರಶ್ಮಿ, ಹೆತ್ತವರು
Advertisement