Advertisement

Pakistan: ಅನ್ವಾರ್‌ ಹಖ್‌ ಪಾಕ್‌ನ ಉಸ್ತುವಾರಿ ಪ್ರಧಾನಿ ನವೆಂಬರ್‌ ವೇಳೆ ಚುನಾವಣೆ ಸಾಧ್ಯತೆ

08:42 PM Aug 12, 2023 | Team Udayavani |

ಇಸ್ಲಾಮಾಬಾದ್‌: ಪಾಕ್‌ ಸಂಸತ್‌ ವಿಸರ್ಜನೆಯಾಗಿದ್ದೂ ಆಗಿದೆ, ಚುನಾವಣೆಗೆ ಸಿದ್ಧತೆಯೂ ಶುರುವಾಗಿದೆ. ಇದರ ಮಧ್ಯೆ ಅವಿರೋಧವಾಗಿ ಬಲೂಚಿಸ್ತಾನ ಅವಾಮಿ ಪಾರ್ಟಿ ಸಂಸದ ಅನ್ವಾರ್‌ ಉಲ್‌ ಹಖ್‌ ಕಕರ್‌ರನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಲಾಗಿದೆ. ಪಾಕ್‌ ಸಂವಿಧಾನದ ಪ್ರಕಾರ ಸಂಸತ್‌ ವಿಸರ್ಜನೆಯಾದ 8 ದಿನಗಳೊಳಗಾಗಿ ಉಸ್ತುವಾರಿ ಪ್ರಧಾನಿ ನೇಮಕಗೊಳ್ಳಬೇಕು.

Advertisement

ಈ ಕುರಿತಂತೆ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್‌ ಮತ್ತು ವಿಸರ್ಜನೆಯಾಗುವವರೆಗೆ ಪ್ರಧಾನಿಯಾಗಿದ್ದ ಶೆಹಬಾಜ್‌ ಶರೀಫ್ ನಡುವೆ ಚರ್ಚೆ ನಡೆಯುತ್ತಲೇ ಇತ್ತು. ಅಂತಿಮವಾಗಿ ಅನ್ವಾರ್‌ ಹಖ್‌ರನ್ನು ಉಸ್ತುವಾರಿ ಎಂದು ಹೆಸರಿಸಲಾಗಿದೆ. ನೂತನ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅನ್ವಾರ್‌ ಪ್ರಧಾನಿಯಾಗಿರುತ್ತಾರೆ. ಈ ಬಗ್ಗೆ ಪಾಕಿಸ್ತಾನ ಅಧ್ಯಕ್ಷ ರಶೀದ್‌ ಅಳ್ವಿ ಸಮ್ಮತಿ ಸೂಚಿಸಿದ್ದಾರೆ.

ಪಾಕ್‌ ಸಂವಿಧಾನದ ಪ್ರಕಾರ ಸಂಸತ್‌ ವಿಸರ್ಜನೆಯಾದ 90 ದಿನಗಳೊಳಗಾಗಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎಂದು ಆಂತರಿಕ ಮೂಲಗಳು ಹೇಳಿವೆ. ಪಾಕಿಸ್ತಾನದಲ್ಲಿ ಹೊಸತಾಗಿ ಜನಗಣತಿ ನಡೆದಿದೆ. ಇದರನ್ವಯ ಹೊಸ ಸಾಂವಿಧಾನಿಕ ಕ್ಷೇತ್ರಗಳನ್ನು ಗುರ್ತಿಸಲು ಚುನಾವಣಾ ಆಯೋಗಕ್ಕೆ ಸಮಯ ಬೇಕಾಗುತ್ತದೆ. ಹೀಗಾಗಿ ಚುನಾವಣೆ ವಿಳಂಬವಾಗಿ ನಡೆಯಬಹುದು ಎನ್ನಲಾಗಿದೆ.

ಇನ್ನು ಒಂದೂವರೆ ವರ್ಷದ ಹಿಂದೆ ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ಉಡುಗೊರೆಗಳನ್ನು ಮಾರಿದ ಪ್ರಕರಣದಲ್ಲಿ ಮೂರು ವರ್ಷ ಜೈಲುಶಿಕ್ಷೆಗೊಳಗಾಗಿದ್ದಾರೆ, ಮಾತ್ರವಲ್ಲ ಐದು ವರ್ಷ ಚುನಾವಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿರ್ಬಂಧಗೊಳಗಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯಬೇಕಾಗಿದೆ. ಒಟ್ಟಾರೆ ಪಾಕ್‌ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next