Advertisement

ಒಂದು ಫೋಟೋದ ಪೆಡಲ್‌ ಕ್ರಾಂತಿ

04:21 PM Jun 23, 2018 | |

  ಇದೆಲ್ಲ ಒಂಥರಾ ಚಿಟ್ಟೆಗೆ ರೆಕ್ಕೆ ಅಂಟಿಸಿದ ಖುಷಿಯಂತೆ..!
  ಕೈವಾರ ದೇಗುಲದ ಎದುರು ಒಬ್ಬಳು ಪುಟಾಣಿ. ಹೆಸರು ಶೈಲಾ. ಭಕ್ತಾದಿಗಳೆಲ್ಲ ದೇವರ ಬಳಿ ಒಳನಡೆದಾಗ, ಅವರೆಲ್ಲರ ಚಪ್ಪಲಿ ಕಾಯುವುದು ಶೈಲಾಳ ಅಪ್ಪ. ತಂದೆಯ ಎದುರಿನಲ್ಲಿ ಆ ಪುಟಾಣಿ ಒಂದು ಮುರುಕಲು ಸೈಕಲ್ಲಿನ ಪೆಡಲ್‌ ತುಳಿದು ಹಿಗ್ಗುತ್ತಿದ್ದಳು. ಲಂಗಕ್ಕೆಲ್ಲ ಆಯಿಲ್‌ ಅಂಟಿಕೊಂಡು, ಇನ್ನಷ್ಟು ಮುದು¾ದ್ದಾಗಿ ಕಾಣಿಸುತ್ತಿದ್ದಳು. ಯಾರೋ ಉಳ್ಳವರು ಸೈಕಲ್ಲಿನ ಲಗಾಡಿ ತೆಗೆದು, ಇನ್ನು ಇದು ನಾಲಾಯಕ್ಕು ಅಂತಂದುಕೊಂಡು ಆಕೆಯ ಕೈಗೆ ಅದನ್ನು ವರ್ಗಾಯಿಸಿದ್ದರು. ಆ ಸೈಕಲ್‌ಗೆ ಸೀಟೇ ಇದ್ದಿರಲಿಲ್ಲ. ಬೆಲ್ಲೂ ಇರಲಿಲ್ಲ. ಬ್ರೇಕಂತೂ ಬೀಳುತ್ತಲೇ ಇರಲಿಲ್ಲ. ಬಣ್ಣವೆಲ್ಲ ಮಾಸಿ ಹಪ್ಪಳಿಕೆಯಾಗಿ ಉದುರಿಬಿದ್ದು, ಮೈ ತುಂಬಾ ತುಕ್ಕು ಮೆತ್ತಿಕೊಂಡಿದ್ದ ಸೈಕಲ್‌ ಅನ್ನು ಅತ್ಯಂತ ಸಂಭ್ರಮದಿಂದ ತುಳಿಯುತ್ತಿದ್ದಳು. ಕೆದರಿದ ಕೂದಲಿನಲ್ಲಿ ನಗುತ್ತಿದ್ದ ಅವಳ ಫೋಟೋವನ್ನು ಸಂಪತ್‌ ರಾಮಾನುಜಂ ಕ್ಲಿಕ್ಕಿಸಿದರು.

Advertisement

  ಆ ಫೋಟೋಗೆ ಚೆಂದದ ಫ್ರೆàಮ್‌ ಹಾಕಿಸಿ, ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟಿನಲ್ಲಿ ನೇತುಹಾಕಿದರು. ಅದರ ಕೆಳಗೊಂದು ಕ್ಯಾಪ್ಷನ್ನನ್ನೂ ಬರೆದಿದ್ದರು: “ನಿಮ್ಮ ಮನೆಯ ಮೂಲೆಯಲ್ಲಿ ಕುಳಿತ ಸೈಕಲ್‌ ಏನಾಗಿದೆ?’ ಅಂತ. ಆ ಫೋಟೋ ನೋಡಿದ ಕೆಲವೇ ತಾಸುಗಳಲ್ಲಿ 4 ಸೈಕಲ್ಲುಗಳು ಒಟ್ಟಾದವು! ಪುಟಾಣಿಯ ಆ ಒಂದೇ ಒಂದು ಫೋಟೋ ಈಗ 330 ಸೈಕಲ್ಲುಗಳನ್ನು ಒಟ್ಟುಮಾಡಿದೆ!

  ಅಪಾರ್ಟ್‌ಮೆಂಟ್‌ ಫೆಡರೇಶನ್ನಿನ ಸೆಕ್ರೇಟರಿಯಾಗಿರುವ ಸಂಪತ್‌ ರಾಮಾನುಜಂ, ಬಡ ಮಕ್ಕಳಿಗೆ ಸೈಕಲ್‌ ಹಂಚುವುದರಲ್ಲಿಯೇ ಬದುಕಿನ ಖುಷಿಯನ್ನು ಕಾಣುತ್ತಿದ್ದಾರೆ. “ಬೆಂಗಳೂರಿನ ಯಾವುದೇ ಅಪಾರ್ಟ್‌ಮೆಂಟಿಗೆ ಹೋಗಿ ನೋಡಿ, ಅಲ್ಲಿ ಕಮ್ಮಿಯೆಂದರೂ ಇಪ್ಪತ್ತು ಸೈಕಲ್‌ಗ‌ಳು ವೇಸ್ಟಾಗಿ ಬಿದ್ದಿರುತ್ತವೆ. ಮಾಲೀಕರು ಶಿಫಾrಗಿರುತ್ತಾರೆ; ಮಕ್ಕಳು ದೊಡ್ಡವರಾಗಿ ಕಂಪ್ಯೂಟರಿನಲ್ಲಿ ಕಾರ್‌ ರೇಸ್‌ ಆಡುತ್ತಿರುತ್ತಾರೆ; ಮೂಲೆಯಲ್ಲಿಟ್ಟ ಸೈಕಲ್‌ ಮೌನವಾಗಿ ಕುಳಿತಿರುತ್ತೆ. ಅದನ್ನು ಏನು ಮಾಡುವುದು ಎನ್ನುವುದೇ ಬಹುತೇಕರ ಪ್ರಶ್ನೆ’ ಎನ್ನುತ್ತಾರೆ ಸಂಪತ್‌.

  ಆದರೆ, ಬೆಂಗಳೂರಿನ ಹೊರವಲಯದಲ್ಲಿ ಬೆಳಗ್ಗೆಯೋ, ಸಂಜೆಯೋ ಸುಮ್ಮನೆ ಸುತ್ತಾಡಿ ಬನ್ನಿ. ಭಾರದ ಬ್ಯಾಗುಗಳನ್ನು ಬೆನ್ನಿಗೇರಿಸಿಕೊಂಡು, ಸರ್ಕಾರಿ ಶಾಲೆಗೆ ಹೊರಟ ಬಡ ಮಕ್ಕಳು ಅಲ್ಲಿ ನಾಲ್ಕಾರು ಕಿ.ಮೀ. ನಡೆದೇ ಸಾಗುತ್ತಿರುತ್ತಾರೆ. ಶಾಲಾವಾಹನಗಳ ಸವಾರಿಯ ಸುಖ ಅವರಿಗೆ ದಕ್ಕಿರುವುದಿಲ್ಲ. ಹಾದಿಯಲ್ಲಿ ಬರುವ ವೆಹಿಕಲ್ಲುಗಳಿಗೆಲ್ಲ ಕೈ ಅಡ್ಡಹಾಕಿ ಲಿಫ್ಟ್ ಕೇಳುತ್ತಾ, “ನಮ್ಮನ್ನು ಜೋಪಾನವಾಗಿ ದಡ ಸೇರಿಸುವ ಪುಷ್ಪಕ ವಿಮಾನವೊಂದು ಸುಂಯ್ಯನೆ ಬರಲಿ’ ಎಂದು ಪ್ರಾರ್ಥಿಸುತ್ತಾ, ಭಾರದ ಹೆಜ್ಜೆಯನ್ನಿಡುತ್ತಿರುತ್ತಾರೆ. ಸಂಪತ್‌ ಅವರ ಕಣ್ಣಿಗೆ ಬಿದ್ದಿದ್ದೂ ಇಂಥ ಬಡಮಕ್ಕಳೇ.

   ಸಂಪತ್‌ ತಡಮಾಡಲಿಲ್ಲ. ಸೈಕ್ಲಿಂಗ್‌ ಕ್ಲಬ್‌, ಅಪಾರ್ಟ್‌ಮೆಂಟು ಸದಸ್ಯರನ್ನು ಸಂಪರ್ಕಿಸಿ, ಹಳೇ ಸೈಕಲ್‌ಗ‌ಳನ್ನು ಕಲೆಹಾಕುವ ಕಾಯಕಕ್ಕೆ ಮುಂದಾದರು. ಮೊದಲನೇ ವರ್ಷ 4, ಮರುವರ್ಷ 38, ಕಳೆದವರ್ಷ 220 ಸೈಕಲ್‌ಗ‌ಳು ಒಟ್ಟಾದವು. ಪ್ರತಿವರ್ಷ ಜೂನ್‌ನಿಂದ ಸೈಕಲ್‌ ಕಲೆಹಾಕುವ ಕೆಲಸ ಆರಂಭವಾಗುತ್ತೆ, ಆಗಸ್ಟ್‌ನಲ್ಲಿ ಆ ಮಕ್ಕಳಿಗೆ ಸೈಕಲ್‌ ವಿತರಿಸುವ ಈ ಪುಣ್ಯದ ಕೆಲಸಕ್ಕೆ “ಫ್ರೀಡಂ ಪೆಡಲ್ಸ್‌’ ಎಂಬ ಹೆಸರಿಟ್ಟಿದ್ದಾರೆ. ಸಂಪತ್‌ ಇದನ್ನು ಅನ್ವಯ ಫೌಂಡೇಶನ್‌ ಮೂಲಕ ಮಾಡುತ್ತಾರೆ. ಪ್ರಸಕ್ತ ವರ್ಷದ ಹಳೇ ಸೈಕಲ್‌ ಸಂಗ್ರಹ ಈಗಾಗಲೇ ಶುರುವಾಗಿದೆ.

Advertisement

  ದಾನಿಗಳಿಂದ ಗೆಳೆಯರೆಲ್ಲ ಸಂಗ್ರಹಿಸಿದ ಹಳೇ ಸೈಕಲ್ಲುಗಳನ್ನು ಒಂದು ಕಂಟೈನರ್‌ನಲ್ಲಿ ತುಂಬಿಕೊಂಡು, ವೈಟ್‌ಫೀಲ್ಡಿನ ತಮ್ಮ ಉಗ್ರಾಣಕ್ಕೆ ತರುತ್ತಾರೆ ಇವರು. ಕಾಡುಗೋಡಿಯಲ್ಲಿರುವ ಪರಿಚಿತ ಸೈಕಲ್‌ ಶಾಪ್‌ಗ್ಳಲ್ಲಿ ಅವನ್ನು ರಿಪೇರಿ ಮಾಡಿಸಿ, ಸಂಪೂರ್ಣವಾಗಿ ಯೋಗ್ಯವೆಂದೆನಿಸಿದ ನಂತರವೇ ಬಡಮಕ್ಕಳಿಗೆ ನೀಡುತ್ತಾರೆ. “ಒಂದು ತರಗತಿಯಲ್ಲಿ ಕೆಲವು ಮಕ್ಕಳಿಗಷ್ಟೇ ಕೊಟ್ಟಾಗ, ಇನ್ನುಳಿದವರಿಗೆ ಬೇಸರವಾಗುತ್ತೆ. ಹಾಗಾಗಿ, ಇಡೀ ತರಗತಿಯೇ ಸೈಕಲ್‌ ಒದಗಿಸುತ್ತಿದ್ದೇವೆ. ಕಳೆದವರ್ಷ ಸೀಗೆಹಳ್ಳಿಯ ಸರ್ಕಾರಿ ಶಾಲೆಯ 4,5,6ನೇ ತರಗತಿಯ ಮಕ್ಕಳಿಗೆ ಸೈಕಲ್‌ ವಿತರಿಸಿದ್ದೆವು’ ಎನ್ನುತ್ತಾರೆ ಸಂಪತ್‌.

  ಒಂದು ಸೈಕಲ್‌ಗೆ ಏನಿಲ್ಲವೆಂದರೂ 800- 1000 ರೂಪಾಯಿ ಖರ್ಚಾಗುತ್ತೆ. ತಮ್ಮದೇ ಹಣದಲ್ಲಿ ರಿಪೇರಿಯ ಖರ್ಚನ್ನು ಭರಿಸುವಾಗ ಸಂಪತ್‌ಗೆ, ಸ್ವಂತ ಮಕ್ಕಳಿಗಾಗಿ ಇದನ್ನೆಲ್ಲ ಮಾಡುತ್ತಿದ್ದೇನೆ ಎನ್ನುವ ಪ್ರೀತಿ ಅರಳುತ್ತದಂತೆ. 
  “ಹಾಗೆ ಗಿಫಾrಗಿ ಕೊಟ್ಟ ಆ ಸೈಕಲ್ಲುಗಳನ್ನು ಬಡ ಮಕ್ಕಳು ಅತ್ಯಂತ ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದಾರೆ. ಬಿಎಂಡಬ್ಲ್ಯು ಕಾರನ್ನು ಕೊಟ್ಟಾಗ, ನಾವು ಹೇಗೆ ಅದನ್ನು ಮನೆಮುಂದೆ ನಿಲ್ಲಿಸಿ ಶೋಕೇಸ್‌ ಮಾಡುತ್ತೇವೋ, ಹಾಗಿರುತ್ತೆ ಅವರ ಖುಷಿ’ ಎನ್ನುವುದು ಸಂಪತ್‌ ಮಾತು.

ಬಡಪುಟಾಣಿಗೆ ಕೊಟ್ಟ ಸರ್‌ಪ್ರೈಸ್‌ ಗಿಫ್ಟ್
ಒಮ್ಮೆ ಹಳೇ ಸೈಕಲ್ಲುಗಳನ್ನು ಇಳಿಸುತ್ತಿದ್ದೆವು. ಒಬ್ಬಳು 8 ವರ್ಷದ ಹುಡುಗಿ ನಮ್ಮನ್ನೇ ನೋಡುತ್ತಿದ್ದಳು. “ಅಂಕಲ್‌, ಈ ಸೈಕಲ್‌ಗ‌ಳನ್ನೆಲ್ಲ ಎಲ್ಲಿಗೆ ತಗೊಂಡ್ಹೊàಗ್ತಿàರಿ?’ ಅಂತ ಕೇಳಿದಳಾಕೆ. “ಇವೆಲ್ಲ ಹಳೇ ಸೈಕಲ್ಲುಗಳು. ರಿಪೇರಿಮಾಡಿ, ಬಡಮಕ್ಕಳಿಗೆ ಕೊಡ್ತೀವಿ’ ಅಂತ ಹೇಳಿದೆ. ಅದಕ್ಕೆ ಅವಳು, “ಹೌದಾ ಅಂಕಲ್‌? ನನಗೆ ಅಪ್ಪ ಇಲ್ಲ. ಶಾಲೆಗೆ 3 ಕಿ.ಮೀ. ನಡೆದೇ ಹೋಗ್ಬೇಕು. ಒಂದು ತಿಂಗಳ ಕೆಳಗೆ ಅಮ್ಮ ಇದೇ ಶಾಪ್‌ನಿಂದ ಹಳೇ ಸೈಕಲ್‌ ಕೊಡಿಸಿದ್ರು. ಅದು ಸರಿಯಿಲ್ಲ ಎಂದು, ಬದಲಿ ಸೈಕಲ್‌ ಕೇಳಿಕೊಂಡು ಬಂದಿದ್ದೇನೆ’ ಅಂತ ಹೇಳಿದಳು. ನಾನು ಕಣ್ಣೀರಾದೆ. ಮೊದಲಿಗೆ ಅವಳ ಮಾತಿನ ಧೈರ್ಯ ನನಗೆ ತುಂಬಾ ಹಿಡಿಸಿತು. ಇರುವುದರಲ್ಲೇ ಒಂದು ಉತ್ತಮ ಸೈಕಲ್‌ ಆರಿಸಿ, ಅದನ್ನು ಆಕೆಗೆ ಮುಂದೊಂದು ದಿನ ಸರ್‌ಪ್ರೈಸ್‌ ಆಗಿ ಕೊಟ್ಟೆ- ಸೈಕಲ್‌ ಹಂಚುವಾಗಿ ತಮಗೆ ಕಾಡಿದ ಕತೆಯೊಂದನ್ನು ಸಂಪತ್‌ ಹೀಗೆ ಬಿಚ್ಚಿಟ್ಟರು.

ನಿಮ್ಮ ಮನೆಯ ಸೈಕಲ್‌ ಮೂಲೆ ಸೇರಿದ್ದರೆ…
– ಆ ಸೈಕಲ್ಲನ್ನು ಮೂಲೆಯಲ್ಲಿಟ್ಟು ಸುಮ್ಮನೆ ತುಕ್ಕು ಹಿಡಿಯಲು ಬಿಡಬೇಡಿ. ಬಡವಿದ್ಯಾರ್ಥಿಗಳಿಗೆ ದಾನ ಮಾಡಿ.
– ಸೈಕಲ್‌ ದಾನ ನೀಡುವ ಆಸಕ್ತರು @anvayafoundation  ಫೇಸ್‌ಬುಕ್‌ ಪುಟವನ್ನು ಸಂಪರ್ಕಿಸಬಹುದು.

ನಾವು ಗಿಫ್ಟ್  ಕೊಟ್ಟ ಸೈಕಲ್ಲುಗಳನ್ನು ಬಡ ಮಕ್ಕಳು ಅತ್ಯಂತ ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದಾರೆ. ಬಿಎಂಡಬ್ಲ್ಯು ಕಾರನ್ನು ಕೊಟ್ಟಾಗ, ನಾವು ಹೇಗೆ ಅದನ್ನು ಮನೆಮುಂದೆ ನಿಲ್ಲಿಸಿ ಶೋಕೇಸ್‌ ಮಾಡುತ್ತೇವೋ, ಹಾಗಿರುತ್ತೆ ಅವರ ಖುಷಿ.
– ಸಂಪತ್‌ ರಾಮಾನುಜಂ, ಅನ್ವಯ ಫೌಂಡೇಶನ್‌

ಕೀರ್ತಿ 

Advertisement

Udayavani is now on Telegram. Click here to join our channel and stay updated with the latest news.

Next