Advertisement

IRS ಮಹಿಳಾ ಅಧಿಕಾರಿ ಈಗ ಪುರುಷ! ಲಿಂಗ ಬದಲಾವಣೆಗೆ ಅನುಮತಿ ಕೊಟ್ಟ ಹಣಕಾಸು ಇಲಾಖೆ!

03:53 PM Jul 10, 2024 | Team Udayavani |

ನವದೆಹಲಿ: ಭಾರತದಲ್ಲಿ ಲಿಂಗ ಬದಲಾವಣೆ ಮಾಡಿ ಹೆಸರು ಬದಲಾಯಿಸಿಕೊಂಡು ಸಮಾಜದಲ್ಲಿ ಜೀವಿಸುತ್ತಿರುವವರು ಅನೇಕರು ಇದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸರ್ಕಾರದ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರಿಗೆ ಪುರುಷನಾಗಿ ಲಿಂಗ ಬದಲಾವಣೆ  ಹಾಗೂ ಹೆಸರು ಬದಲಾಯಿಸಲು ಅನುಮತಿ ನೀಡಲಾಗಿದೆ.

Advertisement

ಹೈದರಾಬಾದ್ ಮೂಲದ ಭಾರತೀಯ ಕಂದಾಯ ಸೇವೆಯಲ್ಲಿರುವ (IRS) ಮಹಿಳಾ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ. ಭಾರತೀಯ ನಾಗರಿಕ ಸೇವೆಯ ಇತಿಹಾಸದಲ್ಲಿ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವ  ಮೊದಲ ನಿದರ್ಶನ ಇದಾಗಿದೆ.

ಕಸ್ಟಮ್ಸ್ ಎಕ್ಸೈಸ್ ಆಂಡ್ ಸರ್ವೀಸ್ ಟ್ಯಾಕ್ ಅಪೆಲೇಟ್ ಟ್ರಿಬ್ಯುನಲ್‌ನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನಿಯೋಜನೆಗೊಂಡಿರುವ ಎಂ ಅನುಸೂಯಾ(35) ಅವರು ತಮ್ಮ ಹೆಸರನ್ನು ಎಂ ಅನುಕತಿರ್ ಸೂರ್ಯ ಎಂದು ಮತ್ತು ಲಿಂಗವನ್ನು ಮಹಿಳೆಯಿಂದ ಪುರುಷನಾಗಿ ಬದಲಾಯಿಸಲು ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದ್ದರು.

ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಹಣಕಾಸು ಇಲಾಖೆ, ಲಿಂಗ ಹಾಗೂ ಹೆಸರು ಬದಲಾವಣೆಗೆ ಅನುಮತಿ ನೀಡಿದೆ. ಕೇಂದ್ರ ನಾಗರಿಕ ಸೇವಾ ನಿಯಮಗಳಲ್ಲಿ ಇಂತಹದ್ದೊಂದು ಬೆಳವಣಿಗೆ ನಡೆದಿರುವುದು ಇದೇ ಮೊದಲು. 

Advertisement

ಜು.9 ರಂದು(ಮಂಗಳವಾರ) ಅನುಸೂಯಾ ಅವರ ಹೆಸರು ಹಾಗೂ ಲಿಂಗ ಎಂ.ಅನುಕತಿರ್‌ ಎಂದು ಬದಲಾಯಿಸುವ ಬಗ್ಗೆ ಹಣಕಾಸು ಇಲಾಖೆ ಆದೇಶಿಸಿದೆ. ಅವರ ಸರ್ಕಾರಿ ದಾಖಲೆಗಳಲ್ಲೂ ವಿವರಗಳ ಬದಲಾವಣೆ ಮಾಡಲಾಗಿದೆ.

“ಮಿಸ್ ಎಂ ಅನುಸೂಯ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ಮುಂದೆ ಅವರನ್ನು’ಮಿ. ಎಂ ಅನುಕತಿರ್ ಸೂರ್ಯ’ ಎಂದು ಎಲ್ಲ ಅಧಿಕೃತ ದಾಖಲೆಗಳಲ್ಲಿ  ಗುರುತಿಸಲಾಗುವುದು ಎಂದು ಇಲಾಖೆ ಹೇಳಿದೆ.

ಯಾರು ಈ ಅನುಕತಿರ್ ಸೂರ್ಯ? : 2013 ರಲ್ಲಿ ಚೆನ್ನೈನಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಬಳಿಕ 2018 ರಲ್ಲಿ ಸಹಾಯಕ ಆಯುಕ್ತರಾಗಿ ಬಡ್ತಿ ಪಡೆದರು ಎಂದು ಅವರ ಲಿಂಕ್ಡ್ಇನ್ ಪ್ರೊಫೈಲ್ ನಲ್ಲಿ ತಿಳಿಸಲಾಗಿದೆ.

ಆ ಬಳಿಕ ಅವರು ಕಳೆದ ವರ್ಷ(2023)ಸಿಇಎಸ್‌ಟಿಎಟಿ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನಿಯೋಜನೆಗೊಂಡಿದ್ದರು.

ಚೆನ್ನೈನ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದರು. ಆ ನಂತರ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಸೈಬರ್ ಕಾನೂನು ಮತ್ತು ಸೈಬರ್ ಫೋರೆನ್ಸಿಕ್ಸ್‌ನಲ್ಲಿ ಪಿಜಿ ಡಿಪ್ಲೊಮಾವನ್ನು ಮಾಡಿದ್ದರು.

 2014ರ ಏಪ್ರಿಲ್‌ 15ರಂದು ಸುಪ್ರೀಂ ಕೋರ್ಟ್‌ ನಾಲ್ಸಾ ಪ್ರಕರಣದಲ್ಲಿ ತೃತೀಯ ಲಿಂಗಕ್ಕೆ ಮಾನ್ಯತೆ ನೀಡಿತ್ತು. ಈ ಪ್ರಕರಣದಲ್ಲಿ ಕೋರ್ಟ್‌ ಲಿಂಗ ಬದಲಾವಣೆ ವೈಯಕ್ತಿಕ ಆಯ್ಕೆಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next