Advertisement

ಹೋಳಿ ಹಬ್ಬದಂದು ಅನುಷ್ಕಾ ಶರ್ಮಾ ಹೊಸ ಚಿತ್ರ ಬಿಡುಗಡೆ

11:53 AM Jan 10, 2018 | Team Udayavani |

ಹೊಸದಿಲ್ಲಿ : ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಕಳೆದ ವರ್ಷಾಂತ್ಯ ಮದುವೆಯಾದ ಬಳಿಕದಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರ ಮೊದಲ ಚಿತ್ರವಾಗಿ “ಪರಿ’ ಹೋಳಿ ಹಬ್ಬದ ದಿನವಾದ ಮಾರ್ಚ್‌ 2ರಂದು ಬಿಡುಗಡೆಯಾಗಲಿದೆ.

Advertisement

ಅನುಷ್ಕಾ ಅವರ “ಕ್ಲೀನ್‌ ಸ್ಲೇಟ್‌ ಫಿಲಂಸ್‌’ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಮೂರನೇ ಚಿತ್ರ ಇದಾಗಿದೆ ಮತ್ತು ನಿರ್ದೇಶಕ ಪ್ರಸೀತ್‌ ರಾಯ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರವೂ ಆಗಿದೆ. ಪರಾಮೃತ ಚಟರ್ಜಿ, ರಜತ್‌ ಕಪೂರ್‌ ಮತ್ತು ಋತಭರಿ ಚಕ್ರವರ್ತಿ ಈ ಚಿತ್ರದಲ್ಲಿ ನಟಿಸಿದ್ದಾರೆ. 

ಅನುಷ್ಕಾ ಅವರ ಸ್ವಂತ ಬ್ಯಾನರ್‌ನಡಿ ಈ ಮೊದಲು ನಿರ್ಮಾಣವಾಗಿದ್ದ ಚಿತ್ರಗಳೆಂದರೆ ಎನ್‌ಎಚ್‌ 10 ಮತ್ತು ಫಿಲ್ಲೋರಿ. ಈ ಎರಡೂ ಚಿತ್ರಗಳಲ್ಲಿ ಅನುಷ್ಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next