Advertisement

ಮದ್ವೆಗೂ ಆ್ಯಕ್ಟಿಂಗ್‌ಗೂ ಏನು ಸಂಬಂಧ?

07:08 PM Jul 23, 2019 | Team Udayavani |

ಹೀರೋಯಿನ್‌ಗೆ ಮದುವೆ ಆಯ್ತು ಅಂದ್ರೆ, ಅವಳ ವೃತ್ತಿ ಬದುಕೇ ಮುಗೀತು ಅನ್ನುವ ಜನರಿದ್ದಾರೆ. ಅಂಥವರನ್ನು ನಿರ್ಲಕ್ಷಿಸಿ ಮುಂದೆ ಹೋಗ್ಬೇಕು ಅಂತಾರೆ ಅನುಷ್ಕಾ ಶರ್ಮಾ…

Advertisement

ಮದುವೆ ಬಗೆಗಿನ ಪ್ರಶ್ನೆಗಳು ಸಾಮಾನ್ಯ ಹುಡುಗಿಯರನ್ನಷ್ಟೇ ಅಲ್ಲ, ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಇಂಟರ್‌ವ್ಯೂ ಯಾವುದೇ ಇರಲಿ, ಎಲ್ಲ ಪ್ರಶ್ನೆಗಳ ನಂತರ ನಟಿಯರನ್ನು ಕೇಳ್ಳೋ ಪ್ರಶ್ನೆ- “ಮತ್ತೆ, ಮದುವೆ ಯಾವಾಗ?’.

ನಟಿಯರೂ ಕೂಡಾ, ಮದುವೆಯಾದರೆ ತಮಗೆ ಅವಕಾಶಗಳು ಕಡಿಮೆಯಾಗಿ ಬಿಡುತ್ತವೆ ಎಂಬ ಭಯದಿಂದಲೋ, ಗ್ಲಾಮರ್‌ ಹಾಳಾಗುತ್ತದೆ ಅಂತಲೋ, ಮದುವೆಯಿಂದ ದೂರ ಉಳಿಯುತ್ತಾರೆ. ನಟಿಯರೇ ಯಾಕೆ, ಇತ್ತೀಚಿನ ಹುಡುಗಿಯರೂ ಮದುವೆಯಂದ್ರೆ ಹಿಂದೇಟು ಹಾಕುತ್ತಾರೆ. ಮದುವೆಯಾಗಿಬಿಟ್ಟರೆ ವೃತ್ತಿ, ಪ್ರವೃತ್ತಿ, ಕನಸುಗಳನ್ನೆಲ್ಲ ಮರೆತುಬಿಡಬೇಕಲ್ಲ ಅನ್ನೋ ಭಯ ಅವರದ್ದು. ಹೀಗಿರುವಾಗ, ನಟಿ ಅನುಷ್ಕಾ ಶರ್ಮಾ 29ನೇ ವಯಸ್ಸಿಗೇ ಮದುವೆಯಾಗಿ, ಸುದ್ದಿಯಾದರು.

ಹಾಗಾಗಿ ಜನ ಅವರ ಬಳಿ, ಪ್ರಿಯಾಂಕ ಛೋಪ್ರಾ, ದೀಪಿಕಾ ಪಡುಕೋಣೆ ಅವರೆಲ್ಲಾ ಮೂವತ್ತರ ನಂತರ ಮದುವೆಯಾದರು. ನೀವ್ಯಾಕೆ ಬೇಗ ಮದುವೆ ಆದ್ರಿ ಅಂತ ಅವರನ್ನು ಕೇಳುತ್ತಾರಂತೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಆ ಬಗ್ಗೆ ಮಾತಾಡಿರುವ ಅನುಷ್ಕಾ ಶರ್ಮಾ, “ಹೌದು, 29 ವರ್ಷ ಅನ್ನೋದು ನಟಿಯರ ಪಾಲಿಗೆ ಸಣ್ಣ ವಯಸ್ಸೇ. ಆದರೆ, ನಾನು ವಿರಾಟ್‌ರನ್ನು ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದೆ. ಅದಕ್ಕೇ ಮದುವೆಯಾದೆ’ ಅಂತ ಉತ್ತರಿಸಿದ್ದಾರೆ.

Advertisement

“ಮದುವೆ ಅನ್ನೋದು ಜೀವನದ ಒಂದು ಸುಂದರ ಕ್ಷಣ. ಮನಸ್ಸಿನಲ್ಲಿ ಭಯ ಇಟ್ಟುಕೊಂಡು, ಆ ಕ್ಷಣವನ್ನು ಅನುಭವಿಸೋದು ನನಗೆ ಇಷ್ಟ ಇರಲಿಲ್ಲ. ಒಬ್ಬ ಗಂಡಸು, ಮದುವೆಯಾಗೋಕೆ ಮುಂಚೆ ಎರಡೆರಡು ಬಾರಿ ಯೋಚಿಸೋದಿಲ್ಲ ಮತ್ತು ಮದುವೆಯ ನಂತರವೂ ಆತ ತನ್ನ ಕೆರಿಯರ್‌ನಲ್ಲಿ ಮುಂದೆ ಹೋಗುತ್ತಾನೆ ಅಂತಾದ್ರೆ, ಹೆಣ್ಮಕ್ಕಳು ಮಾತ್ರ ಯಾಕೆ ಮದುವೆಯ ಬಗ್ಗೆ ಹೆದರಿಕೊಳ್ಳಬೇಕು? ನನ್ನ ಪ್ರಕಾರ ಹೆಣ್ಣು- ಗಂಡು, ಇಬ್ಬರೂ ಸಮಾನರು. ಸಮಾಜ, ಇಬ್ಬರನ್ನೂ ಒಂದೇ ರೀತಿ ನೋಡಬೇಕು.

ನಮ್ಮ ಪ್ರೇಕ್ಷಕ ವರ್ಗ, ಸಿನಿಮಾ ಇಂಡಸ್ಟ್ರಿಗಿಂತಲೂ ವಿಶಾಲವಾಗಿ ಯೋಚಿಸುತ್ತಾರೆ. ನಟಿಗೆ ಮದುವೆ ಆಗಿದೆಯಾ, ಅವಳಿಗೆ ಮಕ್ಕಳಿದೆಯಾ ಅಂತೆಲ್ಲಾ, ನಟಿಯೊಬ್ಬಳ ಖಾಸಗಿ ಜೀವನದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಕೂಡಾ ಅಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಅಂದಿದ್ದಾರೆ ಅನುಷ್ಕಾ ಶರ್ಮಾ.

Advertisement

Udayavani is now on Telegram. Click here to join our channel and stay updated with the latest news.

Next