Advertisement

ಮಾರಾಟ ತೆರಿಗೆ ನೋಟಿಸ್‌ ವಿರುದ್ಧ ಅನುಷ್ಕಾ ಕೋರ್ಟ್‌ಗೆ ಮೊರೆ

07:10 PM Jan 12, 2023 | Team Udayavani |

ಮುಂಬೈ/ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಮಾರಾಟ ತೆರಿಗೆ ಇಲಾಖೆಯ ಉಪ ಆಯುಕ್ತರು  2012-13 ಮತ್ತು 2013-14ನೇ ಸಾಲಿಗೆ ಸಂಬಂಧಿಸಿದಂತೆ ನೀಡಿದ ತೆರಿಗೆ ನೋಟಿಸ್‌ ವಿರುದ್ಧ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

Advertisement

ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಅದನ್ನು ರದ್ದು ಮಾಡಬೇಕು ಎಂದು ಅವರು ಅರಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ನಿತಿನ್‌ ಜಾಮ್‌ದಾರ್‌ ಮತ್ತು ನ್ಯಾ.ಅಭಯ ಅಹುಜಾ ಅವರನ್ನೊಳಗೊಂಡ ನ್ಯಾಯಪೀಠ  ಮಾರಾಟ ತೆರಿಗೆ ಇಲಾಖೆಗೆ ನೋಟಿಸ್‌ ನೀಡಿದ್ದಾರೆ. ಸಿನಿಮಾ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತನಗೆ ಕೇವಲ ನಟಿ ಎಂಬ ನೆಲೆಯಲ್ಲಿ ತೆರಿಗೆ ಪಾವತಿ ಮಾಡಲು ಸೂಚನೆ ನೀಡಬೇಕು ಎಂದು ವಾದಿಸಿದ್ದಾರೆ.

2012-13ನೇ ಸಾಲಿನಲ್ಲಿ 1.2 ಕೋಟಿ ರೂ., 2013-14ನೇ ಸಾಲಿನಲ್ಲಿ 1.6 ಕೋಟಿ ರೂ. ತೆರಿಗೆ ಪಾವತಿ ಮಾಡಲು ನೋಟಿಸ್‌ ನೀಡಲಾಗಿತ್ತು. ಫೆ.6ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next