Advertisement

ಸಸ್ಯಾಹಾರಿಯಾಗಿದ್ದೇ ಮಹತ್ವದ ನಿರ್ಧಾರ

06:00 AM Jul 24, 2018 | Team Udayavani |

ಮುಂಬಯಿ: “ಸಸ್ಯಹಾರಿಯಾಗಿ ಪರಿವರ್ತನೆಗೊಂಡಿರುವುದೇ ನನ್ನ ಜೀವನದ ಅತಿ ಮಹತ್ವದ ನಿರ್ಧಾರ’ ಎಂದು ಕ್ರಿಕೆಟಿಗ ಕೊಹ್ಲಿ ಅವರ ಪತ್ನಿ, ಬಾಲಿವುಡ್‌ನ‌ ಖ್ಯಾತ ನಟಿ ಅನುಷ್ಕಾ ಶರ್ಮ ಹೇಳಿ ದ್ದಾರೆ.30 ವರ್ಷ ಪ್ರಾಯದ ಅನುಷ್ಕಾ ಕಳೆದ ಮೂರು ವರ್ಷಗಳಿಂದ ಮಾಂಸಾ ಹಾರವನ್ನೇ ಸೇವಿಸುತ್ತಿಲ್ಲವಂತೆ. ದೇಹದ ತೂಕ ಇಳಿಸಿ, ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಆರೋಗ್ಯ ಕಾಪಾಡಿಕೊಳ್ಳಲೂ ಸಹಕಾರಿ ಯಾಗಿದೆ. ನನ್ನಲ್ಲಿ ಶಕ್ತಿ ವೃದ್ಧಿಸಿದೆ. ಅಷ್ಟೇ ಅಲ್ಲ, ನನ್ನ ಆಹಾರಕ್ಕಾಗಿ ಯಾವೊಂದು ಪ್ರಾಣಿಯನ್ನೂ ನಾನು ಹಿಂಸಿಸುತ್ತಿಲ್ಲ ಎನ್ನುವ ವಿಚಾರ ಸಾಕಷ್ಟು ಖುಷಿಕೊಡುತ್ತಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next