Advertisement

Anusha Rai; ಹೊಸ ಚಿತ್ರದಲ್ಲಿ ಅನುಷಾ ರೈ

05:01 PM Aug 01, 2024 | Team Udayavani |

ಒಂದೊಂದೇ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಬಿಝಿಯಾಗುತ್ತಿರುವ ಅನುಷಾ ರೈಗೆ ಈಗ ಮತ್ತೂಂದು ಹೊಸ ಸಿನಿಮಾ ಸಿಕ್ಕಿದೆ. ಡಿ.ಜಿ.ಉಮೇಶ್‌ ಗೌಡ ನಿರ್ದೇಶನದ ಹೊಸ ಚಿತ್ರಕ್ಕೆ ಅನುಷಾ ನಾಯಕಿಯಾಗಿದ್ದಾರೆ.

Advertisement

ಈ ಹಿಂದೆ ನವರಂಗಿ, ಹಳ್ಳಿ ಪಂಚಾಯ್ತಿ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್‌ ಅಭಿನಯದ ಓ ಮನಸೇ ಚಿತ್ರಗಳನ್ನು ನಿರ್ದೇಶಿಸಿದ್ದ ಡಿ.ಜಿ. ಉಮೇಶ್‌ ಗೌಡ ಅವರು ಈಗ ಹೊಸ ಚಿತ್ರ ಮಾಡಲು ಮುಂದಾಗಿದ್ದಾರೆ. ಲವ್‌, ಆ್ಯಕ್ಷನ್‌ ಜೊತೆಗೆ ಸೆಂಟಿಮೆಂಟ್‌ ಡ್ರಾಮಾ ಕಥಾಹಂದರ ಒಳಗೊಂಡಿರುವ ಈ ಚಿತ್ರದ ಮುಹೂರ್ತ ಆಗಸ್ಟ್‌ 9ಕ್ಕೆ ಬೆಳಗಾವಿಯಲ್ಲಿ ನಡೆಯಲಿದೆ. ನಂತರ ಬೆಳಗಾವಿ, ಬೆಂಗಳೂರು ಸುತ್ತಮುತ್ತ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಚಿತ್ರದಲ್ಲಿ 5 ಹಾಡುಗಳಿದ್ದು ಕೇರಳ, ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಳ್ಳಲಾ ಗಿದೆ. ಈ ಚಿತ್ರವನ್ನು ಶ್ರೀಸ್ನೇಹ ಕಂಬೈನ್ಸ್‌ನಡಿ ಶೇಖರ್‌ ನಾ ಕಾಲೇರಿ ಅವರು ನಿರ್ಮಿಸುತ್ತಿದ್ದಾರೆ

ಚಿತ್ರದ ನಾಯಕನಾಗಿ ಸಂತೋಷ್‌, ನಾಯಕಿಯಾಗಿ ಅನುಷಾ ರೈ, ಉಳಿದ ಪಾತ್ರಗಳಲ್ಲಿ ಶೋಭರಾಜ್, ಸುಚೇಂದ್ರ ಪ್ರಸಾದ್‌, ಅಭಿಜಿತ್‌, ದಿವ್ಯಾ ಗೌಡ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಡಿ.ಜಿ.ಉಮೇಶ್‌ ಗೌಡ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next