ಆಶಾ-ಸೋಮಶೇಖರ್ ದಂಪತಿಯ ಪುತ್ರಿ, ಅನುಷ ಆರನೇ ವಯಸ್ಸಿನಲ್ಲೇ ಭರತನಾಟ್ಯದತ್ತ ಆಕರ್ಷಿತರಾದರು. ವಿದುಷಿ ಅರ್ಚನಾ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿರುವ ಈಕೆ, ರಂಗಪ್ರವೇಶದ ಹಂತಕ್ಕೆ ತಲುಪಿದ್ದಾಳೆ.
ನೃತ್ಯ ಅಷ್ಟೇ ಅಲ್ಲದೆ, ಚರ್ಚಾಸ್ಪರ್ಧೆ, ಆಶುಭಾಷಣ, ನಾಟಕ, ಏಕಪಾತ್ರಾಭಿನಯ…ಹೀಗೆ, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರುವ ಅನುಷ, ಬಹುಮುಖ ಪ್ರತಿಭೆ. “ಲಯ ಅನುಲಾಸ್ಯ’ ರಂಗಪ್ರವೇಶ ಕಾರ್ಯಕ್ರಮದಲ್ಲಿ ಸಚಿವ ಸುರೇಶ್‌ಕುಮಾರ್ ಎಸ್. ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಅತಿಥಿಗಳಾಗಿ ನೃತ್ಯ ಕಲಾವಿದ ಡಾ. ಎಂ. ಸೂರ್ಯಪ್ರಸಾದ್, ಕರ್ನಾಟಕ ನೃತ್ಯಕಲಾ ಪರಿಷತ್‌ನ ಅಧ್ಯಕ್ಷ ಸಾಯಿ ವೆಂಕಟೇಶ್, ಮೃದಂಗ ವಾದಕ ಎ.ಎಸ್.ಎನ್. ಸ್ವಾಮಿ ಭಾಗವಹಿಸಲಿದ್ದಾರೆ. ಗುರು ಅರ್ಚನಾ ಶಾಸ್ತ್ರಿ (ನಟುವಾಂಗ), ವಿದ್ವಾನ್ ಡಿ.ಎಸ್. ಶ್ರೀವತ್ಸ (ಹಾಡುಗಾರಿಕೆ), ವಿ. ಜನಾರ್ಧನ ರಾವ್ (ಮೃದಂಗ), ವಿ. ಶಂಕರ ರಾಮನ್ (ವೀಣೆ), ವಿ. ವಿವೇಕ್ ವಿ ಕೃಷ್ಣ (ಕೊಳಲು), ವಿ. ಪ್ರಸನ್ನ ಕುಮಾರ್ (ಖಂಜರ-ರಿದಂ ಪ್ಯಾಡ್) ಹಿನ್ನೆಲೆ ಸಹಕಾರ ನೀಡಲಿದ್ದಾರೆ.
ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ
ಯಾವಾಗ?: ಮಾ.7, ಶನಿವಾರ ಸಂಜೆ 6