Advertisement

808 FM radio stations ಇ-ಹರಾಜು: ಸಚಿವ ಅನುರಾಗ್‌ ಠಾಕೂರ್‌

12:04 AM Jul 24, 2023 | Team Udayavani |

ಹೊಸದಿಲ್ಲಿ: ರೇಡಿಯೋ ಸಂವಹನದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರಕಾರವು ದೇಶದ 284 ನಗರಗಳಲ್ಲಿ 808 ಎಫ್ಎಂ ರೇಡಿಯೋ ಕೇಂದ್ರಗಳ ಇ- ಹರಾಜು ಪ್ರಕ್ರಿಯೆಯನ್ನು ಶೀಘ್ರ ದಲ್ಲೇ ನಡೆಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

Advertisement

ಹೊಸದಿಲ್ಲಿಯಲ್ಲಿ ರವಿವಾರ ನಡೆದ ಪ್ರಾದೇಶಿಕ ಸಮುದಾಯ ರೇಡಿಯೋ ಸಮ್ಮೇಳನ(ಉತ್ತರ) ಉದ್ದೇಶಿಸಿ ಮಾತನಾಡಿದ ಅವರು, “ರೇಡಿಯೊ ಕೇಂದ್ರ ಗಳನ್ನು ಕಾರ್ಯಚರಣೆಗೊಳಿಸಲು ಪರವಾನಿಗೆ ಪಡೆಯುವ ಪ್ರಕ್ರಿಯೆಯನ್ನು ಸರಕಾರ ಸರಳಗೊಳಿಸಿದೆ’ ಎಂದರು. ಪ್ರಸುತ್ತ ದೇಶದ 113 ನಗರಗಳಲ್ಲಿ ಒಟ್ಟು 388 ಎಫ್ಎಂ ರೇಡಿಯೋ ಕೇಂದ್ರಗಳಿವೆ.

“ಈ ವರ್ಷದ ಆರಂಭದಲ್ಲಿ ಪ್ರಸಾರ ಮೂಲಸೌಕರ್ಯ ಮತ್ತು ಜಾಲತಾಣ ಅಭಿವೃದ್ಧಿ ಯೋಜನೆಯನ್ನು ಸರಕಾರ ಅನುಮೋದಿಸಿದೆ. ಇದು ದೇಶ ದಲ್ಲಿ ಆಲ್‌ ಇಂಡಿಯಾ ರೇಡಿಯೋ ಎಫ್ಎಂ ಟ್ರಾನ್ಸ್‌ ಮೀಟರ್‌ಗಳ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದಿಂದ ಶೇ.59ರಿಂದ ಶೇ.66ಕ್ಕೆ ಮತ್ತು ಜನಸಂಖ್ಯೆ ಪ್ರಮಾಣದಲ್ಲಿ ಶೇ.68ರಿಂದ ಶೇ.80ಕ್ಕೆ ಹೆಚ್ಚಿಸುವ ನೀರಿಕ್ಷೆಯಿದೆ’ ಎಂದು ಅನುರಾಗ್‌ ಠಾಕೂರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next