Advertisement

ಕಾಪುವಿನಿಂದ ಸ್ಪರ್ಧಿಸಲು ಅನುಪಮ ಶೆಣೈ ತಯಾರಿ

06:30 AM Apr 10, 2018 | Team Udayavani |

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿವ ಬಗ್ಗೆ ಮಾಜಿ ಪೊಲೀಸ್‌ ಅಧಿಕಾರಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮ ಶೆಣೈ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪುವಿನಿಂದಲೇ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೆನೆ. ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಕೊನೆಯ ಕ್ಷಣದಲ್ಲಿ ಕ್ಷೇತ್ರ ಬದಲಾಗ ಬಹುದು. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ದುರುದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೊಳಿಸಿ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ನಮ್ಮ ಪಕ್ಷ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪಕ್ಷ ರಾಜ್ಯಾಧ್ಯಕ್ಷ ಮಹಾದೇವ ಉದಗಾಂವಿ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿ ìಸುತ್ತಿರುವ 15 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದೆವೆ. 224 ವಿಧಾನ ಸಭಾ ಕ್ಷೇತ್ರಗಳಲ್ಲಿ  ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಲಾಗಿದೆ. ಎರಡನೇ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ. ಮಹಿಳೆಯರು ಹಾಗೂ ಗ್ರಾಮದ ಜನರನ್ನು ತಲುಪುವ ಉದ್ದೇಶದಿಂದ ಪಕ್ಷಕ್ಕೆ ಬೆಂಡೆಕಾಯಿ ಚಿಹ್ನೆ ಇಡಲಾಗಿದೆ ಎಂಬ ಮಾಹಿತಿ ನೀಡಿದರು.

ಅಭ್ಯರ್ಥಿಗಳು :
ಅಭಿಷೇಕ್‌ ಗೌಡ(ಕನಕಪುರ), ಅಶ್ವಿ‌ನಿ ದೇಸಾಯಿ(ಬೀಳಗಿ), ಲಕ್ಷ್ಮೀ ರಾಮಯ್ಯ ಶೆಟ್ಟಿ(ಕೆ.ಆರ್‌.ಪುರ), ರಾಕೇಶ್‌ ತೇಲಿ(ಬಿಜಾಪುರ), ವಸೀಂ ಅಹ್ಮದ್‌ (ಬ್ಯಾಟರಾಯನಪುರ), ಶ್ಯಾಮಸುಂದರ್‌ ಕುಲಕರ್ಣಿ (ಚಿತ್ರದುರ್ಗ), ಬಸವರಾಜ್‌ ನಾಲವಾಡದ(ಹುನಗುಂದ), ವೆಂಕಟೇಶ್‌ ಉಪ್ಪಾರ್‌ (ರಾಯಚೂರು), ಹರೀಶ್‌ ನಾರಾಯಣ್‌ ಗಾಂ ಧಿ(ಚಾಮರಾಜಪೇಟೆ), ದುಗೇìಶ್‌ ಮೇಗಲಮನಿ(ಹಾವೇರಿ), ಪ್ರವೀಣ್‌ ಕುಮಾರ್‌(ಚಾಮುಂಡೇಶ್ವರಿ), ಸೈಫುಲ್ಲ (ವಿಜಯನಗರ), ಮಲ್ಲಿಕಾರ್ಜುನ ಚೌಹಾಣ್‌(ಬಾದಾಮಿ), ರಾಘವೇಂದ್ರ (ಸಿ.ವಿ.ರಾಮನ್‌ ನಗರ), ಶರಣಪ್ಪ ಭೀಮಶಾ ಝಳಕಿ(ಆಳಂದ) ಯವರಿಗೆ ಟಿಕೆಟ್‌ ನೀಡಲಾಗಿದೆ ಎಂದರು.

ಸಿಎಂ ವಿರುದ್ಧ ಪಿಐಎಲ್‌:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್‌ ವಾಚ್‌ ಪ್ರಕರಣ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೆವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಚ್‌ ನೀಡಿದ್ದ ಗಿರೀಶ್‌ ಚಂದ್ರ ವರ್ಮ ಅವರು ಉದ್ಯಮಿ ಡಾ. ಬಿ.ಆರ್‌. ಶೆಟ್ಟಿ ಅವರ ಎನ್‌ಎಂಸಿ  ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅನುಪಮಾ ಶೆಣೈ ಆರೋಪಿಸಿದರು.
ಹ್ಯೂಬ್ಲೋಟ್‌ ವಾಚ್‌ ಪ್ರಕರಣ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿ ಮೋದಿಯವರ ಕಚೇರಿಗೆ ಪತ್ರ ಬರೆದಿದ್ದಾಗ, ದಾಖಲೆ ಕೇಳಿದ್ದರು. ದಾಖಲೆ ನೀಡಿದ ನಂತರ ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರ ಬರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರವನ್ನು ಪ್ರತಿವಾದಿ ಮಾಡಿ  ಮಾರ್ಚ್‌ 30ರಂದು  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next