ಬಂಟ್ವಾಳ: ಕಡಿಮೆಯಾಗಿ ರುವ ಆ ಒಂದು ಅಂಕ ವಿಜ್ಞಾನದಲ್ಲಿ ಕೈತಪ್ಪಿದ್ದು. ಆದರೂ ಉತ್ತಮ ಸಾಧನೆ ತೃಪ್ತಿ ತಂದಿದೆ. ರಾಜ್ಯಕ್ಕೆ ದ್ವಿತೀಯ ಸ್ಥಾನ ಎಂದು ತಿಳಿದಾಗ ಅಚ್ಚರಿಯಾಯಿತು…
ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅನುಪಮಾ ಕಾಮತ್ ಅವರ ಸಂತೋಷದ ಮಾತಿದು.
ಈಕೆ ಬಿ.ಸಿ.ರೋಡ್ ಕೈಕುಂಜೆಯ ವೈದ್ಯರಾದ ಡಾ| ದಿನೇಶ್ ಕಾಮತ್ ಮತ್ತು ಡಾ| ಅನುರಾಧಾ ಕಾಮತ್ ದಂಪತಿಯ ಪುತ್ರಿ. ಹೆತ್ತವರು ವೈದ್ಯರಾಗಿದ್ದರೂ ಮಗಳಿಗೆ ವಿಜ್ಞಾನಿಯಾಗುವ ಹಂಬಲ. ತಂದೆ, ತಾಯಿಯವರ ಉತ್ತೇಜನ, ಸಹ ಪಾಠಿಗಳ ಜತೆ ಗುಂಪು ಕಲಿಕೆ ಮಾಡಿ ದ್ದರಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ ಎಂದಿದ್ದಾಳೆ ಆಕೆ.
ಮಗಳ ಸಾಧನೆಯಿಂದ ಸಂತಸ ವಾಗಿದೆ ಎಂದರು ತಂದೆ ಡಾ| ದಿನೇಶ್ ಕಾಮತ್.
ಅವಳು ನೃತ್ಯ, ಸಂಗೀತ ಕಲಿತಿದ್ದಾಳೆ. ಪಠ್ಯೇತರ ಚಟುವಟಿಕೆ ಯಲ್ಲೂ ಅವಳಿಗೆ ಆಸಕ್ತಿ ಇದೆ. ಮಂಗಳೂರಿನ ಸಿಎಫ್‌ಎಎಲ್‌ನಲ್ಲಿ ಕೋಚಿಂಗ್ ಪಡೆಯುತ್ತಿದ್ದಾಳೆ. ನಾನು ಕಲಿಯುತ್ತಿದ್ದಾಗ ರ್‍ಯಾಂಕ್ ವಿದ್ಯಾರ್ಥಿನಿಯಾಗಿದ್ದೆ. ವೈದ್ಯ ವಿಜ್ಞಾನದಲ್ಲಿ ಗೋಲ್ಡ್ ಮೆಡೆಲ್ ಪಡೆದಿದ್ದೆ. ಪುತ್ರಿಯೂ ಅದೇ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ – ಇದು ತಾಯಿ ಡಾ| ಅನುರಾಧಾ ಕಾಮತ್ ಮಾತು.
ನನ್ನ ಸಾಧನೆಯ ಹಿಂದೆ ಶಾಲೆಯ ಶಿಕ್ಷಕರ, ಸಹಪಾಠಿ ಗಳ, ತಂದೆ-ತಾಯಿ, ಬಂಧುಗಳ ಪ್ರೋತ್ಸಾಹವಿದೆ. ಅಜ್ಜ ಇಸ್ರೋ ವಿಜ್ಞಾನಿಯಾಗಿದ್ದರು. ನನಗೂ ಇಸ್ರೋ ವಿಜ್ಞಾನಿಯಾಗುವ ಆಸೆ ಇದೆ. ಪಿಸಿಎಂಬಿ ಕಾಂಬಿನೇಶನ್ ತೆಗೆದುಕೊಂಡು ಪಿಯು ಅಭ್ಯಾಸ ಮಾಡುತ್ತೇನೆ.
-ಅನುಪಮಾ