Advertisement

ಡಾ. ಸಿಂಗ್‌ ಪಾತ್ರದಲ್ಲಿ ಮಿಂಚಲಿರುವ ಖೇರ್‌

07:00 AM Apr 06, 2018 | |

ನವದೆಹಲಿ: ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರು ತಮ್ಮ ಮುಂಬರುವ ಚಿತ್ರ “ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ನ ಫ‌ಸ್ಟ್‌ಲುಕ್‌ ಪೋಸ್ಟರ್‌ಗಳನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಕಾಲಾವಧಿಯ ಕೆಲ ಘಟನೆಗಳನ್ನಾಧರಿಸಿ, ಸಂಜಯ್‌ ಬರು ಎಂಬುವರು ಬರೆದಿರುವ ಇದೇ ಹೆಸರಿನ ಪುಸ್ತಕದ ಸಿನಿಮಾ ಆವೃತ್ತಿ. ಚಿತ್ರವನ್ನು ಬೋಹ್ರಾ ಬ್ರದರ್ಸ್‌ ನಿರ್ಮಿಸಿದ್ದು, ವಿಜಯ್‌ ರತ್ನಾಕರ್‌ ಎಂಬುವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನುಪಮ್‌ ಖೇರ್‌ ಅವರು ಮನಮೋಹನ್‌ ಸಿಂಗ್‌ ಪಾತ್ರ ಮಾಡಿದ್ದು, ಅವರ ವೇಷಭೂಷಣ ಹಾಗೂ ದೇಹಭಾಷೆಗೆ ಈಗಾಗಲೇ ಮೆಚ್ಚುಗೆಗಳ ಮಹಾಪೂರ ಹರಿದುಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next