ಮುಂಬಯಿ: 2022 ರಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿ, ಪಾತಾಳಕ್ಕಿಳಿದ ಸಿನಿಮಾಗಳಲ್ಲಿ ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾವೂ ಒಂದು. ಥಿಯೇಟರ್, ಬಾಕ್ಸ್ ಆಫೀಸ್ ಎರಡರಲ್ಲೂ ಮೋಡಿ ಮಾಡಲು ಸಿನಿಮಾ ವಿಫಲವಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿರಿಯ ನಟ ಅನುಪಮ್ ಖೇರ್ ಅವರು ʼಲಾಲ್ ಸಿಂಗ್ ಚಡ್ಡಾʼ ಹಾಗೂ ಬಾಯ್ಕಟ್ ಟ್ರೆಂಡ್ ಬಗ್ಗೆ ಹೇಳಿದ್ದಾರೆ.
“ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ ಒಳ್ಳೆಯ ಸಿನಿಮಾವಲ್ಲ. ಒಳ್ಳೆಯ ಸಿನಿಮಾವಾಗಿದ್ದರೆ ಖಂಡಿತ ಅದನ್ನು ಯಾವ ಶಕ್ತಿಯೂ ತಡೆಯುತ್ತಿರಲಿಲ್ಲ.ಅವರ ʼಪಿಕೆʼ ಸಿನಿಮಾ ಉತ್ತಮವಾಗಿತ್ತು. ಏನೇ ಆದರೂ ನಾವು ಮೊದಲು ಸತ್ಯವನ್ನು ಒಪ್ಪಿಕೊಳ್ಳಬೇಕು” ಎಂದಿದ್ದಾರೆ.
ಇನ್ನು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ʼಬಾಯ್ಕಟ್ʼ ಟ್ರೆಂಡ್ ಬಗ್ಗೆ ಮಾತನಾಡಿರುವ ಅವರು “ ಯಾರಾದರೂ ಏನನ್ನು ಮಾಡಲು ಬಯಸಿದಾಗ ಅದನ್ನು ನೀವು ತಡೆಯಲು ಸಾಧ್ಯವಿಲ್ಲ. ನಿಮ್ಮ ಪ್ರಾಜೆಕ್ಟ್ ಗಳು ಉತ್ತಮವಾಗಿದ್ದಾರೆ, ಅದು ಪ್ರೇಕ್ಷಕನಿಗೆ ತಲುಪುತ್ತದೆ. ಅವರು ಪ್ರತೀಕಾರವಾಗಿ ಹೋಗಬಹುದು. ಇದನ್ನು ತೊಡೆದು ಹಾಕಲು ನಾವು ಅನುಸರಿಸಬೇಕಾದ ಏಕೈಕ ಮಾರ್ಗವೆಂದರೆ ಅದು ಒಳ್ಳೆಯ ಸಿನಿಮಾದ ನಿರ್ಮಾಣ” ಎಂದರು.
ಅನುಪಮ್ ಖೇರ್ ಮುಂದೆ ʼ ಎಮರ್ಜೆನ್ಸಿʼಅನುರಾಗ್ ಬಸು ಅವರ ʼಮೆಟ್ರೋ ಇನ್ ಡಿನೋʼ, ವಿದ್ಯುತ್ ಜಮ್ವಾಲ್ ಅವರʼ IB71ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.