Advertisement

ಬಾಲಿವುಡ್ಹಿ ರಿಯ ನಟ ಅನುಪಮ್ ಖೇರ್ ಪತ್ನಿಗೆ ಬ್ಲಡ್ ಕ್ಯಾನ್ಸರ್

03:16 PM Apr 01, 2021 | Team Udayavani |

ಮುಂಬೈ : ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ ಅವರ ಪತ್ನಿ ಹಾಗೂ ಚಂಡೀಗಢ ಕ್ಷೇತ್ರದ ಬಿಜೆಪಿ ಸಂಸದೆ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

Advertisement

ಇಂದು ( ಏಪ್ರಿಲ್ 1) ನಟ ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ತಮ್ಮ ಪತ್ನಿ ಬ್ಲಡ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವುದನ್ನು ಹೇಳಿಕೊಂಡಿರುವ ಅವರು, ಆಕೆ ಈ ಯುದ್ಧದ ವಿರುದ್ಧ ಹೋರಾಡಿ ಜಯಶಾಲಿಯಾಗುತ್ತಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಿರಣ್ ಖೇರ್ ಅವರು ಮಲ್ಟಿಪಲ್ ಮೈಲೋಮಾ ಅಂದರೆ, ಒಂದು ರೀತಿಯ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆಯಂತೆ ಈಗಾಗಲೇ ಸೂಕ್ತ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಅವಳು ಹೋರಾಟಗಾರ್ತಿಯಾಗಿದ್ದು, ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿ ಹೊರಬರುತ್ತಾಳೆ ಎನ್ನುವ ನಂಬಿಕೆ ಇದೆ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ಆಕೆ ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿಕೆಯ ಹಾದಿಯಲ್ಲಿದ್ದು, ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಚಿರ ಋಣಿಯಾಗಿದ್ದೇನೆ ಎಂದು ಅನುಪಮ್ ಖೇರ್ ಅವರು ತಮ್ಮ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next