ಹೊಸಪೇಟೆ ಕೊಪ್ಪಳದ ಆನೆಗೊಂದಿಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಈ ಕುರಿತು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಚರ್ಚೆ ನಡೆದಿದೆ.
ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮುಜರಾಯಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆಯಿಂದ ಎಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಜರಾಯಿ ಇಲಾಖೆಯಿಂದ ಆಗಮ ಪಂಡಿತರಿಗೂ ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ತಿಳಿಸಲಾಗಿದೆ. ದಾಖಲೆ, ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂದೆ ಬಗ್ಗೆ ಉಲ್ಲೇಖ ಇದೆ.
ಹೀಗಾಗಿ ಇದೇ ಹುನುಮ ಹುಟ್ಟಿದ ಸ್ಥಳ. ಇದರಲ್ಲಿ ಯಾವುದೇ ಸಂಶಯವಿಲ್ಲ. ತಿರುಪತಿಯಲ್ಲಿ ಹನುಮನ ಜನ್ಮ ಸ್ಥಳ ಇದೆ ಅನ್ನೋದಕ್ಕೆ ಯಾವುದೇ ಐತಿಹಾಸಿಕ ಪುರಾವೇ ಇಲ್ಲ ಎಂದರು.
ಇದನ್ನೂ ಓದಿ:ನಂದಿಬೆಟ್ಟ:ಟ್ರೆಕ್ಕಿಂಗ್ ವೇಳೆ 200 ಅಡಿ ಆಳಕ್ಕೆ ಬಿದ್ದ ಯುವಕ; ಹೆಲಿಕ್ಯಾಪ್ಟರ್ ಬಳಸಿ ರಕ್ಷಣೆ
ಹನುಮನ ಜನ್ಮಸ್ಥಳ ಹಂಪಿ, ಆನೆಗುಂದಿ ನಡುವಿನ ಅಂಜನಾದ್ರಿ. ಕೊಪ್ಪಳದ ಅಂಜನಾದ್ರಿಯಲ್ಲೇ ಹನುಮ ಹುಟ್ಟಿದ್ದು ಎಂಬುದಕ್ಕೆ ಪುರಾವೆ ಇದೆ. ಹನುಮ ಹುಟ್ಟಿದ ಸ್ಥಳ ನಮ್ಮಲ್ಲಿದೆ ಅಂತ ಆಂಧ್ರಪ್ರದೇಶ ಸರಕಾರ ಆಧಾರ ರಹಿತವಾಗಿ ಹೇಳುತ್ತಿದೆ. ತಿರುಪತಿ ನಮ್ಮ ದೇವರು ಆಗಿದೆ. ಹನುಮನ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ
– ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವ