Advertisement

ಅನುಭವ ಮಂಟಪಕ್ಕೆ 50 ಕೋಟಿ ಮಾತ್ರ!

10:04 AM Dec 18, 2019 | Sriram |

ಬೀದರ್‌: ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನುಭವ ಮಂಟಪದ ಅನುದಾನದ ಮಿತಿಯನ್ನು ರಾಜ್ಯ ಸರಕಾರ 50 ಕೋಟಿ ರೂ.ಗಳಿಗೆ ಸೀಮಿತಗೊಳಿಸಿದೆಯೇ?

Advertisement

ಈ ಕುರಿತಂತೆ ಸರಕಾರವೇ ಹೊರಡಿಸಿರುವ ಆದೇಶ ಗೊಂದಲ ಸೃಷ್ಟಿಸಿದೆ. ವಿಶ್ವವೇ ಗಮನ ಸೆಳೆಯುವಂತೆ ನೂತನ ಅನುಭವ ಮಂಟಪವನ್ನು ನಿರ್ಮಿಸಲು ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿ 600 ಕೋಟಿ ರೂ. ವೆಚ್ಚದ ಯೋಜನ ವರದಿ ಸಲ್ಲಿಸಿತ್ತು. ಸಮಿತಿ ಶಿಫಾರಸಿನಂತೆ ಸರಕಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಅನುಭವ ಮಂಟಪ ನಿರ್ಮಾಣಕ್ಕೆ ಸೆ.2ರಂದು 50 ಕೋಟಿ ರೂ. ಮಂಜೂರು ಮಾಡಿ, ಸದ್ಯಕ್ಕೆ ಕಾಮಗಾರಿ ಆರಂಭಿಸಲು 20 ಕೋಟಿ ರೂ. ಬಿಡುಗಡೆಗೆ ಆದೇಶಿಸಿತ್ತು.

ಆದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್‌. ರವಿಕುಮಾರ ಅವರು ಅ.25ರಂದು ಹೊಸ ಆದೇಶ (ಸಂಖ್ಯೆ ಕಂ.ಇ. 78 ಆರ್‌ಇಎಚ್‌ 2016) ಹೊರಡಿಸಿದ್ದು, ಪ್ರಸ್ತಾವಿತ ಯೋಜನೆಯನ್ನು 50 ಕೋಟಿ ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕೆಂದು ಷರತ್ತು ಹಾಕಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next