Advertisement

ಭಾರತ- ಉಕ್ರೇನ್‌ ಮತ್ತೂಂದು ಪ್ರೇಮ್‌ ಕಹಾನಿ

09:22 AM Mar 27, 2022 | Team Udayavani |

ಹೊಸದಿಲ್ಲಿ: ಉಕ್ರೇನ್‌ ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್‌ ಹಾಗೂ ಉಕ್ರೇನ್‌ನ ಪ್ರಜೆ ಲಿಬೊವ್‌ ಜೋಡಿ, ಇನ್ನೇನು ಯುದ್ಧ ಆರಂಭವಾಗುವುದಕ್ಕಿಂತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್‌ ನಲ್ಲಿ ವಿವಾಹವಾಗಿದ್ದರು.

Advertisement

ಅಂಥದ್ದೇ ಲವ್‌ಸ್ಟೋರಿಯೊಂದು ದಕ್ಷಿಣ ದೆಹಲಿಯಲ್ಲಿ ಅನಾವರಣಗೊಂಡಿದೆ. ಉಕ್ರೇನ್‌ನ ಆ್ಯನಾ ಹರೋಡೆಟ್ಸ್‌ಕಾ (30), ದೆಹಲಿ ಹೈಕೋರ್ಟ್‌ನ ವಕೀಲ ಅನುಭವ್‌ ಭಾಸಿನ್‌ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ.

ಇದನ್ನೂ ಓದಿ:ಮದುವೆಗೆ ಬಂದವರು ಮಸಣ ಸೇರಿದರು! 50ಅಡಿ ಪ್ರಪಾತಕ್ಕೆ ಬಿದ್ದಬಸ್; 7ಮಂದಿ ಸಾವು, 45ಜನರಿಗೆ ಗಾಯ

2019ರಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ ನಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಆನಂತರ, ಅನುಭವ್‌ ಅವರು ದೆಹಲಿಗೆ ಹಿಂದಿರುಗಿದರು. ಆದರೆ, ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್‌ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆ್ಯನಾ, ಈಗ ಅನುಭವ್‌ ರನ್ನು ವರಿಸಲು ಸಿದ್ಧವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next