ಮ್ಯಾಡ್ರಿಡ್: ಮೆಕಾಫೆ ಕಂಪೆನಿ ಸಂಸ್ಥಾಪಕ, ಆ್ಯಂಟಿ ವೈರಸ್ ಸಾಫ್ಟ್ವೇರ್ ಸಂಶೋಧಿಸಿದ ಜಾನ್ ಡೇವಿಡ್ ಮೆಕಾಫೀ (75) ಸ್ಪೇಯ್ನನ ಬಾರ್ಸೆ ಲೋನಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಆಸ್ಪತ್ರೆಗೆ ದಾಖಲಿಸಿ ಬದುಕಿಸುವ ಪ್ರಯತ್ನಮಾಡಿದರೂ ಅವರು ಕೊನೆ ಯುಸಿರೆಳೆದಿದ್ದಾರೆ. ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆ ಗೊಳಪಡಿಸಲು ಅವರನ್ನು ಅಮೆರಿಕಕ್ಕೆ ಗಡೀಪಾರು ಮಾಡಲು ಕೋರ್ಟ್ ಅನು ಮೋದನೆ ನೀಡಿದ ಕೆಲವೇ ಕ್ಷಣಗಳಲ್ಲಿ ಮೆಕಾಫೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಟೆಲ್‌ಗಿಂತಲೂ ದೊಡ್ಡ ಅಂದರೆ, 56,300 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಆ್ಯಂಟಿ ವೈರಸ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಮೆಕಾಫೀ ಯವರದ್ದು. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಆ್ಯಂಟಿ ವೈರಸ್ ಸಾಫ್ಟ್
ವೇರ್ ಸಂಶೋಧಿಸಿ ವಾಣಿಜ್ಯಿಕವಾಗಿ ಬಿಡುಗಡೆ ಮಾಡಿ ಅವರು ಯಶಸ್ಸು ಕಂಡಿದ್ದರು. 1994ರಲ್ಲಿ ತಮ್ಮ ಆ್ಯಂಟಿ ವೈರಸ್ ಸಾಫ್ಟ್ವೇರ್ ಕಂಪೆನಿಯನ್ನು ಮಾರಾಟ ಮಾಡಿದ್ದರು. 2008ರ ವಿಶ್ವ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಅವರು ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾದರು. 2012ರಲ್ಲಿ ಅವರು ಅಮೆರಿಕದಿಂದ ಪರಾರಿಯಾದರು. ಕೇಂದ್ರ ಅಮೆರಿಕದಲ್ಲಿ ನೆರೆಮನೆಯ ವ್ಯಕ್ತಿಯ ಸಾವಿಗೆ ಅವರು ಕಾರಣರಾಗಿ ದ್ದಾರೆ ಎಂಬ ವಿಚಾರ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. 2020ರ ಅಕ್ಟೋ ಬರ್‌ನಲ್ಲಿ ಮೆಕಾಫೀ ಅವರನ್ನು ಸ್ಪೇಯ್ನನಲ್ಲಿ 4 ವರ್ಷ ತೆರಿಗೆ ವಿವರ ಸಲ್ಲಿಸದಿದ್ದುದಕ್ಕಾಗಿ ಬಂಧಿಸಲಾಗಿತ್ತು. ಅವರು ಕ್ರಿಪ್ಟೋಕರೆನ್ಸಿಯಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿದ್ದಾರೆ ಎನ್ನಲಾಗಿತ್ತು. ಅಮೆರಿಕ ಕೂಡ ಆಸ್ತಿಯ ವಿವರಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿತ್ತು.