Advertisement

ಶ್ವಾನ-ಮನುಷ್ಯನ ಗೆಳೆತನ ಪುರಾತನ!

12:48 AM Oct 31, 2020 | mahesh |

ಲಂಡನ್‌: ನಾಯಿ ಮತ್ತು ಮನುಷ್ಯನ ಗೆಳೆತನ ಕೇವಲ ಈಗಿನದ್ದಲ್ಲ. 11 ಸಾವಿರ ವರ್ಷಗಳ ಹಿಂದಿನ ಹಿಮಯುಗದಿಂದಲೇ ಈ ಸ್ನೇಹ ಸಂಬಂಧ ರೂಪುಗೊಂಡಿತ್ತು!

Advertisement

ಹೌದು! ಈ ವಾದಕ್ಕೆ ಪುಷ್ಟಿ ನೀಡುವ ಸಂಗತಿ, ನಾಯಿಗಳಲ್ಲಿನ ಡಿಎನ್‌ಎ ಕುರಿತಾದ ಅಧ್ಯ ಯನದಿಂದ ತಿಳಿದುಬಂದಿದೆ. ಮನುಷ್ಯ ಬೇರೆ ಪ್ರಾಣಿಗಳನ್ನು ಸಾಕುವುದಕ್ಕೂ ಮೊದಲೇ ನಾಯಿಗಳನ್ನು ಸಾಕುತ್ತಿದ್ದ ಎಂದು ಲಂಡನ್‌ನ ಪ್ರಾಚೀನ ಜಿನೋಮಿಕ್ಸ್‌ ಲ್ಯಾಬ್‌ನ ತಜ್ಞರು ವರದಿ ನೀಡಿದ್ದಾರೆ.

ಪ್ರಾಚೀನ ಕಾಲದ 27 ನಾಯಿಗಳ ಪಳೆಯುಳಿಕೆಗಳನ್ನು ಈಗಿನ ನಾಯಿಗಳ ಜಿನೋಮ್‌ಗಳಿಗೆ ಹೋಲಿಸಿ ನೋಡಿದಾಗ ಈ ಅಂಶ ದೃಢವಾಗಿದೆ. ಭೂಮಿಯ ಉತ್ತರಾರ್ಧ ಗೋಳ ದಲ್ಲಿ ನಾಯಿ ಸಾಕುವಿಕೆ ಪ್ರಾಚೀನ ಕಾಲ ದಿಂದಲೂ ರೂಢಿಯ ಲ್ಲಿತ್ತು. ಪೌರ್ವಾತ್ಯ ಮತ್ತು ಸೈಬೀರಿಯಾ ಶ್ವಾನ ತಳಿ ಆಗ ಚಾಲ್ತಿಯಲ್ಲಿದ್ದಿರ ಬಹುದು. ಈ ಶ್ವಾನವಂಶದ ತಳಿ ಈಗಲೂ ಅಮೆರಿಕ, ಏಷ್ಯಾ, ಆಫ್ರಿಕಾ ಮತ್ತು ಒಷನಿಯಾ ವಲಯಗಳಲ್ಲಿ ಬದುಕುಳಿದಿವೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ| ಪಾಂಟಸ್‌ ಸ್ಕಾಗ್ಲುಡ್‌ ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ, ಹಸಿಮಾಂಸ ಸೇವಿಸುತ್ತಿದ್ದ ಕಾಲದಿಂದಲೂ ನಾಯಿಗಳಿಗೆ ಒಡನಾಟ ಬೆಳೆದಿದೆ. ಆದರೆ, ನಾಯಿಯನ್ನೇ ಏಕೆ ಸಾಕುತ್ತಿದ್ದ ಎಂಬ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. 6 ಸಾವಿರ ವರ್ಷಗಳ ಹಿಂದೆ, ಮಾನವ ಕೃಷಿ ಆರಂಭಿಸುತ್ತಿದ್ದ ಯುಗದಲ್ಲಿ ಬೆಕ್ಕುಗಳನ್ನು ಸಾಕಲು ಆರಂಭಿಸಿದ್ದಿರಬಹುದು ಎಂದು ಅಧ್ಯಯನ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next