Advertisement

ಅಂತಿಗೊನೆ ನಾಟಕ ಪ್ರದರ್ಶನ

04:36 PM Jun 03, 2017 | |

ನೀನಾಸಂ ಮತ್ತು ಇತರೆ ರಂಗಶಾಲೆಗಳ ಹಳೆಯ ವಿದ್ಯಾರ್ಥಿಗಳು ಸೇರಿ ಕಟ್ಟಿಕೊಂಡ ರಂಗ ತಂಡ ಸಮುರಾಯ್‌ 7ನೇ ವರ್ಷದ ತಿರುಗಾಟ ಕಾರ್ಯಕ್ರಮ ಏರ್ಪಾಡಾಗಿದೆ. ಇದರ ಪ್ರಯುಕ್ತ ರಂಗಕರ್ಮಿ ಇಕ್ಬಾಲ್‌ ಅಹಮದ್‌ ನಿರ್ದೇಶನದ ಜೀನ್‌ ಅನ್ವಿಯ “ಅಂತಿಗೊನೆ’ ನಾಟಕ ಪ್ರದರ್ಶನ ಕಾಣುತ್ತಿದೆ. ಈ ನಾಟಕವನ್ನು ಕನ್ನಡಕ್ಕೆ ತಂದವರು ಜೆ. ಎನ್‌ ರಂಗನಾಥರಾವ್‌. “ಅಂತಿಗೊನೆ’ ಕೆಟ್ಟ ವಾಸ್ತವವನ್ನು ಅದರಲ್ಲೂ ರಾಜಕೀಯ ವಾಸ್ತವಗಳನ್ನು ಆಧರಿಸಿ ನಿಂತಿರುವ ನಾಟಕ. ನಾಟಕದುದ್ದಕ್ಕೂ ಗಂಡು, ಕೆಚ್ಚೆದೆಯ ಹೆಣ್ಣಿನಂತೆ ಕಾಣುವ ಕತೆ ಅಂತರಾಳದ ಹೆಣ್ಣಿನ ಪ್ರೀತಿಯ ಅರ್ಧ ಮುಖ ಇದು. ಸಾಫೋಕ್ಲಿಸ್‌ನ ದುರಂತ ನಾಟಕವನ್ನೇ ಜೀನ್‌ ಅನ್ವಿ ತನ್ನ ಕಾಲಕ್ಕೆ ಬಗ್ಗಿಸಿ, ಬದಲಾವಣೆ ಮಾಡಿಕೊಂಡು, ರಚನೆ ಮಾಡಿದ್ದಾನೆ. 

Advertisement

ನಿರ್ದೇಶಕರ ನುಡಿ:
    ಜೀನ್‌ ಅನ್ವಿಯ ಈ ನಾಟಕ ಇವತ್ತಿನ ಸಂದರ್ಭಕ್ಕೆ ತುಂಬಾ ಸೂಕ್ತವೆಂದೆನಿಸಿದೆ. ಜೀನ್‌ ಅನ್ವಿಗೆ ಮೋಲಿಯರ್‌ನ ಪ್ರಭಾವ ಇದೆ ಎಂದು ಸ್ವತಃ ಅವನೇ ಹೇಳಿಕೊಂಡಿದ್ದಾನೆ. ನನ್ನ ರಂಗಭೂಮಿಯ ಬದುಕಿನಲ್ಲಿ ಮೊದಲ ನಾಟಕ ಅಂತಿಗೊನೆಯನ್ನು ನೀನಾಸಂ ತಿರುಗಾಟದ ವಿದ್ಯಾರ್ಥಿಗಳಿಂದ ಮಾಡಿಸಿದ್ದೆ. ಗುರುಗಳಾದ ಕೆ. ಸುಬ್ಬಣ್ಣನವರು ಮೆಚ್ಚಿಕೊಂಡಿದ್ದರು. ಈ ನಾಟಕಕ್ಕೆ ಒಂದು ಶೈಲಿಯನ್ನು, ಹಣೆಪಟ್ಟಿಯನ್ನು ಅಂಟಿಸಲಾಗುವುದಿಲ್ಲ. ಇಲ್ಲಿಯವರೆಗೆ ನನ್ನ ಅನುಭವಕ್ಕೆ ಬಂದ ಹಲವು ಶೈಲಿಗಳನ್ನು ನಾಟಕದ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಸೇರಿಸುತ್ತಾ ಹೋಗಿದ್ದೇನೆ. ನಟರಾಗಲೀ ನಿರ್ದೇಶಕನಾಗಲೀ ಸಾಹಿತ್ಯ ಕೃತಿಯನ್ನು ಕ್ಯಾರೀ ಮಾಡುವ ವಾಹನವಲ್ಲ. ಅವರದ್ದೇ ಸ್ವಂತ ಅನುಭವಗಳನ್ನವರು ರಂಗದ ಮೇಲೆ ಹಂಚಿಕೊಳ್ಳಲು ಸಾಧ್ಯವಾಗಬೇಕು. 

ಎಲ್ಲಿ?: ರಂಗಶಂಕರ, ಜೆ.ಪಿ ನಗರ
ಯಾವಾಗ?: ಜೂನ್‌ 6, ಸಂಜೆ 7.30

Advertisement

Udayavani is now on Telegram. Click here to join our channel and stay updated with the latest news.

Next