ಹೊಸದಿಲ್ಲಿ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ದಿಲ್ಲಿ ಹೈಕೋರ್ಟ್, 1984ರ ಸಿಕ್ಖ ವಿರೋಧಿ ದೊಂಬಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಕನಿಷ್ಠ 88 ಮಂದಿ ದೋಷಿಗಳೆಂದು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
1984ರಲ್ಲಿ ಪೂರ್ವ ದಿಲ್ಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ನಡೆದಿದ್ದ ಸಿಕ್ಖ ವಿರೋಧಿ ದೊಂಬಿಯಲ್ಲಿ 88 ಮಂದಿ ದೋಷಿಗಳೆಂದು ಹೇಳಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದಿಲ್ಲಿ ಹೈಕೋರ್ಟ್ ಎತ್ತಿ ಹಿಡಿದಿರುವುದಾಗಿ ಎಎನ್‌ಐ ವರದಿ ಮಾಡಿದೆ.
1984ರ ಸಿಕ್ಖ ವಿರೋಧಿ ದೊಂಬಿಯಲ್ಲಿ ಕನಿಷ್ಠ 2,800 ಮಂದಿ ಸಿಕ್ಖರು ಹತರಾಗಿದ್ದು ಅವರಲ್ಲಿ 2,100 ಮಂದಿ ದಿಲ್ಲಿಯವರೇ ಆಗಿದ್ದರು.
ಸಿಕ್ಖ ವಿರೋಧಿ ದೊಂಬಿ ಪ್ರಕರಣದಲ್ಲಿ ಅಪರಾಧಿಗಳೆಂದು ಪರಿಗಣಿಸಿದ್ದ ದಿಲ್ಲಿ ವಿಚಾರಣಾ ನ್ಯಾಯಾಲಯ ಕಳೆದ ನವೆಂಬರ್ 20ರಂದು ಯಶ್‌ಪಾಲ್ ಸಿಂಗ್ ಗೆ ಮರಣ ದಂಡನೆ ಮತ್ತು ಇನ್ನೋರ್ವ ಅಪರಾಧಿ ನರೇಶ್ ಶೇರಾವತ್ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು. ಇವರು ಸಿಕ್ಖ ಸಮುದಾಯದ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದರು.