Advertisement

ಕೂಡಿ ಬಾಳಲು ರಾಜಕೀಯವೇ ವಿರೋಧಿ: ನಿಡುಮಾಮಿಡಿ ಶ್ರೀ

12:26 PM May 03, 2017 | |

ಬೆಂಗಳೂರು: ನಕರಾತ್ಮಕ ಸಂಸ್ಕೃತಿ ಮತ್ತು ಏಕಮುಖ ಧರ್ಮ ಪ್ರತಿಪಾದನೆಯಿಂದ ಯಾವುದೇ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯವಿಲ್ಲ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಪ್ರಸ್‌ಕ್ಲಬ್‌ ಸಭಾಂಗಣದಲ್ಲಿ ಮಂಗಳವಾರ ಸ್ಟೂಡೆಂಟ್‌ ಇಸ್ಲಾಮಿಕ್‌ ಆರ್ಗನೈಜೇಷನ್‌ ಆಯೋ­ಜಿಸಿದ್ದ “ಹಲವು ಧರ್ಮಗಳು ಒಂದು ಭಾರತ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಬಹುಪಾಲು ಮಂದಿ ಸಾಮರಸ್ಯ ಬಯಸುತ್ತಿದ್ದಾರೆ. ಹಾಗೆಯೇ ಎಲ್ಲ ಧರ್ಮಗಳು ಕೂಡ ಸ್ನೇಹವನ್ನು ಆಹ್ವಾನಿಸುತ್ತಿವೆ. ಆದರೆ, ರಾಜಕೀಯ ನಾಯಕತ್ವ ಕೂಡಿ ಬಾಳುವುದನ್ನು ವಿರೋಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ರಾಜಕೀಯ ನಾಯಕತ್ವ ಜನರ ನಡುವಿನ ಸಂಬಂಧಗಳನ್ನು ಬೇರ್ಪಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಇದರ ಬಗ್ಗೆ ಜನಜಾಗೃತಿಗೊಳ್ಳಬೇಕು ಎಂದು ಹೇಳಿದರು. ದೇಶದ ಮೂಲ ನಿವಾಸಿಗಳು ಯಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಭಾರತ ಹಿಂದೂ ಧರ್ಮದಿಂದ ಮಾತ್ರ ರೂಪುಗೊಂಡಿದಲ್ಲ. ಆದರೆ, ಇದೊಂದು ಸರ್ವ ಧರ್ಮಗಳ ಒಕ್ಕೂಟ. ವಿಭಿನ್ನ ಸಂಸ್ಕೃತಿಗಳ, ಭಾಷೆಗಳ ಹಾಗೂ ಸಮುದಾಯಗಳ ಚೌಕಟ್ಟು ಎಂದರು.

ಸಮು ದಾಯಗಳೊಡನೆ ಸಾಮರಸ್ಯದ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು. ಇದೇ ವೇಳೆ ಅಭಿಯಾನದ ಲಾಂಛನ ಬಿಡುಗಡೆ ಮಾಡಲಾಯಿತು. ಸಿಎಸ್‌ಐ ಚರ್ಚ್‌ನ ಪಾದ್ರಿ ಮನೋಹರ್‌ ಚಂದ್ರ ಪ್ರಸಾದ್‌ ಮಾತನಾಡಿದರು. ನಗರದ ಜಾಮಿಯಾ ಮಸೀದಿಯ ಮೌಲಾನ ಮಕ್ಸೂದ್‌ ಇಮ್ರಾನ್‌ ರಶಾದಿ, ಶ್ರೀಗುರು ಸಿಂಗ್‌ ಸಭಾದ ಅಧ್ಯಕ್ಷ ಎಸ್‌.ಪರಾಬ್‌ ಜೊತ್‌ ಸಿಂಗ್‌ ಬಾಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next