Advertisement

ಪಾಕ್‌ ವಿರುದ್ಧ ಪಿಒಕೆ ಜನರ ಆಕ್ರೋಶ; ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸಿ ಪ್ರತಿಭಟನೆ

08:41 PM Jan 13, 2023 | Team Udayavani |

ಇಸ್ಲಾಮಾಬಾದ್‌ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಪಾಕಿಸ್ಥಾನಕ್ಕೆ ಈಗ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಅದಕ್ಕೆ ಪೂರಕವಾಗಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸಿ ಪಾಕ್‌ ಮಿಲಿಟರಿ ಹಾಗೂ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದಾರೆ.

Advertisement

ಗಿಲ್ಗಿಟ್ ಹಾಗೂ ಬಾಲ್ಟಿಸ್ಥಾನವನ್ನು ಆಕ್ರಮಿಸಿಕೊಂಡಿರುವ ಪಾಕಿಸ್ಥಾನಕ್ಕೆ ಅಲ್ಲಿನ ಜನರಿಗೆ ಸವಲತ್ತುಗಳನ್ನು ಒದಗಿಸುವ ಸಾಮರ್ಥ್ಯವೂ ಇಲ್ಲ. ಎಲ್ಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಲ್ಲೂ ಸರ್ಕಾರ, ಪಿಒಕೆಗೆ ತಾರತಮ್ಯ ಎಸಗುತ್ತಿದೆ.

ಪಾಕ್‌ ಸರ್ಕಾರ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ, ಅಕ್ರಮವಾಗಿ ನಮ್ಮ ಭೂಮಿಯನ್ನು ಒತ್ತುವರಿ ಮಾಡಲಾಗುತ್ತಿದೆ ಎಂದು ಆರೋಪಿಸಿ 12 ದಿನಗಳಿಂದಲೂ ಗಿಲ್ಗಿಟ್-ಬಾಲ್ಟಿಸ್ಥಾನದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಪಿಒಕೆಯಲ್ಲಿ ಇರುವ ನೈಸರ್ಗಿಕ ಸಂಪನ್ಮೂಲವನ್ನು ಪಾಕ್‌ ಸರ್ಕಾರ ದುರುಪಯೋಆಗ ಮಾಡುತ್ತಿದೆ. ಜತೆಗೆ ದುರಾಡಳಿತದಿಂದ ಜೀವನಕ್ಕೆ ತೊಂದರೆಯಾಗಿದೆ. ಹೀಗಾಗಿ, ಭಾರತದ ಜತೆಗೆ ಗಿಲ್ಗಿಟ್-ಬಾಲ್ಟಿಸ್ಥಾನ ವಿಲೀನಗೊಳ್ಳಲು ಅವಕಾಶ ನೀಡಲೇಬೇಕು ಎಂದು ಸ್ಥಳೀಯರು 12 ದಿನಗಳಿಂದ ಪ್ರತಿಭಟಿಸಿ, ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next