Advertisement

21ರಿಂದ ಹಿಂದಿ ವಿರೋಧಿ ಚಳವಳಿ: ವಾಟಾಳ್‌

02:07 PM Nov 04, 2021 | Team Udayavani |

ಮೈಸೂರು: ಕೇಂದ್ರ ಸರ್ಕಾರ ಹಿಂದಿ ಭಾಷೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.

Advertisement

ಹಿಂದಿ ಭಾಷೆ ವಿರುದ್ಧ ಕರಾಳ ದಿನ ಆಚರಣೆ ಮಾಡಲು ಕನ್ನಡ ಚಳವಳಿ ವಾಟಾಳ್‌ ಪಕ್ಷ ಮುಂದಾಗಿದ್ದು, ನವೆಂಬರ್‌ 21ರಿಂದ ಹಿಂದಿ ವಿರೋಧಿ ಚಳವಳಿ ನಡೆಸಲು ಸಿದ್ಧತೆ ನಡೆಸಿದ್ದು, ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ನಡೆಸಲಾಗುತ್ತೆ. ಹೋರಾಟಕ್ಕೆ ಕರ್ನಾಟಕದ ಜನರು ಬೆಂಬಲ ನೀಡುವಂತೆ ಕರೆ ನೀಡಿದರು. ಬ್ಯಾಂಕ್‌ಗಳಲ್ಲಿ ಹಿಂದಿ ಬರಹದ ಚೆಕ್‌ ಕೊಡುತ್ತಾರೆ. ಬ್ಯಾಂಕ್‌ಗಳಿಗೆ ಕನ್ನಡಿಗರ ಹಣ ಬೇಕು.

ಇದನ್ನೂ ಓದಿ;- ನಮ್ಮ ಯೋಧರು ಭಾರತ ಮಾತೆಯನ್ನು ರಕ್ಷಿಸುವ ಸುರಕ್ಷಾ ಕವಚಗಳು: ಪ್ರಧಾನಿ ಮೋದಿ

ಆದರೆ, ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್‌ ಗಳಿಗೆ ನುಗ್ಗುತೇವೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದ ಸಂಸದರು ಹಿಂದಿಯ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು. ಹಿಂದಿಯ ವಿರುದ್ಧ ಇಡೀ ರಾಜ್ಯ ಒಂದಾಗಬೇಕಾಗಿದೆ. ಹಿಂದಿ ಹೇರಿಕೆಯಿಂದ ಕನ್ನಡ ಬೆಳೆಯಲ್ಲ, ಕನ್ನಡಕ್ಕೆ ಅವಮಾನ ಆಗುತ್ತದೆ. ರಾಜ್ಯದಲ್ಲಿ ಗುಜರಾತಿ, ತಮಿಳು, ಮಲಯಾಳಿಗಳು ತಿಂದು ತೇಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿ ಪ್ರಬಲ ಆಗಿ ಕನ್ನಡಕ್ಕೆ ಅಪಾಯ ಆಗುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಹೇರಿಕೆ ವಿರುದ್ಧ ಕ್ರಿಯಾ ಸಮಿತಿ ರಚನೆ ಮಾಡುತ್ತೇವೆ.

ರಾಜ್ಯದಲ್ಲಿ ಹಿಂದಿ ಹೇರಿಕೆಯಲ್ಲಿ ಬಿಜೆಪಿ, ಆರೆಸ್ಸೆಸ್‌ ಪಾತ್ರ ಇದೆ. ಸರ್ಕಾರಿ ಸಮಾರಂಭ ಕನ್ನಡದಲ್ಲಿ ನಡೆಯಬೇಕು. ಕನ್ನಡ ಬಿಟ್ಟು ಯಾವುದೇ ಸಮಾರಂಭ ನಡೆಸಿದರೆ ನಾವು ನುಗ್ಗುತ್ತೇವೆ ಎಂದು ಹೇಳಿದರು. ಉಪಚುನಾವಣೆ ಫ‌ಲಿತಾಂಶದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಚುನಾವಣೆ ಸಿಎಂ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಇದರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಅಪಾಯ ಇಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಸಂಬಳ ಕೇವಲ ಒಂದು ಸಾವಿರ ಇದೆ. ಇದು ನಿಜಕ್ಕೂ ಅಗೌರವ ಕನಿಷ್ಠ ಸಂಬಳ 5 ಸಾವಿರ ನೀಡಬೇಕು. ಗ್ರಾಮ ಪಂಚಾಯಿತಿಗಳಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next