Advertisement

ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ

06:36 AM May 30, 2020 | Suhan S |

ಶಿರಸಿ: ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಪ್ರಬಲವಾಗಿ ರೂಪಿಸಬೇಕು. ಯಾರೇ ಪಕ್ಷಾಂತರ ಮಾಡಿದರೂ ಎರಡು ಚುನಾವಣೆಗೆ ನಿಲ್ಲದಂತೆ ಆಗಬೇಕು ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಹೇಳಿದರು.

Advertisement

ಪಕ್ಷದ ಪ್ರಮುಖರ ಸಭೆ ನಡೆಸಿದ ಬಳಿಕ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕರಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಬಿಜೆಪಿ ಆಂತರಿಕ ಸಂಗತಿ ಅವರ ಪಕ್ಷದ್ದು. ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರ ಅಸ್ತಿರವಾದರೂ ಕಾಂಗ್ರೆಸ್‌ ಮರಳಿ ಚುನಾವಣೆಗೆ ಹೋಗುತ್ತದೆಯೇ ಹೊರತು ಸರಕಾರ ರಚನೆ ಮಾಡುವುದಿಲ್ಲ. ಅಷ್ಟು ಹಣ ಕೂಡ ನಮ್ಮಲ್ಲಿ ಇಲ್ಲ ಎಂದು ಹೇಳಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಎಲ್ಲ ಪಕ್ಷದವರೂ ಕೂಡಿ ಹೋರಾಟ ಮಾಡಿದರೆ ಸರಕಾರಗಳ ಗಮನ ಸೆಳೆಯಲು ಸಾಧ್ಯ ಎಂದ ಅವರು, ಕೋವಿಡ್ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವನ್ನು ಸರಕಾರ ಘೋಷಿಸಿದೆ. ಅದನ್ನು ಕೂಡಲೇ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಗ್ರಾಪಂಗೆ ಸಮಿತಿ ರಚಿಸಲು ಸರಕಾರ ತಯಾರಿ ನಡೆಸಿದೆ. ಇಂತಹ ಕಾರ್ಯಕ್ಕೆ ಮುಂದಾದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದೂ ಹೇಳಿದರು.

ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಸುಷ್ಮಾ ರಾಜಗೋಪಾಲರೆಡ್ಡಿ, ಸಂತೋಷ ಶೆಟ್ಟಿ, ಎಸ್‌.ಕೆ. ಭಾಗÌತ, ಜಗದೀಶ ಗೌಡ, ದೀಪಕ ದೊಡೂxರು ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next