Advertisement

ಲಕ್ಷಾಂತರ ಹಣದೊಂದಿಗೆ ಎಸಿಬಿ ಬಲೆಗೆ ಬಿದ್ದ ಜಲಮಂಡಳಿ ಅಧಿಕಾರಿಗಳು

09:56 AM Mar 14, 2020 | Sriram |

ವಿಜಯಪುರ : ಗುತ್ತಿಗೆದಾರರಿಗೆ ಕಾರ್ಮಿಕರ ಬಿಲ್ ಪಾವತಿಗಾಗಿ‌ ಲಂಚ ಪಡೆಯುತ್ತಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಬ್ಬರು ಅಧಿಕಾರಿಗಳು ಲಕ್ಷಾಂತರ ಹಣದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಾರೆ.

Advertisement

ಕಾರ್ಮಿಕರನ್ನು ಒದಗಿಸಿದ ಲಕ್ಷಿ ಎಂಟರ್ಪ್ರೈಸ್ ನ ಅಶೋಕ ರಾಮಪ್ಪ ಪಾಟೀಲ ಇವರು ವಿಜಯಪುರ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಗುತ್ತಿಗೆ ಕಾರ್ಮಿಕರನ್ನು ಒದಗಿಸಿದ್ದರು. ಇದಕ್ಕಾಗಿ ಮಂಡಳಿಯಿಂದ ತನಗೆ ಬರಬೇಕಿದ್ದ ಬಾಕಿ ಬಿಲ್ ಕೊಡಲು ತೋರಿದ್ದರು. ಆದರೆ ವಿಜಯಪುರ ಜಲ ಮಂಡಳಿ ಕಛೇರಿಯ ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ, ಎಇಇ ಜೆ.ಎಸ್. ಸಾಲಿಮಠ ಇವರು ಲಂಚಕ್ಕೆ ಬೇಡಿಕೆ ಇರಿಸಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಅಶೋಕ ಪಾಟೀಲ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಾರ್ಮಿಕರನ್ನು ಗುತ್ತಿಗೆಗೆ ನೀಡುವ ಟೆಂಡರನ್ನು ಪಡೆದುಕೊಂಡಿದ್ದರು. ಇದಕ್ಕಾಗಿ ಫೆಬ್ರವರಿ 2020 ನೇ ತಿಂಗಳಲ್ಲಿ ಕಾರ್ಮಿಕರನ್ನು ಪೂರೈಸಿದ ಬಿಲ್ 50 ಲಕ್ಷ ರೂ. ಚೆಕ್ ನೀಡಲು ಮಂಡಳಿಯ ಲೆಕ್ಕ ಅಧೀಕ್ಷಕ ಎಂ.ಎಸ್ ಮದ್ದಾನಿಮಠ ಎಂಬುವವರು ರೂ.50 ಸಾವಿರ ಹಣದ ಲಂಚಕ್ಕೆ ಬೇಡಿಕೆ ಇಟ್ಟು, ಬಿಲ್ ಪಾವತಿಸದೆ ಬಾಕಿ ಇರಿಸಿಕೊಂಡಿದ್ದರು. ಕಾರ್ಮಿಕರನ್ನು ಪೂರೈಸಿದ ಬಿಲ್ ಮಂಜೂರು ಮಾಡಿದ ಎಇಇ ಜೆ.ಎಸ್ ಸಾಲಿಮಠ 20 ಸಾವಿರ ರೂ. ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದ.

ಈ ದೂರಿನ ಅನ್ವಯ ಎಸಿಬಿ ಬೆಳಗಾವಿ ವಲಯದ ಅಧೀಕ್ಷಕ ಬಿ.ಎಸ್ ನೇಮಗೌಡ, ಮಾರ್ಗದರ್ಶನದಲ್ಲಿ ಡಿಎಸ್ಪಿ ಎಲ್ ವೇಣುಗೋಪಾಲ ನೇತೃತ್ತವದಲ್ಲಿ ಎಸಿಬಿ ಪೊಲೀಸ್ ನಿರೀಕ್ಷಕರಾದ ಹರೀಶ್ಚಂದ್ರ, ಎಸ್.ಆರ್. ಗಣಾಚಾರಿ ಹಾಗೂ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಠಾಣೆ ಸಿಬ್ಬಂದಿ ಮಹೇಶ ಪೂಜಾರಿ, ಸುರೇಶ ಜಾಲಗೇರಿ, ಅಶೋಕ ಸಿಂಧೂರ, ಈರಣ್ಣ ಕನ್ನೂರ, ಮದನಸಿಂಗ್ ರಜಪೂತ ಹಾಗೂ ಚಾಲಕರು ಆರೋಪಿ ಅಧಿಕಾರಿಗಳು ಲಂಚದ ಹಣ ಪಡೆಯುತ್ತಿದ್ದಾಗಲೇ ದಾಳಿ ನಡೆಸಿ, ಇಬ್ಬರೂ ಆರೋಪಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಲಂಚ ಪಡೆದ 70 ಸಾವಿರ ರೂ. ಹಾಗೂ ಅವರ ವಶದಲ್ಲಿದ್ದ ಲೆಕ್ಕ ನೀಡಲಾಗದ 1,04,300 ರೂ. ಸೇರಿ ಒಟ್ಟು 1,74,300 ರೂ.ಗಳನ್ನು ಜಪ್ತ ಮಾಡಿದ್ದು, ತನಿಖೆ ಮುಂದುವರೆಸಿದ್ದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next