Advertisement

ಬಿಗಿ ಬಂದೋಬಸ್ತ್; 3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

09:24 AM Jan 16, 2020 | Team Udayavani |

ಮಂಗಳೂರು: ಬೃಹತ್‌ ಸಮಾವೇಶ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಂದೋಬಸ್ತ್ಗಾಗಿ 3 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. 8 ಮಂದಿ ಎಸ್‌ಪಿ, 12 ಮಂದಿ ಎಎಸ್‌ಪಿ, 40 ಮಂದಿ ಡಿಎಸ್‌ಪಿ, 9 ಇನ್‌ಸ್ಪೆಕ್ಟರ್‌, 200 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು, 300 ಎಎಸ್‌ಐಗಳು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ರ್ಯಾಪಿಡ್‌ ಇಂಟರ್‌ವೆನ್ಶನ್‌ ವಾಹನ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ
ಕೊಳ್ಳಲಾಗಿದೆ. ಸಮಾವೇಶ ನಡೆಯುವ ಮೈದಾನ ಮತ್ತು ಸುತ್ತಲಿನ ಪ್ರದೇಶದಲ್ಲಿಯೇ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

ನಗರದ ಆಯಕಟ್ಟಿನ ಪ್ರದೇಶಗಳಲ್ಲಿಯೂ ಭದ್ರತೆ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಡಿಜಿಪಿ ಭೇಟಿ
ಮಂಗಳವಾರ ಸಂಜೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಜತೆಗಿದ್ದರು.
ಬುಧವಾರ ಸಂಜೆ 6 ಗಂಟೆಯ ವರೆಗೆ ಸಮಾವೇಶ ನಡೆಸಲು ಪರವಾನಿಗೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಮುಗಿಸುವುದಾಗಿ ಆಯೋಜಕರು ಭರವಸೆ ನೀಡಿದ್ದಾರೆ. ಆಯೋಜಕರ ಜತೆ ಎಲ್ಲ ವಿಚಾರಗಳನ್ನು ಚರ್ಚಿಸಿ ನಿಬಂಧನೆಗಳನ್ನು ತಿಳಿಸಿದ್ದು, ಅವರು ಒಪ್ಪಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸಮಾವೇಶ ನಡೆಸುವ ಭರವಸೆ ಕೊಟ್ಟಿದ್ದಾರೆ. ರಾ.ಹೆ.ಯಲ್ಲಿ ಎಂಆರ್‌ಪಿಎಲ್‌, ಎನ್‌ಎಂಪಿಟಿಯ ಟ್ಯಾಂಕರ್‌ಗಳ ಓಡಾಟವನ್ನು ಬುಧವಾರ ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿಷೇಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಭೆ
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮಂಗಳವಾರ ಸಭೆ ನಡೆಸಿದರು. ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ, ಅಗ್ನಿಶಾಮಕ, ಆ್ಯಂಬುಲೆನ್ಸ್‌ ಸೇರಿದಂತೆ ಅಗತ್ಯ ತುರ್ತು ವಾಹನಗಳನ್ನು ನಿಯೋಜಿಸಲು ಸೂಚಿಸಿದರು.

ವಾಹನ ಸಂಚಾರ ಮಾರ್ಪಾಟು
ಸಮಾವೇಶ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೆ ವಾಹನಗಳ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.
– ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ- ಶಿರಾಡಿ ಘಾಟಿ ರಸ್ತೆಯಾಗಿ ಸಂಚರಿಸಬೇಕು.

Advertisement

– ಬೆಂಗಳೂರಿನಿಂದ ಮಂಗಳೂರಿಗೆ ಮೆಲ್ಕಾರ್‌-ಬಿ.ಸಿ. ರೋಡ್‌ ವಯಾ ಕೊಣಾಜೆ- ತೊಕ್ಕೊಟ್ಟು-ಮಂಗಳೂರು ರಸ್ತೆಯಾಗಿ ಸಂಚರಿಸಬೇಕು.

– ಮಂಗಳೂರಿನಿಂದ ಬೆಂಗಳೂರು ಕಡೆಗೆ ನಂತೂರು-ಪಂಪ್‌ವೆಲ್‌- ತೊಕ್ಕೊಟ್ಟು-ಕೊಣಾಜೆ- ಬಿ.ಸಿ.ರೋಡ್‌ ಮಾರ್ಗವಾಗಿ ಸಂಚರಿಸಬೇಕು.

– ಬಿ.ಸಿ. ರೋಡ್‌ನಿಂದ ಮಂಗಳೂರು ಕಡೆಗೆ ಪೊಳಲಿ ಕೈಕಂಬ ಮಾರ್ಗದಲ್ಲಿ ಸಂಚರಿಸಬೇಕು.

 ವಾಹನ ಪಾರ್ಕಿಂಗ್‌ ಸ್ಥಳ
– ಮಂಗಳೂರಿನಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸು ವವರಿಗೆ ಜಾಗ್ವಾರ್‌ ಶೋರೂಂ ಎದುರಿನ ಮೈದಾನ.

– ಮಂಗಳೂರಿನಿಂದ ಬರುವ ಎಲ್ಲ ಕಾರು ಮತ್ತು ಇತರ ಚತಷcಕ್ರ ವಾಹನಗಳಿಗೆ ಸೀಝರ್‌ ಬೀಡಿ ಮೈದಾನ.

– ಮಂಗಳೂರು ಮತ್ತು ಬಿ.ಸಿ. ರೋಡ್‌ ಕಡೆಯಿಂದ ಬರುವ ಬಸ್‌ಗಳಿಗೆ ಮೋತಿಶ್ಯಾಂ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಂಬ್ಳಿ ಪಾರ್ಕಿಂಗ್‌ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ಎಲ್ಲ ಕಾರು ಮತ್ತು ಇತರ ಚತುಷcಕ್ರ ವಾಹನಗಳಿಗೆ ಅಡ್ಯಾರ್‌ ಕಟ್ಟೆ ಜುಮ್ಮಾ ಮಸೀದಿ ಮೈದಾನ.

– ಎಲ್ಲ ಪೊಲೀಸ್‌-ತುರ್ತು ಸೇವೆಗಳ ವಾಹನಗಳಿಗೆ ವೆಲ್‌ರಿಂಗ್‌ ಪಾರ್ಕಿಂಗ್‌ ಮತ್ತು ಶಂಕರ್‌ ವಿಠಲ್‌ ಪಾರ್ಕಿಂಗ್‌ ಸ್ಥಳ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಹಮೀದ್‌Õ ಮೈದಾನ.

– ಬಿ.ಸಿ.ರೋಡ್‌ ಕಡೆಯಿಂದ ಬರುವ ಕಾರು, ಇತರ ಚತುಷcಕ್ರ ವಾಹನಗಳಿಗೆ ಡಾ| ಶ್ಯಾಮ್ಸ್‌ ಮೈದಾನ.

– ಬಿ.ಸಿ. ರೋಡ್‌, ಫ‌ರಂಗಿಪೇಟೆ ಕಡೆಯಿಂದ ಬರುವ ಬಸ್‌ಗಳಿಗೆ ಹೆರಿಟೇಜ್‌ ಮೈದಾನ.

– ಅಡ್ಯಾರ್‌ ಗಾರ್ಡನ್‌ ತುರ್ತು ಪಾರ್ಕಿಂಗ್‌ಗೆ ಮೀಸಲು.

Advertisement

Udayavani is now on Telegram. Click here to join our channel and stay updated with the latest news.

Next